ಚೀನದ ಮೂಗುದಾರ ಬಿಗಿ ; ನೆರೆದೇಶದ 371 ವಸ್ತುಗಳ ಗುಣಮಟ್ಟ ಪರೀಕ್ಷೆ ಕಡ್ಡಾಯ


Team Udayavani, Jul 29, 2020, 7:00 AM IST

ಚೀನದ ಮೂಗುದಾರ ಬಿಗಿ ; ನೆರೆದೇಶದ 371 ವಸ್ತುಗಳ ಗುಣಮಟ್ಟ ಪರೀಕ್ಷೆ ಕಡ್ಡಾಯ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಚೀನದಿಂದ ಆಮದಾಗುವ ವಸ್ತುಗಳ ಮೇಲಣ ನಿಗಾ ಹೆಚ್ಚಿಸುವ ಮೂಲಕ ಕಮ್ಯೂನಿಸ್ಟ್‌ ದೇಶಕ್ಕೆ ಈಗಾಗಲೇ ತೊಡಿಸಿರುವ ಮೂಗುದಾರವನ್ನು ಇನ್ನಷ್ಟು ಬಿಗಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.

ಇನ್ನು ಮುಂದೆ ಚೀನದಿಂದ ಆಮದಾಗುವ ರಬ್ಬರ್‌ ಅಥವಾ ಪ್ಲಾಸ್ಟಿಕ್‌ ಬೊಂಬೆಗಳು, ಉಕ್ಕಿನ ಪಟ್ಟಿಗಳು, ದೂರವಾಣಿ ಸಲಕರಣೆಗಳು, ದೈತ್ಯ ಯಂತ್ರೋಪಕರಣ, ಪೇಪರ್‌ ವಸ್ತುಗಳು, ಗಾಜಿನ ಸಾಮಗ್ರಿಗಳ ಸಹಿತ ಸುಮಾರು 371 ವಸ್ತುಗಳ ಗುಣಮಟ್ಟ ಭಾರತೀಯ ಮಾನದಂಡಗಳಿಗೆ (ಐಎಸ್‌) ಅನುಗುಣವಾಗಿರಬೇಕೆಂಬ ನಿಯಮವನ್ನು ಮುಂದಿನ ಮಾರ್ಚ್‌ನಿಂದ ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಮೂಲಕ ಭಾರತೀಯ ಸಣ್ಣ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಚೀನ ಹೊಂದಿರುವ ಹಿಡಿತವನ್ನು ತಪ್ಪಿಸುವ ಪ್ರಯತ್ನಕ್ಕೆ ಕೈಯಿಕ್ಕಿದೆ.

ಕೇಂದ್ರ ವಾಣಿಜ್ಯ ಸಚಿವಾಲಯವು ಕಳೆದ ವರ್ಷವೇ ಚೀನ ಮತ್ತು ಇನ್ನಿತರ ದೇಶಗಳಿಂದ ಆಮದಾಗುತ್ತಿದ್ದ ಸುಮಾರು 371 ವಸ್ತುಗಳನ್ನು ಪಟ್ಟಿ ಮಾಡಿದ್ದು, ಅವುಗಳ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ಉತ್ತಮ ಗುಣಮಟ್ಟದ ವಸ್ತುಗಳು ಮಾತ್ರ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಬೇಕೆಂದು ನಿರ್ಧರಿಸಿದೆ. ಇತ್ತೀಚೆಗೆ ರೂಪಿತವಾಗಿರುವ ಆತ್ಮನಿರ್ಭರ ಭಾರತ ನಿರ್ಮಾಣ ಪರಿಕಲ್ಪನೆಯಡಿ ಇಂಥ ಸಾಮಗ್ರಿಗಳನ್ನು ಭಾರತದಲ್ಲೇ ಉತ್ಪಾದಿಸಲು ಆದ್ಯತೆ ನೀಡಲಾಗುತ್ತಿದೆ.

ಚೀನ ಮತ್ತು ಇನ್ನಿತರ ರಾಷ್ಟ್ರಗಳಿಂದ ಬರುವ ಸಾಮಗ್ರಿಗಳು ನವಿ ಮುಂಬಯಿಯ ಜವಾಹರ ಲಾಲ್‌ ನೆಹರೂ ಬಂದರು, ಗುಜರಾತ್‌ನ ಕಛ್ ಜಿಲ್ಲೆಯ ಕಾಂಡ್ಲಾ ಬಂದರುಗಳ ಮೂಲಕವೇ ಭಾರತಕ್ಕೆ ಬರುತ್ತವೆ. ಹಾಗಾಗಿ ಮುಂದಿನ ಮಾರ್ಚ್‌ನಿಂದ ಅಧಿಕಾರಿಗಳನ್ನು ಆ ಬಂದರುಗಳಲ್ಲಿ ನಿಯೋಜಿಸಿ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಬ್ಯೂರೋ ಆಫ್ ಇಂಡಿಯನ್‌ ಸ್ಟ್ಯಾಡರ್ಡ್ಸ್‌ (ಬಿಐಎಸ್‌) ಮಹಾ ನಿರ್ದೇಶಕ ಪ್ರಮೋದ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಲಡಾಖ್‌ ಪರಿಸ್ಥಿತಿ ಬದಲಿಸಲಿದೆ ಚಳಿಗಾಲ
ಹಲವಾರು ಸುತ್ತಿನ ಮಾತುಕತೆಗಳ ಅನಂತರವೂ ಲಡಾಖ್‌ನಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಸಂಪೂರ್ಣ ಉಪಶಮನವಾಗಿಲ್ಲ. ಆದರೆ ಮುಂಬರುವ ಚಳಿಗಾಲ ಅಲ್ಲಿನ ಭೌಗೋಳಿಕ ಸ್ಥಿತಿಗತಿಯ ಜತೆಗೆ ರಾಜಕೀಯ ಚಿತ್ರಣವನ್ನೂ ಬದಲಾಯಿಸಲಿದೆ ಎನ್ನಲಾಗಿದೆ. ಸಮುದ್ರ ಮಟ್ಟಕ್ಕಿಂತ 16 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಅಲ್ಲಿ ಮುಂದಿನ ತಿಂಗಳಿನಿಂದ ಚಳಿ ತೀವ್ರವಾಗಲಿದೆ.

ಈಗಾಗಲೇ ಲಡಾಖ್‌ ಮತ್ತು ಸುತ್ತಲಿನ ನದಿ, ಸರೋವರಗಳು ಹೆಪ್ಪುಗಟ್ಟಲಾರಂಭಿಸಿವೆ. ಮುಂದಿನ ತಿಂಗಳು ಹಿಮಪಾತ ಕೂಡ ಅತ್ಯಧಿಕವಾಗಲಿದೆ. ಈಗಾಗಲೇ ಅಲ್ಲಿರುವ ಸೈನಿಕರು ಆಮ್ಲಜನಕದ ಕೊರತೆ (ಹೈಪೋಕ್ಸಿಯಾ) ಮತ್ತು ಅತಿ ಶೀತ (ಹೈಪೋಥರ್ಮಿಯಾ) ಬಾಧೆಗಳಿಗೆ ತುತ್ತಾಗಿದ್ದಾರೆ. ಚಳಿಗಾಲ ಇದನ್ನು ಇನ್ನೂ ತೀವ್ರವಾಗಿಸಲಿದೆ.

ಸೋರ್ಸ್‌ ಕೋಡ್‌ ಕಡ್ಡಾಯ?
ಭಾರತೀಯ ದೂರವಾಣಿ ಕ್ಷೇತ್ರದ ಖಾಸಗಿ ಕಂಪೆನಿಗಳು ದೂರವಾಣಿ ಪರಿಕರಗಳನ್ನು ಚೀನದಿಂದ ಆಮದು ಮಾಡಿಕೊಳ್ಳುವುದಕ್ಕೆ ಕೂಡ ಕಡಿವಾಣ ಹಾಕಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ವಿದೇಶಗಳಿಂದ ಆಮದಾಗುವ ದೂರವಾಣಿ ಪರಿಕರಗಳಿಗೆ ಮ್ಯಾಂಡೇಟರಿ ಟೆಸ್ಟಿಂಗ್‌ ಆ್ಯಂಡ್‌ ಸರ್ಟಿಫಿಕೇಶನ್‌ ಆಫ್ ಟೆಲಿಕಾಂ ಇಕ್ವಿಪ್‌ಮೆಂಟ್‌ (ಎಂಟಿಸಿಟಿಇ) ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.

ಈ ನಿಯಮ ಜಾರಿಯಾದರೆ ಭಾರತದ ಖಾಸಗಿ ದೂರವಾಣಿ ಕಂಪೆನಿಗಳು ಆಮದು ಸಾಮಗ್ರಿಗಳ ಸೋರ್ಸ್‌ ಕೋಡ್ ಗಳನ್ನು ಸರಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಜತೆಗೆ ಆ ಸಾಮಗ್ರಿಗಳನ್ನು ಥರ್ಡ್‌ ಪಾರ್ಟಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೊಳಪಡಿಸಿ, ಮೂಲ, ಗುಣಮಟ್ಟ ಸಾಬೀತಾದ ಅನಂತರವಷ್ಟೇ ಆಮದು ಮಾಡಿಕೊಳ್ಳಲು ಅನುಮತಿ ಸಿಗುತ್ತದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-google-MPa

Google;ಗೂಗಲ್‌ ಮ್ಯಾಪ್‌ ಜತೆ ಮಾತಾಡುತ್ತಾ ಡ್ರೈವ್‌ ಮಾಡಬಹುದು

Google

Russian Court; ಗೂಗಲ್‌ಗೆ 20 ಡೆಸಿಲಿಯನ್‌ ದಂಡ

sens-2

Deepavali; ಮುಹೂರ್ತ ಟ್ರೇಡಿಂಗ್‌ನಲ್ಲಿ 448 ಅಂಕ ಏರಿದ ಸೆನ್ಸೆಕ್ಸ್‌

ದೀಪಾವಳಿ: ಬೆಂಗಳೂರು- ಮಡಗಾಂವ್‌‌ ನಡುವೆ ವಿಶೇಷ ರೈಲು ಸಂಚಾರ

ದೀಪಾವಳಿ: ಬೆಂಗಳೂರು- ಮಡಗಾಂವ್‌‌ ನಡುವೆ ವಿಶೇಷ ರೈಲು ಸಂಚಾರ

30% increase in export of manufactured iPhones in the country

iPhone: ದೇಶದಲ್ಲಿ ಸಿದ್ಧಗೊಂಡ ಐಫೋನ್‌ ರಫ್ತು ಶೇ.30ರಷ್ಟು ಹೆಚ್ಚಳ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.