ಮುಂಬಯಿ ಶೇರು 173 ಅಂಕಗಳ ಏರಿಕೆ, ಹೊಸ ಭರವಸೆ
Team Udayavani, Jan 10, 2017, 4:43 PM IST
ಮುಂಬಯಿ : ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಉತ್ತಮ ದೃಢತೆಯನ್ನು ಕಂಡುಕೊಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 173.01 ಅಂಕಗಳ ಮುನ್ನಡೆಯೊಂದಿಗೆ 26,899.56 ಅಂಕಗಳ ಮಟ್ಟವನ್ನು ತಲುಪಿ ಹೊಸ ಭರವಸೆಗೆ ನಾಂದಿ ಹಾಡಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 52.55 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನ್ನು 8,288.60 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿದೆ.
ಇಂದು ಮುಂಬಯಿ ಶೇರು ಪೇಟೆಯ ಮುನ್ನಡೆ ಕಾರಣವಾದದ್ದು ಬ್ಯಾಂಕ್ ಮತ್ತು ಆಟೋ ಶೇರುಗಳು. ದಿನದ ವಹಿವಾಟಿನ ಅಂತ್ಯದಲ್ಲಿ ಶೇರು ಮಾರುಕಟ್ಟೆಯ ಹರಹು ಉತ್ತಮ ಮುನ್ನಡೆಯನ್ನು ದಾಖಲಿಸಿತು. ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ.0.7ರಿಂದ ಶೇ.08ರಷ್ಟು ಏರಿದವು. ಹಿಂಡಾಲ್ಕೊ ಮತ್ತು ಟಾಟಾ ಮೋಟರ್ ಶೇರುಗಳು ಶೇ.3ರಿಂದ 4ರಷ್ಟು ಏರಿದವು.
ನಿಫ್ಟಿಯಲ್ಲಿ ಇಂದು ಹಿಂಡಾಲ್ಕೋ, ಅದಾನಿ ಪೋರ್ಟ್, ಟಾಟಾ ಮೋಟರ್, ಟಾಟಾ ಸ್ಟೀಲ್ ಉತ್ತಮ ಮುನ್ನಡೆಯನ್ನು ಕಂಡವು. ಬಿಎಸ್ಇ ಮಿಡ್ ಕ್ಯಾಪ್ನಲ್ಲಿ ಎಬಿಬಿ ಇಂಡಿಯಾ, ನ್ಯಾಲ್ಕೋ, ಎಂಆರ್ಪಿಎಲ್, ಭಾರತ್ ಇಲೆಕ್ಟ್ರಿಕಲ್, ಎಆರ್ಎಫ್ ಶೇರುಗಳ ಧಾರಣೆ ಗಮನಾರ್ಹವಾಗಿ ಏರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.