ಜಾಗತಿಕ ಸ್ಥಿರತೆ: ಮುನ್ನಡೆ ಕಂಡ ಮುಂಬಯಿ ಶೇರು ಪೇಟೆ
Team Udayavani, Jan 4, 2017, 12:03 PM IST
ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿನ ಸ್ಥಿರತೆಯನ್ನು ಅನುಸರಿಸಿ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 58 ಅಂಕಗಳ ಮುನ್ನಡೆಯನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಇಳಿಕೆಯ ಹಾದಿಯನ್ನು ಹಿಡಿದು 10.36 ಅಂಕಗಳ ಏರಿಕೆಯೊಂದಿಗೆ 26,653.60 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 4.90 ಅಂಕಗಳ ಏರಿಕೆಯನ್ನು ದಾಖಲಿಸಿ 8,197.15 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿದೆ.
ಇಂದಿನ ವಹಿವಾಟಿನಲ್ಲಿ ಆಟೋ, ಮೆಟಲ್, ಇನ್‌ಫ್ರಾ ಶೇರುಗಳು ಉತ್ತಮ ಬೇಡಿಕೆಯನ್ನು ಕಂಡಿರುವುದು ಗಮನಾರ್ಹವಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಜಪಾನಿನ ನಿಕ್ಕಿ ಶೇ.2.17, ಶಾಂಘೈ ಸೂಚ್ಯಂಕ ಶೇ.0.20 ಏರಿಕೆಯನ್ನು ಕಂಡಿವೆಯಾದರೆ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.10ರ ಕುಸಿತವನ್ನು ಕಂಡಿದೆ. ಅಮೆರಿಕದ ಡೋವ್ ಜೋನ್ಸ್ ಸೂಚ್ಯಂಕ ನಿನ್ನೆ ಶೇ.0.60 ಏರಿಕೆಯನ್ನು ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.