ಮುಂಬಯಿ ಶೇರು ಪೇಟೆ 267 ಅಂಕ ಅಚ್ಚರಿ ಜಿಗಿತ. 9,200 ದಾಟಿದ ನಿಫ್ಟಿ
Team Udayavani, Apr 18, 2017, 11:19 AM IST
ಮುಂಬಯಿ : ಸಾಗರೋತ್ತರ ಶೇರುಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿಬಂದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 267 ಅಂಕಗಳ ಅದ್ಭುತ ಜಿಗಿತವನ್ನು ದಾಖಲಿಸಿ ಅಚ್ಚರಿ ಉಂಟುಮಾಡಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದಿನ ಆರಂಭಿಕ ವಹಿವಾಟಿನಲ್ಲಿ 9,200 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿತು.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 249.24 ಅಂಕಗಳ ಏರಿಕೆಯೊಂದಿಗೆ 29,662.90 ಅಂಕಗಳ ಮಟ್ಟದಲ್ಲೂ, ನಿಫ್ಟಿ 70.75 ಅಂಕಗಳ ಏರಿಕೆಯೊಂದಿಗೆ 9,210.05 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಐಸಿಐಸಿಐ ಬ್ಯಾಂಕ್ , ರಿಲಯನ್ಸ್, ಹಿಂಡಾಲ್ಕೊ, ಅದಾನಿ ಪೋರ್ಟ್ ಮತ್ತು ಎಸ್ಬಿಐ.
ಟಾಪ್ ಗೇನರ್ಗಳು : ಹಿಂಡಾಲ್ಕೊ, ಅದಾನಿ ಪೋರ್ಟ್, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಎನ್ಟಿಪಿಸಿ.
ಟಾಪ್ ಲೂಸರ್ಗಳು : ಕೋಲ್ ಇಂಡಿಯಾ, ಭಾರ್ತಿ ಏರ್ಟೆಲ್, ಮಹಿಂದ್ರ, ಸನ್ ಫಾರ್ಮಾ, ಕೋಟಕ್ ಮಹಿಂದ್ರ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಇಂದು ಜಪಾನಿನ ನಿಕ್ಕಿ ಶೇ.0.23, ಹಾಂಕಾಂಗ್ನ ಹ್ಯಾಂಗ್ಸೆಂಗ್ ಶೇ.0.96 ಹಾಗೂ ಶಾಂಘೈ ಕಾಪೋಸಿಟ್ ಇಂಡೆಕ್ಸ್ ಶೆ.0.12ರಷ್ಟು ಕುಸಿದವು. ಅಮೆರಿಕದ ಡೋವ್ ಜೋನ್ಸ್ ನಿನ್ನೆಯ ವಹಿವಾಟನ್ನು ಶೇ.0.90ರಷ್ಟು ಏರಿಕೆಯೊಂದಿಗೆ ಕೊನೆಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.