ಈಗ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮೊದಲು; IRCTCಗೆ ಹಣ ಪಾವತಿ ಅನಂತರ
Team Udayavani, Aug 3, 2017, 11:42 AM IST
ಹೊಸದಿಲ್ಲಿ : ಕೊನೇ ಕ್ಷಣದಲ್ಲಿ ರೈಲು ಟಿಕೆಟ್ ಬುಕ್ ಮಾಡುವುದು ಈಗ ಇನ್ನೂ ಸುಲಭವಾಗಿದೆ. ಕೊನೇ ಕ್ಷಣದ ರೈಲು ಪ್ರಯಾಣಿಕರು ಈಗಿನ್ನು ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ (IRCTC) ವೆಬ್‌ಸೈಟಿನಲ್ಲಿ ತತ್ಕಾಲ್ ಕೋಟಾ ದಡಿ ಟಿಕೆಟ್ ಬುಕ್ ಮಾಡಿ ಹಣವನ್ನು ಅನಂತರ ಪಾವತಿಸಬಹುದಾಗಿದೆ.
ಈ ತನಕ ಈ ಸೇವೆಯು ಜನರಲ್ ರಿಸರ್ವೇಶನ್‌ಗೆ ಮಾತ್ರವೇ ಲಭ್ಯವಿತ್ತು. ಈ ವರೆಗೆ IRCTC ವೆಬ್‌ಸೈಟ್, ಟಿಕೆಟ್ ದೃಢೀಕರಣ ಮಾಡುವ ಮುನ್ನ ಪ್ರಯಾಣಿಕರು ತತ್ಕಾಲ್ ಟಿಕೆಟನ್ನು ಮೊದಲು ಆನ್‌ಲೈನ್ ಪೇಮೆಂಟ್ ಗೇಟ್‌ವೇ ಗಳ ಮೂಲಕ ಬುಕ್ ಮಾಡಬೇಕಾಗಿತ್ತು.
IRCTC ಬಳಕೆದಾರರು ಈಗಿನ್ನು ತತ್ಕಾಲ್ ಟಿಕೆಟ್‌ಗಳನ್ನು ನಗದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಆ ಟಿಕೆಟ್‌ಗಳು ತಮ್ಮ ಮನೆ ಬಾಗಿಲಿಗೇ ಡೆಲಿವರಿ ಮಾಡಿಸಿಕೊಳ್ಳುವ ಸೇವೆಯನ್ನು ಪಡೆಯಬಹುದಾಗಿದೆ ಎಂದು IRCTC ಪಾವತಿ ಪೂರೈಕೆದಾರ ಆ್ಯಂಡ್ಯುರಿಲ್ ಟೆಕ್ನಾಲಜೀಸ್ ಹೇಳಿದೆ.
ಈ ಹೊಸ ಸೌಕರ್ಯದಿಂದಾಗಿ ಈ ಹಿಂದೆ ಆನ್‌ಲೈನ್‌ನಲ್ಲಿ ಸಾಮಾನ್ಯವಾಗಿದ್ದ “ವಹಿವಾಟು ವೈಫಲ್ಯ’ವನ್ನು ನಿವಾರಿಸುವುದಲ್ಲದೆ ಟಿಕೆಟ್ ಹಣ ಬಳಕೆದಾರರ ಖಾತೆಗೆ ಡೆಬಿಟ್ ಆಗಿಯೂ ಟಿಕೆಟ್ ಜಾರಿಯಾಗದ (ಬಹುಬಗೆಯ ಕಾರಣಗಳಿಂದ) ಪರಿಸ್ಥಿತಿಯನ್ನು ತಪ್ಪಿಸುತ್ತದೆ. ಈಗ ಹಣ ಮರುಪಾವತಿಯ ಅವಧಿಯು ಏಳದಿಂದ ಹದಿನೈದು ದಿನಗಳದ್ದಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.