ಮುಂಬಯಿ ಶೇರು ಹೊಸ ದಾಖಲೆಯ 34,087, ತೈಲ ಶೇರು ಜಂಪ್
Team Udayavani, Dec 27, 2017, 10:30 AM IST
ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರ 34,087 ಅಂಕಗಳ ಎತ್ತರವನ್ನು ಏರುವ ಮೂಲಕ ಮತ್ತೂಂದು ಸಾರ್ವಕಾಲಿಕ ದಾಖಲೆಯನ್ನುಮಾಡಿದೆ. ಆರೋಗ್ಯ, ವಿದ್ಯುತ್ ಮತ್ತು ತೈಲ ಶೇರುಗಳಲ್ಲಿ ಭರಾಟೆಯ ಖರೀದಿ ನಡೆದ ಕಾರಣ ಸೆನ್ಸೆಕ್ಸ್ ಹೊಸ ಮೈಲುಗಲ್ಲಿನ ಸಾಧನೆ ಸಾಧ್ಯವಾಯಿತು.
ಇದೇ ವೇಳೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ 2015ರ ಡಿಸೆಂಬರ್ ಮಧ್ಯ ಭಾಗದಲ್ಲಿದ್ದ ದರವನ್ನು ದಾಟಿ ಇದೀಗ ಬ್ಯಾರಲ್ಗೆ 60 ಡಾಲರ್ ಮಟ್ಟವನ್ನು ತಲುಪಿದೆ. ಲಿಬಿಯಾದಲಿ ಪೈಪ್ ಲೈನ್ ಬ್ಲಾಸ್ಟ್ ಆದ ಕಾರಣ ಒಪೆಕ್ ತೈಲ ಉತ್ಪಾದನೆಯನ್ನು ನಿರ್ಬಂಧಿಸಿರುವುದೇ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಪರಿಣಾಮವಾಗಿ ಮುಂಬಯಿ ಶೇರು ಪೇಟೆಯಲ್ಲಿ ತೈಲ ಕ್ಷೇತ್ರದ ಶೇರುಗಳು ಉತ್ತಮ ಧಾರಣೆಯನ್ನು ಇಂದು ಕಾಣುತ್ತಿವೆ.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 78.33 ಅಂಕಗಳ ಏರಿಕೆಯೊಂದಿಗೆ 34,088.94 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 6.50 ಅಂಕಗಳ ಏರಿಕೆಯೊಂದಿಗೆ 10,538.00 ಅಂಕಗಳ ಮಟ್ಟದಲ್ಲೂ ವ್ಯವಹರಿಸುತ್ತಿದ್ದವು.
ಸನ್ ಫಾರ್ಮಾ, ಮಾರುತಿ ಸುಜುಕಿ, ರಿಲಯನ್ಸ್, ಎಸ್ಬಿಐ ಮತ್ತು ಭಾರ್ತಿ ಏರ್ಟೆಲ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಮುಂಬಯಿ ಶೇರು ಪೇಟೆಯ ಆರಂಭಿಕ ವಹಿವಾಟಿನಲ್ಲಿ 2,395 ಶೇರುಗಳ ವಹಿವಾಟಿಗೆ ಒಳಪಟ್ಟವು; 1,408 ಶೇರುಗಳು ಮುನ್ನಡೆ ಕಂಡವು; 849 ಶೇರುಗಳು ಹಿನ್ನಡೆಗೆ ಗುರಿಯಾದವು; 138 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
MUST WATCH
ಹೊಸ ಸೇರ್ಪಡೆ
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Bengaluru: ಬಿಯರ್ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.