RBI ಹಣಕಾಸು ನೀತಿ:ಎಚ್ಚರಿಕೆ ನಡೆಯಲ್ಲಿ ಸೆನ್ಸೆಕ್ಸ್ 102 ಅಂಕ ಕುಸಿತ
Team Udayavani, Jun 5, 2018, 12:14 PM IST
ಮುಂಬಯಿ : ಆರ್ಬಿಐ ನಾಳೆ ಬುಧವಾರ ತನ್ನ ಹಣಕಾಸು ನೀತಿಯನ್ನು ಪ್ರಕಟಿಸಲಿರುವ ಕಾರಣಕ್ಕೆ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 102 ಅಂಕಗಳ ಹಿನ್ನಡೆಯನ್ನು ಕಂಡಿತು.
ಮಧ್ಯಾಹ್ನ 12.10ರ ಹೊತ್ತಿಗೆ ಸೆನ್ಸೆಕ್ಸ್ 40.27 ಅಂಕಗಳ ನಷ್ಟದೊಂದಿಗೆ 34,971.62 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17 ಅಂಕಗಳ ನಷ್ಟದೊಂದಿಗೆ 10,611.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ ಬ್ಯಾಂಕ್, ರಿಲಯನ್ಸ್, ಎಸ್ಬಿಐ, ಮಾರುತಿ ಸುಜುಕಿ, ಟಿಸಿಎಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್ಗಳು : ಸಿಪ್ಲಾ, ರಿಲಯನ್ಸ್, ಬಜಾಜ್ ಫಿನಾನ್ಸ್, ಟೆಕ್ ಮಹೀಂದ್ರ, ಮಾರುತಿ ಸುಜುಕಿ; ಟಾಪ್ ಲೂಸರ್ಗಳು : ಐಡಿಯಾ ಸೆಲ್ಯುಲರ್, ಝೀ ಎಂಟರ್ಟೇನ್ಮೆಂಟ್, ಭಾರ್ತಿ ಏರ್ಟೆಲ್, ಕೋಲ್ ಇಂಡಿಯಾ, ಪವರ್ ಗ್ರಿಡ್.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 5 ಪೈಸೆ ಕುಸಿತವನ್ನು ಕಂಡು 67.16 ರೂ. ಮಟ್ಟಕ್ಕೆ ಇಳಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.