ಲಾಭ ನಗದೀಕರಣದ ಒತ್ತಡ: ಮುಂಬಯಿ ಶೇರು 14 ಅಂಕ ನಷ್ಟ
Team Udayavani, Jun 20, 2017, 5:00 PM IST
ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆ ಇಂದು ಮಂಗಳವಾರ, ನಿನ್ನೆಯ ಗಳಿಕೆಯ ಬುನಾದಿಯನ್ನು ಗಟ್ಟಿ ಗೊಳಿಸುವ ಯತ್ನ ನಡೆಸಿತಾದರೂ 14.04 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 31,297.53 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 4.05 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 9,653.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,431 ಶೇರುಗಳು ಕುಸಿತಕ್ಕೆ ಗುರಿಯಾದವು; 1,227 ಶೇರುಗಳು ಮುನ್ನಡೆಗೆ ಪಾತ್ರವಾದವು.
ನಿನ್ನೆ ಅದ್ಭುತ ಏರಿಕೆಯನ್ನು ದಾಖಲಿಸಿದ್ದ ಬ್ಯಾಂಕ್ ಶೇರುಗಳು ಇಂದು ಮತ್ತೆ ಮುನ್ನಡೆಯುವಲ್ಲಿ ಸೋತವು. ಬ್ಯಾಂಕ್ ನಿಫ್ಟಿ ಸೂಚ್ಯಂಕ ಶೇ.0.02ರ ನಷ್ಟಕ್ಕೆ ಗುರಿಯಾಯಿತು.
ಟಾಟಾ ಮೋಟರ್ ಇಂದು ಶೇ.3ರ ಸೊಗಸಾದ ಏರಿಕೆಯನ್ನು ದಾಖಲಿಸಿತು. 2008ರಲ್ಲಿ ಟಾಟಾ ಮೋಟರ್ ಖರೀದಿಸಿದ್ದ ಜಾಗ್ವಾರ್ ಲ್ಯಾಂಡ್ ರೋವರ್ ಇದೀಗ 24 ಶತಕೋಟಿ ಡಾಲರ್ಗಳ ಐಪಿಓ ನಡೆಸಲು ಮುಂದಾಗಿರುವ ಸುದ್ದಿಯಿಂದಾಗಿ ಟಾಟಾ ಮೋಟರ್ ಬೇಡಿಕೆ ಹೆಚ್ಚಿತು.
ಟಾಟಾ ಪವರ್ ಕೂಡ ಇಂದು ಶೇ.5ರಷ್ಟು ಏರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.