ಮುಂಬಯಿ ಶೇರು ನಿರಂತರ 4ನೇ ದಿನ ಏರಿಕೆ: 94 ಅಂಕ ಜಿಗಿತ
Team Udayavani, Mar 7, 2019, 5:32 AM IST
ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ, ನಿರಂತರ ನಾಲ್ಕನೇ ದಿನದ ಜಿಗಿತದ ರೂಪದಲ್ಲಿ, 63 ಅಂಕಗಳ ಏರಿಕೆಯನ್ನು ದಾಖಲಿಸಿತು.
ಡಾಲರ್ ಎದುರು ಭಾರತದ ರೂಪಾಯಿಯ ಬಲವರ್ಧನೆ, ತೈಲ ಬೆಲೆ ಇಳಿಕೆ ಮತ್ತು ದೇಶದ ಸ್ಥೂಲ ಆರ್ಥಿಕ ಸ್ವರೂಪ ಆಶಾದಾಯಕವಾಗಿರುವುದೇ ಮೊದಲಾದ ಧನಾತ್ಮಕ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದು ತೇಜಿ ಕಂಡಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 11,000 ಅಂಕಗಳ ಮೇಲ್ಮಟ್ಟವನ್ನು ಕಾಯ್ದುಕೊಂಡಿತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 93.69 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,729.79 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.60 ಅಂಕಗಳ ಮುನ್ನಡೆಯೊಂದಿಗೆ 11,064.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 30 ಪೈಸೆಗಳ ಏರಿಕೆಯನ್ನು ದಾಖಲಿಸಿ 69.98 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.