ಆರಂಭಿಕ ಜಿಗಿತದ ಬಳಿಕ ಕುಸಿತ: ಮುಂಬಯಿ ಶೇರು 24 ಅಂಕ ನಷ್ಟ
Team Udayavani, Jan 2, 2018, 10:34 AM IST
ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 100 ಅಂಕಗಳ ಜಿಗಿತವನ್ನು ಸಾಧಿಸಿತಾದರೂ ಆ ಬಳಿಕ ಕೆಲ ಹೊತ್ತಿನಲ್ಲೇ ಅದು ತನ್ನ ಆರಂಭಿಕ ಗಳಿಕೆಯನ್ನು ಬಿಟ್ಟುಕೊಟ್ಟು ಕೆಂಬಣ್ಣಕ್ಕೆ ತಿರುಗಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 24.42 ಅಂಕಗಳ ನಷ್ಟದೊಂದಿಗೆ 33,788.33 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 7 ಅಂಕಗಳ ನಷ್ಟದೊಂದಿಗೆ 10,428.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ಬಿಐ, ಎಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ, ರಿಲಯನ್ಸ್, ಟಾಟಾ ಮೋಟರ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಭಾರ್ತಿ ಇನ್ಫ್ರಾಟೆಲ್, ಒಎನ್ಜಿಸಿ, ಎಚ್ ಡಿ ಎಫ್ ಸಿ ಮ್ಯಾಂಕ್, ಎನ್ ಟಿ ಪಿ ಸಿ, ಟೆಕ್ ಮಹೀಂದ್ರ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.
ಈಶರ್ ಮೋಟರ್, ಐಡಿಯಾ ಸೆಲ್ಯುಲರ್, ಎಚ್ಪಿಸಿಎಲ್, ಎಸ್ ಬ್ಯಾಂಕ್, ಬಿಪಿಸಿಎಲ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಮುಂಬಯಿ ಶೇರು ಪೇಟೆಯಲ್ಲಿ ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ 2,453 ಶೇರುಗಳು ವಹಿವಾಟಿಗೆ ಒಳಪಟ್ಟವು;ವ 701 ಶೇರುಗಳು ಮುನ್ನಡೆ ಸಾಧಿಸಿದವು; 1,669 ಶೇರಗಳು ಹಿನ್ನಡೆಗೆ ಗುರಿಯಾದವು; 83 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಕಳೆದ ಐದು ತಿಂಗಳಿಂದ ಮೇಲ್ಮಟ್ಟದಲ್ಲಿದ್ದ ರೂಪಾಯಿ ಇಂದು ಡಾಲರ್ ಎದುರು 4 ಪೈಸೆ ಕುಸಿತ ಕಂಡು 63.72 ರೂ. ವಿನಿಮಯ ದರದಲ್ಲಿ ಸ್ಥಿತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.