ಮುಂಬಯಿ ಶೇರು: ಏರುಪೇರಿನ ವಹಿವಾಟಿನಲ್ಲಿ ಅಲ್ಪ ಗಳಿಕೆ
Team Udayavani, Oct 9, 2017, 4:25 PM IST
ಮುಂಬಯಿ : ರಫ್ತುದಾರರು ಮತ್ತು ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಜಿಎಸ್ಟಿ ರಿಯಾಯಿತಿ ಘೋಷಿಸಲಾದುದನ್ನು ಅನುಸರಿಸಿ ಇಂದು ಗರಿಗೆದರಿದ ಮುಂಬಯಿ ಶೇರು ಪೇಟೆ ದಿನದ ವಹಿವಾಟಿನ ಉದ್ದಕ್ಕೂ ಭಾರೀ ಏರು ಪೇರುಗಳಿಗೆ ಗುರಿಯಾದ ಹೊರತಾಗಿಯೂ ಇಂದಿನ ಸೋಮವಾರದ ವಹಿವಾಟನ್ನು 32.67 ಅಂಕಗಳ ಅಲ್ಪ ಗಳಿಕೆಯೊಂದಿಗೆ 31,846.89 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ 10,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಮರಳಿ ಸಂಪಾದಿಸಿದ್ದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನಾಂತ್ಯಕ್ಕೆ ಕುಸಿತವನ್ನು ಕಂಡು ದಿನದ ವಹಿವಾಟನ್ನು 9.05 ಅಂಕಗಳ ಮುನ್ನಡೆಯೊಂದಿಗೆ 9,988.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ಆರು ಪೈಸೆಯಷ್ಟು ಸುಧಾರಿಸಿದರೂ ಹೂಡಿಕೆದಾರರು ಮತ್ತು ವಹಿವಾಟುದಾರರು ಸೆಪ್ಟಂಬರ್ ತ್ತೈಮಾಸಿಕ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಎದುರು ನೋಡುತ್ತಿರುವುದು ಇಂದಿನ ವಹಿವಾಟಿನಲ್ಲಿ ವ್ಯಕ್ತವಾಗಿತ್ತು.
ಇಂದಿನ ಟಾಪ್ ಗೇನರ್ಗಳು : ಕೋಲ್ ಇಂಡಿಯಾ, ಟೆಕ್ ಮಹೀಂದ್ರ, ಡಾ. ರೆಡ್ಡಿ, ಎಸ್ ಬ್ಯಾಂಕ್, ಅದಾನಿ ಪೋರ್ಟ್; ಟಾಪ್ ಲೂಸರ್ಗಳು : ಅರಬಿಂದೋ ಫಾರ್ಮಾ, ಪವರ್ ಗ್ರಿಡ್, ಒಎನ್ಜಿಸಿ, ಬಿಪಿಸಿಎಲ್, ಗೇಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.