ಮರೆಯಾದ ವಾಣಿಜ್ಯ ಸಮರ ಭೀತಿ: ಸೆನ್ಸೆಕ್ಸ್ 300 ಅಂಕ ಜಿಗಿತ
Team Udayavani, Mar 6, 2018, 10:52 AM IST
ಮುಂಬಯಿ : ಜಾಗತಿಕ ವಾಣಿಜ್ಯ ಸಮರ ಭೀತಿ ಮರೆಯಾದ ಕಾರಣ ಜಾಗತಿಕ ಶೇರು ಪೇಟೆಗಳು ಮತ್ತೆ ಚುರುಕಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 300 ಅಂಕಗಳ ಜಿಗಿತವನ್ನು ದಾಖಲಿಸಿತು.
ಜಿಂದಾಲ್ ಸ್ಟೀಲ್, ವೇದಾಂತ, ಜೆಎಸ್ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಎನ್ಎಂಡಿಸಿ, ನ್ಯಾಲ್ಕೋ, ಸೆಯ್ಲ, ಹಿಂಡಾಲ್ಕೊ ಮತ್ತು ಹಿಂದುಸ್ಥಾನ್ ಝಿಂಕ್ ಮುಂತಾದ ಲೋಹ ಉದ್ಯಮದ ಶೇರುಗಳು ಇಂದು ಉತ್ತಮ ಮುನ್ನಡೆ ಕಂಡವು.
ಕಳೆದ ನಾಲ್ಕು ದಿನಗಳ ನಿರಂತರ ಕುಸಿತದಲ್ಲಿ ಸೆನ್ಸೆಕ್ಸ್ 698.97 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಇಂದು ಬಹುತೇಕ ಎಲ್ಲ ಕ್ಷೇತ್ರದ ಶೇರುಗಳು ಮುನ್ನಡೆ ಸಾಧಿಸಿದವು. ಇವುಗಳಲ್ಲಿ ಮೆಟಲ್, ರಿಯಲ್ಟಿ, ಕನ್ಸೂಮರ್ ಡ್ನೂರೇಬಲ್ಸ್, ಕ್ಯಾಪಿಟಲ್ ಗೂಡ್ಸ್, ಮತ್ತು ಬ್ಯಾಂಕಿಂಗ್ ರಂಗದ ಶೇರುಗಳು ಮುಖ್ಯವಾಗಿದ್ದವು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 123.75 ಅಂಕಗಳ ಮುನ್ನಡೆಯೊಂದಿಗೆ 33,8703 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 50.25 ಅಂಕಗಳ ಮುನ್ನಡೆಯೊಂದಿಗೆ 10,408.55ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.