ಮುಂಬಯಿ ಶೇರು 150 ಅಂಕ ಜಿಗಿತ; ಮತ್ತೆ 35,000 ಮಟ್ಟಕ್ಕೆ
Team Udayavani, May 28, 2018, 10:42 AM IST
ಮುಂಬಯಿ : ಅಂತಾರಾಷ್ಟೀಯ ಕಚ್ಚಾ ತೈಲ ಬೆಲೆಯಲ್ಲಿ ಗಮನಾರ್ಹ ಕಡಿತ ಉಂಟಾಗಿರುವುದು ಮತ್ತು ಜಾಗತಿಕ ಭೂರಾಜಕಾರಣ ಬಿಕ್ಕಟ್ಟು ಕೊಂಚ ಮಟ್ಟಿಗೆ ಶಮನವಾಗಿರುವ ಹಿನ್ನೆಲೆಯಲ್ಲಿ ಮುಂಬಯ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಜಿಗಿತವ ಸಾಧಿಸಿ 35,000 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.
ಡಾಲರ್ ಎದುರು ರೂಪಾಯಿ 39 ಪೈಸೆ ಚೇತರಿಸಿಕೊಂಡು 67.39 ರೂ. ಮಟ್ಟಕ್ಕೆ ಏರಿರುವುದು ಶೇರು ಮಾರುಕಟ್ಟೆಗೆ ಇಂದು ಉತ್ತೇಜನ ನೀಡಿತು. ಕಚ್ಚಾ ತೈಲ ಬೆಲೆ ಇಳಿದಿರುವ ಪ್ರಯುಕ್ತ ಇತರ ಕರೆನ್ಸಿಗಳ ಎದುರು ಡಾಲರ್ ಸ್ವಲ್ಪ ಮಟ್ಟಿಗೆ ಮೆದುವಾಗಿರುವುದು ಮತ್ತು ಏಶ್ಯನ್ ಶೇರು ಪೇಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿ ಬಂದಿರವುದು ಮುಂಬಯಿ ಶೇರು ಪೇಟೆಯ ತೇಜಿಗೆ ಇಂದು ಕಾರಣವಾಯಿತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 204.92 ಅಂಕಗಳ ಮುನ್ನಡೆಯೊಂದಿಗೆ 35,129.79 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 66.50 ಅಂಕಗಳ ಮುನ್ನಡೆಯೊಂದಿಗೆ 10,671.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಪ್ ಗೇನರ್ಗಳು : ಸನ್ ಫಾರ್ಮಾ, ಬಿಪಿಸಿಎಲ್, ಎಚ್ಪಿಸಿಎಲ್, ಲೂಪಿನ್, ಕೋಲ್ ಇಂಡಿಯಾ; ಟಾಪ್ ಲೂಸರ್ಗಳು : ಟೆಕ್ ಮಹೀಂದ್ರ, ಟಿಸಿಎಸ್, ಎಚ್ಸಿಎಲ್ ಟೆಕ್, ಹಿಂಡಾಲ್ಕೊ, ಝೀ ಎಂಟರ್ಟೇನ್ಮೆಂಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.