ದಾಖಲೆ ಎತ್ತರದಿಂದ ಕುಸಿದ ಮುಂಬಯಿ ಶೇರು: 98 ಅಂಕ ನಷ್ಟ
Team Udayavani, Dec 27, 2017, 4:07 PM IST
ಮುಂಬಯಿ : ಡಿಸೆಂಬರ್ ತಿಂಗಳ ವಾಯಿದೆ ವಹಿವಾಟು ಇತ್ಯರ್ಥಗೊಳಿಸುವ ತಿಂಗಳ ಕೊನೇ ಗುರುವಾರದ ಮುನ್ನಾ ದಿನವಾದ ಇಂದು ಬುಧವಾರ ಕೊನೇ ತಾಸಿನಲ್ಲಿ ಅತ್ಯಂತ ಎಚ್ಚರಿಕೆ ನಡೆ ತೋರಲಾದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನದ ವಹಿವಾಟನ್ನು 98.80 ಅಂಕಗಳ ನಷ್ಟದೊಂದಿಗೆ 33,911.81 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40.70 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,490.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ದಿನದ ವಹಿವಾಟಿನ ನಡುವೆ ಸೆನ್ಸೆಕ್ಸ್ 34,000 ಅಂಕಗಳ ಗಡಿಯನ್ನು ಮತ್ತೆ ಪುನಃ ದಾಟಿ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪುವ ಸಾಧನೆ ಮಾಡಿತ್ತು.
ಕೊನೇ ತಾಸಿನ ವಹಿವಾಟಿನಲ್ಲಿಂದು ಬ್ಯಾಂಕ್, ಆಟೋ ಮತ್ತು ಎಫ್ಎಂಸಿಜಿ ಶೇರುಗಳು ಸೂಚ್ಯಂಕಗಳನ್ನು ಕೆಳಕ್ಕೆ ಎಳೆದವು.
ಮುಂಬಯಿ ಶೇರು ಪೇಟೆ (ಬಿಎಸ್ಇ) ಯಲ್ಲಿ ಇಂದು ವಹಿವಾಟಿಗೆ ಒಳಪಟ್ಟ ಒಟ್ಟು ಶೇರುಗಳ ಸಂಖ್ಯೆ 2,948. ಮುನ್ನಡೆ ಸಾಧಿಸಿದ ಶೇರುಗಳು 1,213; ಹಿನ್ನಡೆಗೆ ಗುರಿಯಾದವುಗಳು 1,532; ಯಾವುದೇ ಬದಲಾವಣೆ ಕಾಣದ ಶೇರುಗಳು 203.
ಲಿಬಿಯಾ ತೈಲ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಬ್ಲಾಸ್ಟ್ ಪರಿಣಾಮವಾಗಿ ಒಪೆಕ್ ತೈಲ ಉತ್ಪಾದನೆಯನ್ನು ನಿರ್ಬಂಧಿಸಿದ ಕಾರಣ ಇಂದು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಗಮನಾರ್ಹವಾಗಿ ಏರಿದುದು ಕೂಡ ಶೇರು ಮಾರುಕಟ್ಟೆಗೆ ವ್ಯತಿರಿಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.