ಸಮರೋನ್ಮಾದಕ್ಕೆ ಬೆದರಿದ ಮುಂಬಯಿ ಶೇರು ಪೇಟೆ: 266 ಅಂಕ ನಷ್ಟ
Team Udayavani, Aug 10, 2017, 5:00 PM IST
ಮುಂಬಯಿ : ಉತ್ತರ ಕೊರಿಯ – ಅಮೆರಿಕ ನಡುವೆ ತಾರಕಕ್ಕೇರುತ್ತಿರುವ ಸಮರೋನ್ಮಾದದಿಂದಾಗಿ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳ ಮೇಲೆ ಕರಿ ನೆರಳು ಚಾಚಿಕೊಳ್ಳುತ್ತಿದ್ದು ಮುಂಬಯಿ ಶೇರು ಪೇಟೆಯ ಮೇಲೂ ಆದರ ಪರಿಣಾಮ ಕಾಣಿಸಿಕೊಂಡಿದೆ.
ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 266.51 ಅಂಕಗಳ ನಷ್ಟವನ್ನು ನಿರಂತರ ನಾಲ್ಕನೇ ದಿನವಾಗಿ ಅನುಭವಿಸಿದ್ದು ದಿನದ ವಹಿವಾಟನ್ನು 31,531.33 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 87.80 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,820.25 ಅಂಕಗಳ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ.
ಸಿಕ್ಕಿಂನ ಡೋಕ್‌ಲಾಂ ಗಡಿಯಲ್ಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಭಾರತೀಯ ಸೇನೆ ಆದೇಶಿಸಿರುವ ಸುದ್ದಿ ಕೂಡ ಮುಂಬಯಿ ಶೇರಿನ ಮೇಲೆ ದುಷ್ಕರಿಣಾಮ ಬೀರಿತು.
ವಹಿವಾಟಿನ ನಡುವೆ ಇಂದು ಸೆನ್ಸೆಕ್ಸ್ 375 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಕೊನೇ ತಾಸಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು.
ಮಾರುಕಟ್ಟೆ ಹರಹು ಇಂದು ದುರ್ಬಲವಾಗಿತ್ತು. ಮುನ್ನಡೆ ಕಂಡ ಪ್ರತಿಯೊಂದು ಶೇರಿಗೆ ಆರು ಶೇರುಗಳು ಹಿನ್ನಡೆಗೆ ಗುರಿಯಾದವು.
ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾಗಿರುವ ಸೆಬಿ, ಸುಮಾರು 331 ಕಂಪೆನಿಗಳನ್ನು ನಕಲಿ ಕಂಪೆನಿಗಳೆಂದು ಪಟ್ಟಿಮಾಡಿರುವುದು, ಈ ಪೈಕಿಯ 24ಕ್ಕೂ ಅಧಿಕ ಪ್ರಮುಖ ಕಂಪೆನಿಗಳು ವಿದೇಶಿ ಹೂಡಿಕೆದಾರರು, ಮ್ಯೂಚವಲ್ ಫಂಡ್‌ಗಳು ಹಣ ಹೂಡಿ ಸಿಲುಕಿಕೊಂಡಿರುವುದು ಶೇರು ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.