ಆರ್‌ಬಿಐ ಯಥಾವತ್ ಹಣಕಾಸು ನೀತಿ: ಸೆನ್ಸೆಕ್ಸ್ 577 ಅಂಕ ಜಂಪ್
Team Udayavani, Apr 5, 2018, 4:36 PM IST
ಮುಂಬಯಿ : ಆರ್‌ಬಿಐ ನಿರಂತರ ನಾಲ್ಕನೇ ಬಾರಿಗೆ ಬಡ್ಡಿ ದರವನ್ನು ಯಥಾವತ್ತಾಗಿ ಉಳಿಸಿಕೊಂಡಿರುವುದು ಹಾಗೂ ಹಣದುಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಅಂದಾಜಿಸಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 577.73 ಅಂಕಗಳ ಭಾರೀ ಏರಿಕೆಯೊಂದಿಗೆ 33,597 ಅಂಕಗಳ ಮಟ್ಟಕ್ಕೆ ಜಿಗಿಯುವುದರೊಂದಿಗೆ ಇಂದು ಗುರುವಾರದ ವಹಿವಾಟನ್ನು ಭರ್ಜರಿ ಹುಮ್ಮಸ್ಸಿನೊಂದಿಗೆ ಕೊನೆಗೊಳಿಸಿದೆ.
ಕಳೆದ ಮಾರ್ಚ್ 12ರಂದು ಒಂದೇ ದಿನ ಸೆನ್ಸೆಕ್ಸ್ 610.80 ಅಂಕಗಳ ಭಾರೀ ಏರಿಕೆಯನ್ನು ದಾಖಲಿಸಿತ್ತು. ಅಲ್ಲಿಯ ಬಳಿಕದ ಎರಡನೇ ಅತೀ ದೊಡ್ಡ ಏಕದಿನ ಏರಿಕೆಯನ್ನು ಸೆನ್ಸೆಕ್ಸ್ ಇಂದು ದಾಖಲಿಸಿತು. ನಿನ್ನೆ ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 351.56 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಮುಂಬಯಿ ಶೇರು ಪೇಟೆಯ ಇಂದಿನ ಭರ್ಜರಿ ಜಿಗಿತಕ್ಕೆ ಅಮೆರಿಕ – ಚೀನ ವಾಣಿಜ್ಯ ಸಮರ ಭೀತಿ ಸದ್ಯಕ್ಕೆ ದೂರವಾಗಿರುವ ಸುದ್ದಿ ಕೂಡ ಕಾರಣವಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 196.75 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿ 10,325.15 ಅಂಕಗಳ ಮಟ್ಟಕ್ಕೆ ಜಿಗಿಯಿತು.
ಸ್ಕೈಮೆಟ್ ಹವಾಮಾನ ಅಂದಾಜು ಸಂಸ್ಥೆಯು ಈ ಬಾರಿಯ ದೇಶದ ಮುಂಗಾರು ಮಳೆ ಸಾಮಾನ್ಯವಾಗಿರುವುದೆಂದು ಹೇಳಿರುವುದು ಕೂಡ ಶೇರು ಮಾರುಕಟ್ಟೆಗೆ ಉತ್ಸಾಹ ತುಂಬಿತು.
ಆರ್‌ಬಿಐ ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.025ರಷ್ಟು ಕಡಿತ ಮಾಡುವ ಮೂಲಕ ರಿಪೋ ದರವನ್ನು ಶೇ.6ಕ್ಕೆ ಇಳಿಸಿತ್ತು. 2015ರಲ್ಲಿ ಅಸಾಮಾನ್ಯ ಕಡಿಮೆ ಹಣದುಬ್ಬರದ ಲಾಭವನ್ನು ಎತ್ತಿಕೊಂಡು ಆರ್‌ಬಿಐ ಒಟ್ಟಾರೆಯಾಗಿ 200 ಮೂಲಾಂಕದಷ್ಟು ಬಡ್ಡಿ ದರ ಕಡಿತ ಮಾಡಿತ್ತು.
2018-19ರ ಸಾಲಿನ ಮೊದಲ ಅರೆ ವರ್ಷದಲ್ಲಿ ಹಣದುಬ್ಬರವು ಶೇ.4.7 – ಶೇ.5.1ರ ಒಳಗೆ ಮತ್ತು ಎರಡನೇ ಅರೆ ವರ್ಷದಲ್ಲಿ ಶೇ.4.4ರ ಹಣದುಬ್ಬರ ಇರುವುದೆಂದು ಆರ್‌ಬಿಐ ತನ್ನ ತಾಜಾ ಹಣಕಾಸು ನೀತಿಯಲ್ಲಿ ಅಂದಾಜಿಸಿದೆ.
ಅಂತೆಯೇ ಜಿಡಿಪಿ 2019ರ ಹಣಕಾಸು ವರ್ಷದಲ್ಲಿ ಶೇ.7.4ಕ್ಕೆ ಹಿಗ್ಗುವುದೆಂದು ಅಂದಾಜಿಸಿದೆ. 2017-18ರಲ್ಲಿ ಜಿಡಿಪಿ ಶೇ.6.6 ರಲ್ಲಿ ದಾಖಲಾಗಿದೆ. ಹಾಲಿ ಹಣಕಾಸು ಸಾಲಿನ ಮೊದಲ ಅರೆ ವರ್ಷದಲ್ಲಿ ಜಿಡಿಪಿ ಶೇ.7.3 -ಶೇ. 7.4ರಲ್ಲೂ ಎರಡನೇ ಅರೆ ವರ್ಷದಲ್ಲಿ ಶೇ.7.3 – ಶೇ.7.6ರಲ್ಲೂ ದಾಖಲಾಗುವ ನಿರೀಕ್ಷೆಯನ್ನು ಆರ್‌ಬಿಐ ಹೊಂದಿರುವುದಾಗಿ ಹಣಕಾಸು ನೀತಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.