ಕೊನೇ ಘಳಿಗೆಯಲ್ಲಿ ಜಿಗಿದ ಸೂಚ್ಯಂಕ
ಕಳೆದ ವಾರದ ಮಟ್ಟ ಕಾಯ್ದುಕೊಂಡ ಸೂಚ್ಯಂಕ
Team Udayavani, Dec 23, 2020, 1:05 AM IST
ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಮಂಗಳವಾರ ವಹಿವಾಟಿನ ಮುಕ್ತಾಯದ ಹಂತದಲ್ಲಿ ಬಿರುಸಿನ ವಹಿವಾಟು ನಡೆದ ಕಾರಣ ಸೂಚ್ಯಂಕ 452.72 ಪಾಯಿಂಟ್ಸ್ ಗಳಷ್ಟು ಜಿಗಿಯಿತು. ಜತೆಗೆ 46 ಸಾವಿರ ಪಾಯಿಂಟ್ಸ್ ಗಳ ಏರಿಕೆಯನ್ನು ಮತ್ತೆ ಕಾಯ್ದುಕೊಂಡಿತ್ತು. ನಿಫ್ಟಿ ಸೂಚ್ಯಂಕ 137.90 ಪಾಯಿಂಟ್ಸ್ಗಳಷ್ಟು ಪುಟಿದೆದ್ದಿದೆ.
ದಿನದ ಆರಂಭದಲ್ಲಿ ಹೊಸ ಸ್ವರೂಪದ ಸೋಂಕಿನ ಹಿನ್ನೆಲೆಯಲ್ಲಿ ಷೇರು ಪೇಟೆ ವಹಿವಾಟು ಹೊಯ್ದಾಟದಲ್ಲಿಯೇ ಶುರುವಾ ಗಿತ್ತು. ಈ ಹಂತದಲ್ಲಿಯೇ 968 ಪಾಯಿಂಟ್ಸ್ ಗಳಷ್ಟು ಏರಿಳಿಕೆಯಾಗಿತ್ತು. ಹೊಸ ಮಾದ ರಿಯ ಸೋಂಕಿಗೆ ಫೈಜರ್ ಬಯಾನ್ಟೆಕ್ ಲಸಿಕೆ ಕಂಡುಹಿಡಿಯಲು ಸಾಧ್ಯ ಎಂದು ಘೋಷಣೆ ಮಾಡಿದ್ದು ಐರೋಪ್ಯ ಮಾರುಕಟ್ಟೆ ಯಲ್ಲಿ ಸೂಚ್ಯಂಕ ಚೇತರಿಕೆಗೆ ಕಾರಣವಾ ಯಿತು. ಅದು ಬಾಂಬೆ ಷೇರು ಪೇಟೆಯಲ್ಲೂ ಆಸೆಯ ಹೊಂಗಿರಣ ಮೂಡಿ ಸಿತು. ಹೀಗಾಗಿ, ಕೊನೆಯ ಹಂತದಲ್ಲಿ ಷೇರು ಖರೀದಿ ಬಿರುಸಾಯಿತು. ಅದರ ಲಾಭ ಪಡೆದದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳು. ದಿನದ ಅಂತ್ಯಕ್ಕೆ 452.73 ಪಾಯಿಂಟ್ಸ್ಗಳಷ್ಟು ಜಿಗಿದು, ಕಳೆದ ವಾರ ಕಾಯ್ದುಕೊಂಡಿದ್ದ 46 ಸಾವಿರದ ಮಟ್ಟಕ್ಕೆ ಏರಿಕೆ ಕಂಡಿತು. ದಿನಾಂತ್ಯಕ್ಕೆ 46,006.69ರಲ್ಲಿ ಮುಕ್ತಾ ಯವಾ ಯಿತು. ಎಚ್ಸಿಎಲ್ ಟೆಕ್ ಶೇ.5.09ರಷ್ಟು ಹೆಚ್ಚು ಬಿಕರಿಯಾಗಿದೆ.
ಇನ್ನು ನಿಫ್ಟಿ ಸೂಚ್ಯಂಕ 137.90 ಪಾಯಿಂಟ್ಸ್ ಗಳಷ್ಟು ಏರಿಕೆಯಾಗಿದೆ. ಇದ ರಿಂದಾಗಿ 13, 466.30 ಪಾಯಿಂಟ್ಸ್ಗಳಷ್ಟು ಹೆಚ್ಚಳವಾಗಿ ದಿನಾಂತ್ಯಕ್ಕೆ ವಹಿವಾಟು ಮುಕ್ತಾಯಗೊಳಿಸಿದೆ. ಶಾಂಘೈ, ಸಿಯೋಲ್, ಹಾಂಕಾಂಗ್, ಟೋಕೊ ಸ್ಟಾಕ್ಎಕ್ಸ್ಚೇಂಜ್ಗಳಲ್ಲಿ ಸೂಚ್ಯಂಕ ಕುಸಿದಿವೆ.
ಕುಸಿದ ಕಚ್ಚಾ ತೈಲ
ಹೊಸ ಸ್ವರೂಪದ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಶೇ.1.9ರಷ್ಟು ಕುಸಿದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ 88 ಸೆಂಟ್ಸ್ ಕುಸಿದು, ಪ್ರತಿ ಬ್ಯಾರೆಲ್ಗೆ 50.03 ಡಾಲರ್ಗೆ ತಲುಪಿತು. ವೆಸ್ಟ್ ಟೆಕ್ಸಸ್ ಇಂಟರ್ಮೀಡಿಯೆಟ್ 92 ಸೆಂಟ್ಸ್ ನಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ಗೆ 47.05 ಡಾಲರ್ ಆಗಿತ್ತು.
ಕಾರಣಗಳೇನು?
ಹೊಸ ಸ್ವರೂಪದ ಸೋಂಕಿಗೆ ಲಸಿಕೆ ಸಿದ್ಧ ಎಂದು ಫೈಜರ್ ನೀಡಿದ ಹೇಳಿಕೆ.
ಔಷಧೋದ್ಯಮ ಸೇರಿದಂತೆ ಹಲವು ಕಂಪೆನಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆ.
ಅಮೆರಿಕದಲ್ಲಿ ಕೊರೊನಾ ಪರಿಹಾರ ಪ್ಯಾಕೇಜ್ಗೆ ಸಿಕ್ಕಿದ ಅಂಗೀಕಾರ.
ಬಿಎಸ್ಇ
46,006.69- ದಿನಾಂತ್ಯಕ್ಕೆ
452.73- ಏರಿಕೆಯಾದದ್ದು
968 ಪಾಯಿಂಟ್ಸ್-ದಿನದಲ್ಲಿ ಏರಿಳಿಕೆ
ನಿಫ್ಟಿ
13, 466.30- ದಿನಾಂತ್ಯಕ್ಕೆ
137.90- ಏರಿಕೆಯಾದದ್ದು
ರೂಪಾಯಿ ಕುಸಿತ
5 ಪೈಸೆ- ದಿನದ ಇಳಿಕೆ
73.82 ರೂ.-ಮಧ್ಯಾಂತರ ವೇಳೆಗೆ ಏರಿಕೆ
73.84 ರೂ.- ದಿನಾಂತ್ಯಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.