18 ರಿಂದ 24 ತಿಂಗಳುಗಳಲ್ಲಿ BSNL 4ಜಿ ಸೇವೆ ಪೂರ್ಣ : ಸಂಜಯ್ ಧೋತ್ರೆ
ಬಿ ಎಸ್ ಎನ್ ಎಲ್ ಅನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ : ಧೋತ್ರೆ ಸ್ಪಷ್ಟನೆ
Team Udayavani, Mar 18, 2021, 10:27 AM IST
ನವ ದೆಹಲಿ : ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ 4 ಜಿ ವೈರ್ ಲೆಸ್ ಸೇವೆಯ ಮುಂದಿನ 18 ರಿಂದ 24 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸುತ್ತಿದೆ ಎಂದು ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ ಬುಧವಾರ(ಮಾ.17) ಮಾಹಿತಿ ನೀಡಿದ್ದಾರೆ.
ಇನ್ನು, ಬಿ ಎಸ್ ಎನ್ ಎಲ್ ಅನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಸಚಿವರು ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಓದಿ : ಕುಸ್ತಿ ಕೂಟದಲ್ಲಿ ಒಂದು ಅಂಕದಿಂದ ಸೋಲು: ಮನನೊಂದ ಗೀತಾ ಪೋಗಟ್ ಸಹೋದರಿ ಆತ್ಮಹತ್ಯೆ!
ಬಿ ಎಸ್ ಎನ್ ಎಲ್ ಮುಂಬರುವ 4 ಜಿ ಟೆಂಡರ್ ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಾರತೀಯ ಟೆಲಿಕಾಂ ಇಕ್ವಿಪ್ ಮೆಂಟ್ಸ್ ಉತ್ಪಾದಕರಿಂದ ಪೂರ್ವ ನೋಂದಣಿ ಅಥವಾ ಪರಿಕಲ್ಪನೆಯ ಪುರಾವೆ (ಪಿಒಸಿ) ಕೋರಿ ಜನವರಿ 1 ರಂದು ಬಿ ಎಸ್ ಎನ್ ಎಲ್ ಇನ್ವೈಟೆಡ್ ಎಕ್ಸ್ಪ್ರೆಷನ್ ಆಫ್ ಇಂಟ್ರೆಸ್ಟ್ (ಇಒಐ)ನ್ನು ಆಹ್ವಾನಿಸಿತ್ತು ಎಂದು ಧೋತ್ರೆ ಹೇಳಿದ್ದಾರೆ.
“ಈ ನಿಟ್ಟಿನಲ್ಲಿ 2017 ರ ಸಾಮಾನ್ಯ ಹಣಕಾಸು ನಿಯಮಗಳ ಕಾಯ್ದೆ 144 (xi) ಒಳಗೊಂಡಂತೆ ಸರ್ಕಾರದ ಅನ್ವಯವಾಗುವ ನಿಯಮಗಳು / ಮಾರ್ಗಸೂಚಿಗಳು / ಸಾರ್ವಜನಿಕ ಖರೀದಿ ಆದೇಶಗಳನ್ನು ಬಿ ಎಸ್ ಎನ್ ಎಲ್ ಅನುಸರಿಸುತ್ತದೆ” ಎಂದು ಧೋತ್ರೆ ಮಾಹಿತಿ ನೀಡಿದ್ದಾರೆ.
ಓದಿ : ಬಿಜೆಪಿ ಸಂಸದನ ನಿವಾಸದ ಬಳಿ 15 ಕಡೆ ಕಚ್ಚಾ ಬಾಂಬ್ ದಾಳಿ: ಮೂವರಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.