ಬಜೆಟ್‌ನಲ್ಲಿ “ಗುಜರಿ ನೀತಿ’ ಘೋಷಣೆ?
Team Udayavani, Jan 13, 2021, 6:56 AM IST
ಹೊಸದಿಲ್ಲಿ: ಕೋವಿಡ್ ಲಾಕ್‌ಡೌನ್‌ನಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಆಟೋಮೊಬೈಲ್ ಕ್ಷೇತ್ರವನ್ನು ಮರಳಿ ಹಳಿಗೆ ತರುವ ಉದ್ದೇಶದಿಂದ ಕೇಂದ್ರ ಸರಕಾರವು ಬಜೆಟ್‌ನಲ್ಲಿ “ವಾಹನಗಳ ಗುಜರಿ ನೀತಿ’ಯನ್ನು ಘೋಷಿಸುವ ಸಾಧ್ಯತೆ ಇದೆ.
ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುಜರಿ ನೀತಿಯನ್ನು ಘೋಷಿಸಿ, ಅದು ಜಾರಿಯಾಗಿದ್ದೇ ಆದಲ್ಲಿ, ಹಳೆಯ ವಾಹನಗಳು ರಸ್ತೆಗಳಿಂದ ಹೊರಗುಳಿಯಲಿವೆ. ಪರಿಸರ ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವಂತಹ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಬಹುತೇಕ 15-20 ವರ್ಷಗಳಷ್ಟು ಹಳೆಯ ವಾಹನಗಳಿಗೆ ಈ ನೀತಿ ಅನ್ವಯವಾಗುವ ಸಾಧ್ಯತೆಯಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೂ ಈ ಬಗ್ಗೆ ಸುಳಿವು ನೀಡಿದ್ದರು. ಸರಕಾರವು ಗುಜರಿ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದು, ಬಂದರುಗಳ ಸಮೀಪ ವಾಹನಗಳ ಮರುಬಳಕೆ ಕ್ಲಸ್ಟರ್‌ಗಳನ್ನು ಆರಂಭಿಸಲಿದ್ದೇವೆ. ಅದರಿಂದ ದೇಶದ ಆಟೋಮೊಬೈಲ್ ಉದ್ಯಮಗಳಿಗೆ ನೆರವಾಗಲಿದೆ ಎಂದು ಹೇಳಿದ್ದರು. ಈ ನೀತಿ ಜಾರಿಗೆ ಬಂದರೆ, ಹಳೆಯ ವಾಹನಗಳೆಲ್ಲ ಗುಜರಿಗೆ ಸೇರುತ್ತವೆ ಮತ್ತು ಗ್ರಾಹಕರು ಹೆಚ್ಚು ಹೆಚ್ಚು ಹೊಸ ವಾಹನಗಳನ್ನು ಖರೀದಿಸುತ್ತಾರೆ. ಆಗ ಆಟೋ ಕ್ಷೇತ್ರಕ್ಕೆ ಉತ್ತೇಜನ ಸಿಗಲಿದೆ ಎನ್ನುವುದು ಸರಕಾರದ ಲೆಕ್ಕಾಚಾರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.