ವ್ಯವಹಾರ ವಿಶ್ವಾಸಾರ್ಹ ಸೂಚ್ಯಂಕ: ಭಾರತದ ಸ್ಥಾನ ಕುಸಿತ
ಉದ್ದಿಮೆ ವಲಯದಲ್ಲಿ ಕುಂದಿದ ಆಸಕ್ತಿ ; ಸೂಚ್ಯಂಕ ಶೇ. 103.1ರಷ್ಟಕ್ಕೆ ಇಳಿಕೆ
Team Udayavani, Nov 13, 2019, 7:53 PM IST
ಹೊಸ ಬಂಡವಾಳ ಹೂಡಿಕೆ, ಉದ್ದಿಮೆ ವಿಸ್ತರಣೆಗೆ ಅಗತ್ಯವಾಗಿರುವುದು ಒಂದು ದೇಶದಲ್ಲಿನ ವ್ಯವಹಾರ ವಿಶ್ವಾಸಾರ್ಹತೆ. ಇದನ್ನು ಸೂಚ್ಯಂಕದ ಮೂಲಕ ಅಳೆಯಲಾಗುತ್ತದೆ. ದಿಲ್ಲಿ ಮೂಲದ ಚಿಂತಕರ ಚಾವಡಿ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ (ಎನ್‌ಸಿಎಆರ್) ಸಂಸ್ಥೆ ಇಂತಹ ವ್ಯವಹಾರ ವಿಶ್ವಾಸ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು ಭಾರತ ಈ ಸ್ಥಾನದಲ್ಲಿ ಕೆಳಕ್ಕಿಳಿದಿದೆ ಎಂದು ಹೇಳಿದೆ. ಹೀಗಾಗಲು ಕಾರಣವೇನು? ಏನಿದು ಸೂಚ್ಯಂಕ ಎಂಬ ಕುರಿತ ಮಾಹಿತಿ ಇಲ್ಲಿದೆ.
ಏನಿದು ವಿಶ್ವಾಸ ಸೂಚ್ಯಂಕ
ಬಿಸಿನೆಸ್ ಕಾನ್ಫಿಡೆನ್ಸ್ ಇಂಡೆಕ್ಸ್ (ಬಿಸಿಐ) ಇದು ದೇಶದ ಉದ್ಯಮಗಳಲ್ಲಿ ನಡೆಯುವ ವ್ಯವಹಾರ ಚಟುವಟಿಕೆಗಳನ್ನು ಅಳೆಯುವ ಸೂಚಕವಾಗಿದ್ದು, ಉತ್ಪಾದನೆ, ದೇಶೀಯ ಮಾರಾಟ, ರಫ್ತು, ಕಚ್ಚಾ ವಸ್ತುಗಳ ಆಮದು ಮತ್ತು ತೆರಿಗೆ ಪೂರ್ವ ಲಾಭದ ಕುರಿತಾದ ವ್ಯವಹಾರ ಮಟ್ಟವನ್ನು ಒಳಗೊಂಡಿದೆ.
ಯಾವುದರ ಮೇಲೆ ನಿರ್ಧಾರ
ಎನ್‌ಸಿಎಆರ್ ಸಮೀಕ್ಷೆಗೆ ಕೆಲವೊಂದು ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಇದರನ್ವಯ ಉದ್ದಿಮೆ ಸ್ಥಾಪನೆ, ನಿರ್ವಹಣೆ ಕುರಿತ ವಿಶ್ವಾಸವನ್ನು ಪರಿಶೀಲಿಸಲಾಗುತ್ತದೆ. ಮುಂದಿನ ಆರು ತಿಂಗಳಲ್ಲಿ ಒಟ್ಟಾರೆ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗುತ್ತವೆಯೇ ? ಮುಂದಿನ ಆರು ತಿಂಗಳಲ್ಲಿ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆಯೇ ಮತ್ತು ಪ್ರಸ್ತುತ ಹೂಡಿಕೆಯ ವಾತಾವರಣ ಸಕಾರಾತ್ಮಕವಾಗಿ ಮಾರ್ಪಡಾಗಲಿದೆಯೇ ಎಂದು ಪ್ರಶ್ನೆಗಳನ್ನು ಕೇಳಲಾಗಿದ್ದು, ಬಂದ ಫಲಿತಾಂಶದ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಲಾಗಿದೆ.
ಶೇ. 103.1ರಷ್ಟಕ್ಕೆ ಇಳಿಕೆ
ತ್ತೈಮಾಸಿಕ ಸಮೀಕ್ಷೆಯ ಪ್ರಕಾರ, ವ್ಯವಹಾರ ವಿಶ್ವಾಸರ್ಹ ಸೂಚ್ಯಂಕ (ಬಿಸಿಐ) 103.1 ಕ್ಕೆ ಇಳಿದಿದ್ದು, ಜುಲೈ ಅಂತ್ಯದ ತ್ತೈಮಾಸಿಕದಲ್ಲಿ ಶೇ.15.3 ರಷ್ಟು ಕುಸಿದಿತ್ತು ಎನ್ನಲಾಗಿದೆ.
ಶೇ.22.5ರಷ್ಟು ಕುಸಿತ
ವಿಶ್ವಾಸಾರ್ಹ ಸೂಚ್ಯಂಕವು ವರ್ಷದಿಂದ ವರ್ಷಕ್ಕೆ ಶೇ.22.5ರಷ್ಟು ಕುಸಿತ ಕಾಣುತ್ತಿದೆ ಎಂದು ಆಗಸ್ಟ್-ಅಕ್ಟೋಬರ್ ತ್ತೈಮಾಸಿಕ ವರದಿಯಿಂದ ತಿಳಿದು ಬಂದಿದೆ.
ಶೇ.46.3
ಸಮೀಕ್ಷೆಯ ಅಂಗವಾಗಿ ಮುಂದಿನ ಆರು ತಿಂಗಳಲ್ಲಿ ಒಟ್ಟಾರೆ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆಯೇ? ಎಂಬ ಪ್ರಶ್ನೆಯನ್ನು ಕೇಳಲಾಗಿದ್ದು, ಕೇವಲ ಶೇ.46.3 ರಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬಂದಿದ್ದು, ಜುಲೈ ಅಂತ್ಯದಲ್ಲಿ ಶೇ.58.9 ಸಕಾರಾತ್ಮಕ ಪ್ರತಿಕ್ರಿಯೆಗಳು ದಾಖಲಾಗಿತ್ತು ಎಂದು ಎನ್‌ಸಿಎಆರ್ ವರದಿಯಲ್ಲಿ ತಿಳಿಸಿದೆ.
ಆರ್ಥಿಕ ಬೆಳವಣಿಗೆ ಕುಸಿತವೇ ಕಾರಣ
ಆರ್ಥಿಕ ಕ್ಷೇತ್ರದಲ್ಲಿ ಹಿನ್ನಡೆಯಿಂದಾಗಿ ಉದ್ಯಮ ಮಂದಗತಿ ಮತ್ತು ಬಿಕ್ಕಟ್ಟಿನ ಮಧ್ಯೆ ಸಿಲುಕಿದೆ. ಪರಿಣಾಮ ಜೂನ್ ತ್ತೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯ ದರ ಶೇ.5 ರಷ್ಟು ಕುಸಿದಿದ್ದು, ಆರು ವರ್ಷಗಳ ಕನಿಷ್ಠ ಸೂಚ್ಯಂಕ ದರ ದಾಖಲಾಗಿದೆ.
ಬೆಳವಣಿಗೆ ಮುನ್ಸೂಚನೆಯಲ್ಲಿ ಕಡಿತ
ಅಂತಾರಾಷ್ಟ್ರೀಯ ಹಣಕಾಸು ನಿಧಿ ದೇಶಕ್ಕೆ ನೀಡುವ ಬೆಳವಣಿಗೆ ಮುನ್ಸೂಚನೆ ಸೂಚ್ಯಂಕ ದರವನ್ನು ಶೇ.7 ರಿಂದ ಶೇ.6.1 ಕ್ಕೆ ಕಡಿತಗೊಳಿಸಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬೆಳವಣಿಗೆ ಕುರಿತು ಕಳವಳ ವ್ಯಕ್ತಪಡಿಸಿದೆ.
ನಿರೀಕ್ಷೆ ಇಲ್ಲ
ಮುಂದಿನ ಆರು ತಿಂಗಳಲ್ಲಿ ಸಂಸ್ಥೆಗಳ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ನಿರೀಕ್ಷಿಸುವವರ ಪ್ರಮಾಣದಲ್ಲಿಯೂ ಕುಸಿತ ಕಂಡು ಬಂದಿದ್ದು, ಶೇ.48.8 ರಿಂದ 2019ರ ಅಕ್ಟೋಬರ್‌ಗೆ ಶೇ.39.3 ಕ್ಕೆ ಇಳಿದಿದೆ.
ಏಕೈಕ ವರದಿ
ವಿಶೇಷವೆಂದರೆ, ಏಪ್ರಿಲ್ ಮತ್ತು ಜುಲೈ ತಿಂಗಳ ಬಿಸಿಐ ಸೂಚ್ಯಂಕವನ್ನು ಸಿದ್ಧಪಡಿಸಿದ ಏಕೈಕ ವರದಿ ಇದಾಗಿದ್ದು, 10-100 ರೂ. ಕೋಟಿಗಳ ವಾರ್ಷಿಕ ವಹಿವಾಟು ಹೊಂದಿರುವ ಸಂಸ್ಥೆಗಳ ಬಿಸಿಐನಲ್ಲಿ ಗರಿಷ್ಠ ಶೇ.20.6 ರಷ್ಟು ಕುಸಿತ ದಾಖಲಾಗಿದೆ. ಹಾಗೇ 100-500 ರೂ. ಕೋಟಿ ಮತ್ತು 1-10 ರೂ. ಕೋಟಿ ಸಂಸ್ಥೆಗಳು ಕ್ರಮವಾಗಿ ಶೇ.17.6 ರಷ್ಟು ಮತ್ತು ಶೇ.14 ರಷ್ಟು ಕುಸಿತವನ್ನು ಕಂಡಿದೆ.
ಅತ್ಯಂತ ಕಡಿಮೆ ದಾಖಲೆ
ಕಳೆದ 6 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದ ಸೂಂಚ್ಯಕ ದಾಖಲಾಗಿದ್ದು, ಈ ದತ್ತಾಂಶ ವ್ಯವಹಾರದ ಚಟುವಟಿಕೆಗಳ ಮೇಲೆ ಆಳವಾದ ಮತ್ತು ವ್ಯಾಪಕವಾದ ಪರಿಣಾಮ ಬೀರಲಿದೆ ಎಂದು ಎನ್‌ಸಿಎಆರ್ ವರದಿಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.