ಬೈಜು ಈಗ ಕೋಟ್ಯಧಿಪತಿ
ದೇಶದ ಸಿರಿವಂತರ ಪಟ್ಟಿಗೆ ಬೈಜೂಸ್ ರವೀಂದ್ರನ್ ಸೇರ್ಪಡೆ
Team Udayavani, Jul 30, 2019, 5:46 AM IST
ಹೊಸದಿಲ್ಲಿ: ದೇಶದ ಸಿರಿವಂತರ ಪಟ್ಟಿಗೆ ಈಗ ಹೊಸ ಸೇರ್ಪಡೆಯಾಗಿದೆ. ಆನ್ಲೈನ್ ಕಲಿಕಾ ಆ್ಯಪ್ ಬೈಜೂಸ್’ನ ಸಿಇಒ ಬೈಜು ರವೀಂದ್ರನ್ (37) ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 2011ರಲ್ಲಿ ಬೆಂಗಳೂರಿನಲ್ಲಿ ಥಿಂಕ್ ಆ್ಯಂಡ್ ಲರ್ನ್ ಸ್ಟಾರ್ಟಪ್ ಮೂಲಕ ಆನ್ಲೈನ್ ಪಾಠ ಪ್ರವಚನ ಶುರು ಮಾಡಿದ್ದ ಇವರು, ಈಗ ಭಾರತದ ಕಿರಿಯ ಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಥಿಂಕ್ ಆ್ಯಂಡ್ ಲರ್ನ್ ಸ್ಟಾರ್ಟಪ್ 2015ರಲ್ಲಿ ಬೈಜೂಸ್ ಎಂದು ಪರಿವರ್ತನೆಯಾಯಿತು. ಬೈಜೂಸ್ನ ಮೌಲ್ಯ ಏಳು ವರ್ಷಗಳ ಅವಧಿಯಲ್ಲಿ 41,200 ಕೋಟಿ ರೂ (6 ಬಿಲಿಯನ್ ಡಾಲರ್)ಗೆ ಏರಿಕೆಯಾಗಿದೆ. ಶಿಕ್ಷಕರಾಗಿದ್ದುಕೊಂಡೇ, ಸ್ಟಾರ್ಟಪ್ ನಡೆಸು ತ್ತಿರುವ ರವೀಂದ್ರನ್ ಅವರು ಕಂಪೆನಿಯಲ್ಲಿ ಶೇ.21ರಷ್ಟು ಷೇರು ಹೊಂದಿದ್ದಾರೆ. ಹೀಗಾಗಿ, ಇವರೀಗ ಭಾರತದ ಅತ್ಯಂತ ಯುವ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ.
ಬೈಜೂಸ್ ಸಂಸ್ಥೆ ಇತ್ತೀಚೆಗಷ್ಟೇ ಕತಾರ್ ಬಂಡವಾಳ ಪ್ರಾಧಿಕಾರ (ಕ್ಯೂಐಎ)ದಿಂದ 150 ದಶಲಕ್ಷ ಡಾಲರ್ ಮೊತ್ತವನ್ನು ಸಂಗ್ರಹಿಸಿತ್ತು. ಬಂಡವಾಳ ಸಂಗ್ರಹಿಸುವ ಈ ಪ್ರಕ್ರಿಯೆಯಲ್ಲಿ ಔಲ್ ವೆಂಚರ್ಸ್ ಕೂಡ ಭಾಗಿಯಾಗಿತ್ತು. ಅವರು ಶೀಘ್ರದಲ್ಲಿಯೇ ತಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಅಮೆರಿಕಕ್ಕೂ ವಿಸ್ತರಿಸುವ ಸಾಧ್ಯತೆ ಇದೆ. ರವೀಂದ್ರನ್ ಸಂಸ್ಥೆ ಇದುವರೆಗೆ 970 ದಶಲಕ್ಷ ಡಾಲರ್ ಮೊತ್ತವನ್ನು ಹೂಡಿಕೆದಾರರಿಂದ ಸಂಗ್ರಹ ಮಾಡಿದೆ.
ಭಾರತೀಯ ಕ್ರಿಕೆಟಿಗರ ಹೊಸ ಜೆರ್ಸಿಯಲ್ಲಿ ಕೂಡ ಬೈಜೂಸ್ ಮಿಂಚಲಿದೆ. ಚೀನದ ಮೊಬೈಲ್ ತಯಾರಕ ಸಂಸ್ಥೆ ಒಪ್ಪೋ ತನ್ನ ಪ್ರಾಯೋಜಕತ್ವದ ಹಕ್ಕನ್ನು ಬೈಜೂಸ್ಗೆ 2 ದಿನಗಳ ಹಿಂದಷ್ಟೇ ಹಸ್ತಾಂತರಿಸಿದೆ. ಇದೇ ವರ್ಷದ ಸೆ. 5ರಿಂದ 2022ರ ಮಾ.31ರ ವರೆಗೆ ಕ್ರಿಕೆಟ್ ಆಟಗಾರರು ಬೈಜೂಸ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.