ಹಾಲ್ ಮಾರ್ಕ್ ಕಡ್ಡಾಯ : ಪ್ರತಿಭಟನೆಯ ನಿರ್ಧಾರವನ್ನು ಪರಿಶೀಲಿಸಿ :ಜಿಜೆಸಿ ಗೆ ಕೇಂದ್ರ ಸೂಚನೆ
Team Udayavani, Aug 22, 2021, 12:22 PM IST
ಪ್ರಾತಿನಿಧಿಕ ಚಿತ್ರ
ನವ ದೆಹಲಿ : ಕೇಂದ್ರ ಸರ್ಕಾರ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಹರಳು ಮತ್ತು ಚಿನ್ನಾಭರಣ ಮಂಡಳಿಗೆ (ಜಿಜೆಸಿ) ನಾಳೆ(ಸೋಮವಾರ, ಆಗಸ್ಟ್ 23) ಮಾಡಲು ಉದ್ದೇಶಿಸಿರುವ ಸಾಂಕೇರಿಕ ಪ್ರತಿಭಟನೆಯನ್ನು ಪರೋಕ್ಷವಾಗಿ ನಿಲ್ಲಿಸಿ ಎಂದು ಸೂಚಿಸಿದೆ.
ಹರಳು ಮತ್ತು ಚಿನ್ನಾಭರಣ ಮಂಡಳಿಗೆ (ಜಿಜೆಸಿ) ಮಾಡಲು ಹೊರಟಿರುವ ಪ್ರತಿಭಟನೆಯ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ : ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 30,948 ಹೊಸ ಪ್ರಕರಣಗಳು ಪತ್ತೆ |403 ಮಂದಿ ಕೋವಿಡ್ ಗೆ ಬಲಿ.!
ಈ ಬಗ್ಗೆ ಶುಕ್ರವಾರ(ಆಗಸ್ಟ್ 20) ಪ್ರಕಟಣೆ ಹೊರಡಿಸಿದ ಜಿಜೆಸಿ, ದೇಶದಾದ್ಯಂತ ಮುತ್ತು ಹಾಗೂ ಆಭರಣೋದ್ಯಮದ ಸುಮಾರು 350 ಕ್ಕೂ ಹೆಚ್ಚು ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಲಿದೆ ಎಂದು ತಿಳಿಸಿತ್ತು.
ಕೇಂದ್ರ ಸರ್ಕಾರವು 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 256 ಜಿಲ್ಲೆಗಳಲ್ಲಿ ಹಾಲ್ ಮಾರ್ಕ್ ಕಡ್ಡಾಯ ಎಂಬ ನಿಯಮವು ಜೂನ್ 16ರಿಂದ ಹಂತ ಹಂತವಾಗಿ ಜಾರಿಗೆ ತಂದಿದೆ.
ಇನ್ನು, ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಭಾರತದ ಮಾನದಂಡ ಮಂಡಳಿಯ (ಬಿಐಎಸ್) ಪ್ರಧಾನ ನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ, ಕೇಂದ್ರ ಸರ್ಕಾರದ ಹಾಲ್ ಮಾರ್ಕ್ ನೀತಿಯನ್ನು ವಿರೋಧಿಸಿ,‘ಕೆಲವು ಸಂಘಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದು ಕೇಳಿದ್ದೇನೆ. ಉದ್ಯಮದ ಪ್ರತಿಯೊಂದು ಸಮಸ್ಯೆಗಳನ್ನೂ ಸರ್ಕಾರವು ಆಲಿಸುತ್ತಿದೆ. ಹೀಗಿರುವಾಗ ಯಾವುದಕ್ಕಾಗಿ ಮುಷ್ಕರ ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ದೇಶ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಅತಿದೊಡ್ಡ ಹೆಜ್ಜೆಯಾಗಿದೆ. ಚಿನ್ನಾಭರಣ ವರ್ತಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಯಾವಾಗಲೂ ಸಿದ್ಧವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ವೋಕ್ಸ್‌ವ್ಯಾಗನ್ ನ ಎಸ್‌ವಿಯುಡಬ್ಲ್ಯೂ ಟೈಗನ್ ಕಾರು ಪೂರ್ವವೀಕ್ಷಣೆಗೆ ಚಾಲನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.