ಕೆನರಾ ಬ್ಯಾಂಕ್ : ಒಟ್ಟು 1,010 ಕೋಟಿ ನಿವ್ವಳ ಲಾಭ
Team Udayavani, May 19, 2021, 5:01 PM IST
ನವ ದೆಹಲಿ : ಪ್ರತಿಷ್ಟಿತ ಬ್ಯಾಂಕ್ ಕೆನರಾ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಲಾಭ ಗಳಿಸಿದೆ.
ಮಾರ್ಚ್ 31ಕ್ಕೆ ಮುಕ್ತಾಯಗೊಂಡ ತ್ರೈಮಾಸಿಕದಲದಲಿ ಒಟ್ಟು 1,010 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
2020–21ನೆಯ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟು 2,557 ಕೋಟಿ ರೂಪಾಯಿಗಳಷ್ಟು ಲಾಭ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ 5838 ರೂಪಾಯಿಯಷ್ಟು ಕೋಟಿ ನಷ್ಟ ಕಂಡಿತ್ತು. ಆದರೇ, ಈ ತ್ರೈಮಾಸಿಕದ ಮುಕ್ತಾಯದೊಂದಿಗೆ ಬ್ಯಾಂಕ್ ನ ಕಾರ್ಯಾಚರಣೆ ಲಾಭದಲ್ಲಿ ಶೇಕಡ 136.40ರಷ್ಟು ಬೆಳವಣಿಗೆ ಕಂಡು ಬಂದಿದೆ.
ಇದನ್ನೂ ಓದಿ : ಗೋವಾ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ಕಡ್ಡಾಯ ತೆರವು ಅಸಾಧ್ಯ: ಹೈಕೋರ್ಟ್ ಆಫ್ ಬಾಂಬೆ
ಇನ್ನು, ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕಕ್ಕೆ ಹೋಲಿಸಿದರೆ, ಕೆನರಾ ಬ್ಯಾಂಕ್‌ನ ನಿವ್ವಳ ಲಾಭವು, ಮಾರ್ಚ್ ತ್ರೈಮಾಸಿಕದಲ್ಲಿ ಶೇ 45.11ರಷ್ಟು ಏರಿಕೆ ಕಂಡಿದೆ.
ಈ ಬಗ್ಗೆ ವರ್ಷುವಲ್ ಸುದ್ದಿ ಗೋಷ್ಟಿಯಲ್ಲಿ ಮಾಹಿತಿ ನೀಡಿದ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್.ವಿ. ಪ್ರಭಾಕರ್, ದೇಶದಲ್ಲಿ ಫೆಬ್ರವರಿ ಬಳಿಕ ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದ ಸೋಂಕಿತರ ಪ್ರಕರಣ ಏರಿಕೆಯಾಗುತ್ತಿದೆ. ಮಾರ್ಚ್ ನ ತ್ರೈಮಾಸಿಕದಲ್ಲಿ ಬ್ಯಾಂಕ್ ನ ವಹಿವಾಟು ಉತ್ತಮ ರೀತಿಯಲ್ಲಿಯಾಗಿದ್ದು, ಕೋವಿಡ್ ನ ಕಾರಣದಿಂದಾಗಿ ಈ ತ್ರೈಮಾಸಿಕದಲ್ಲಿ ಬ್ಯಾಂಕ್ ನ ವಹಿವಾಟಿಗೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.
ಇನ್ನು, ನಾವು ಈಗ ವೈದ್ಯಕೀಯ ಉಪಕರಣಗಳ ಉದ್ಯಮ ವಲಯ ಮತ್ತು ಆಸ್ಪತ್ರೆಗಳಿಗೆ ಅಗತ್ಯವಿರುವ ಹಣಕಾಸಿನ ಸೇವೆ ಒದಗಿಸುವತ್ತ ಗಮನ ಹರಿಸಿದ್ದೇವೆ. ಕೃಷಿ ವಲಯಕ್ಕೆ ನೀಡಿರುವ ಆದ್ಯತೆಯು ಮುಂದುವರಿಯುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷದಲ್ಲಿ ಕೆನರಾ ಬ್ಯಾಂಕ್ ಈ ತ್ರೈಮಾಸಿಕದಲ್ಲಿ ಒಟ್ಟು 6,567 ಕೋಟಿಯಷ್ಟ ನಷ್ಟ ಅನುಭವಿಸಿತ್ತು.
ಇದನ್ನೂ ಓದಿ : ಈ ಸರ್ಕಾರಕ್ಕೆ ದೂರಾಲೋಚನೆಗಳೇ ಇಲ್ಲ : ರಾಜ್ಯ ಸರ್ಕಾರದ ಕೋವಿಡ್ ಪ್ಯಾಕೇಜ್ ಗೆ HDK ಆಕ್ರೋಶ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.