ಟಾಟಾ, ಸ್ಕೋಡಾ, ಎಂ.ಜಿ. ಕಾರುಗಳ ಮಾರಾಟದಲ್ಲಿ ವೃದ್ಧಿ
ಮಾರುತಿ ಸುಜುಕಿಯ ಕಾರುಗಳ ಮಾರಾಟ ಪ್ರಮಾಣ ಕಳೆದ ತಿಂಗಳು ಶೇ.57.33 ಕುಸಿದಿದೆ.
Team Udayavani, Oct 2, 2021, 11:27 AM IST
ನವದೆಹಲಿ: ಕಳೆದ ತಿಂಗಳು ಕಾರುಗಳ ಮಾರಾಟದ ವಿವರ ಶುಕ್ರವಾರ ಪ್ರಕಟಗೊಂಡಿದೆ. ಟಾಟಾ ಮೋಟರ್ಸ್ 24,632 ಪ್ರಯಾಣಿಕ ವಾಹನಗಳ ಮಾರಾಟ ಮಾಡಿದೆ. 2020ರ ಸೆಪ್ಟೆಂಬರ್ನಲ್ಲಿ 20,891 ವಾಹನಗಳು ಮಾರಾಟವಾಗಿದ್ದವು.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 24,353 ಕೋವಿಡ್ ಪ್ರಕರಣ ಪತ್ತೆ, 25,455 ಮಂದಿ ಚೇತರಿಕೆ
ಶೇಕಡಾವಾರು ಲೆಕ್ಕಾಚಾರದಲ್ಲಿ ಶೇ.18ರಷ್ಟು ಮಾರಾಟ ಹೆಚ್ಚಾಗಿದೆ. ಮೋರಿಸ್ ಗ್ಯಾರೆಜ್ ಕಂಪನಿಯ ಕಾರುಗಳ ಮಾರಾಟದಲ್ಲಿ ಶೇ.28 ಹೆಚ್ಚಳವಾಗಿದೆ. ಸ್ಕೋಡಾ ಸಂಸ್ಥೆಯು ಶೇ. 131 (3,027 ಕಾರುಗಳು) ಮತ್ತು ನಿಸ್ಸಾನ್ ಸಂಸ್ಥೆಯು ಶೇ. 261 ಏರಿಕೆ ದಾಖ ಲಿ ಸಿವೆ. ಈ ಎರಡೂ ಸಂಸ್ಥೆಗಳ ಮಾರಾಟ ಕಳೆದ ವರ್ಷ ಇದೇ ಅವಧಿಯಲ್ಲಿ ಕುಸಿದಿತ್ತು. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕೂಡ ಏರಿಕೆಯಾಗಿದೆ.
ಟಿವಿಎಸ್ ಮೋಟರ್ ಕಂಪನಿ ಕಳೆದ ತಿಂಗಳು 3,47,156 ಬೈಕ್ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ.6ರಷ್ಟು ಏರಿಕೆಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ 2,44,084 ಬೈಕ್ಗಳು ಮಾರಾಟವಾಗಿವೆ. ಇದೇ ವೇಳೆ ಬಜಾಜ್ ಅಟೋ ಕಂಪನಿಯ ವಾಹನಗಳ ಮಾರಾಟ ಶೇ.16ರಷ್ಟು ಕುಸಿದಿತ್ತು.
ಮಾರುತಿ ಸುಜುಕಿಯ ಕಾರುಗಳ ಮಾರಾಟ ಪ್ರಮಾಣ ಕಳೆದ ತಿಂಗಳು ಶೇ.57.33 ಕುಸಿದಿದೆ. ಹುಂಡೈ ಕಾರು ಮಾರಾಟವೂ ಶೇ. 34.2 ಇಳಿಕೆಯಾಗಿದೆ. ಕಾರು ಉತ್ಪಾದನೆಗೆ ಬೇಕಾದ ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಉತ್ಪಾದನೆ ಕಡಿಮೆಯಾಗಿರುವುದೇ ಈ ಇಳಿಕೆಗೆ ಕಾರಣ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.