ಆಟೋಮೊಬೈಲ್, ಟ್ರಾಕ್ಟರ್ ರಂಗಕ್ಕೆ 8,000 ಕೋಟಿ ರೂ. ಆದಾಯ ನಷ್ಟ
Team Udayavani, Mar 2, 2017, 3:39 PM IST
ಹೊಸದಿಲ್ಲಿ : ಕೇಂದ್ರ ಸರಕಾರ ಕಳೆದ ವರ್ಷ ನವೆಂಬರ್‌ನಲ್ಲಿ ಕೈಗೊಂಡಿದ್ದ ನೋಟು ನಿಷೇಧದ ಕ್ರಮದಿಂದಾಗಿ ಆಟೋಮೊಬೈಲ್ ಮತ್ತು ಟ್ರಾಕ್ಟರ್ ರಂಗದ ಕಂಪೆನಿಗಳಿಗೆ 8,000 ಕೋಟಿ ರೂ.ಗಳ ಆದಾಯ ನಷ್ಟವಾಗಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪೆನಿಯ ಆಡಳಿತ ನಿರ್ದೇಶಕ ಪವನ್ ಗೊಯೆಂಕಾ ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ಅತ್ಯುತ್ತಮ ಹಬ್ಬದ ಸೀಸನ್ ಫಲವಾಗಿ ಉತ್ತುಂಗದ ಮಾರಾಟದಲ್ಲಿದ್ದ ಆಟೋಮೊಬೈಲ್ ಮತ್ತು ಟ್ರಾಕ್ಟರ್ ರಂಗದ ಕಂಪೆನಿಗಳು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಹುತೇಕ ನಿಲುಗಡೆಗೆ ಬಂದು ಮುಟ್ಟಿದವು ಎಂದು ಗೊಯೆಂಕಾ ಹೇಳಿದರು.
ನವೆಂಬರ್ ನಲ್ಲಿ ವಾಹನ ಮಾರಾಟ ಶೇ.5.48ರಷ್ಟು ಕುಗ್ಗಿದರೆ ಡಿಸೆಂಬರ್‌ನಲ್ಲಿ ಅದು ಇನ್ನಷ್ಟು ತಳಮಟ್ಟಕ್ಕೆ ಹೋಯಿತು. ಇದು ಕಳೆದ 43 ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿ ದಾಖಲಾಯಿತು. ಈ ಹಿಂದೆ 2013ರ ಮಾರ್ಚ್‌ನಲ್ಲಿ ವಾಹನಗಳ ಒಟ್ಟು ಮಾರಾಟವು ಶೇ.7.75ರ ಕುಸಿತವನ್ನು ಕಂಡಿತ್ತು ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.