ಕಪಟ ಜಾಹೀರಾತಿಗೆ 5 ಲಕ್ಷ ದಂಡ, 5 ವರ್ಷ ಜೈಲು!
Team Udayavani, Feb 8, 2020, 7:54 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ‘ಈ ಫೇರ್‌ನೆಸ್ ಕ್ರೀಮ್ ಹಚ್ಚಿಕೊಳ್ಳುವುದರಿಂದ ಒಂದೇ ವಾರದಲ್ಲಿ ನೀವು ಅಪ್ಸರೆಯಂತೆ ಕಂಗೊಳಿಸುತ್ತೀರಿ’ ಎಂಬಿತ್ಯಾದಿ ಜಾಹೀರಾತುಗಳನ್ನು ನೀಡಿ, ಯುವತಿಯರಿಗೆ, ಮಹಿಳೆಯರಿಗೆ ಮಂಕುಬೂದಿ ಎರಚುವಂಥ ಕಂಪೆನಿಗಳಿಗೆ ಮೂಗುದಾರ ಹಾಕಲು ಕೇಂದ್ರ ಸರಕಾರ ಮುಂದಾಗಿದೆ.
ಸೌಂದರ್ಯವರ್ಧಕ ಸಾಧನಗಳ ಜಾಹೀರಾತುಗಳು ಆಕ್ಷೇಪಾರ್ಹವಾಗಿದ್ದಲ್ಲಿ ಅವುಗಳನ್ನು ನೀಡುವ ಕಂಪೆನಿಯ ಮಾಲಕರಿಗೆ 5 ಲಕ್ಷ ರೂ. ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ಚಿಂತನೆ ನಡೆಸಲಾಗಿದೆ.
ಇದಕ್ಕಾಗಿ, 1954ರ ಔಷಧ ಮತ್ತು ಮಾಂತ್ರಿಕ ಪರಿಹಾರ ಸಾಧನಗಳು ಕಾಯ್ದೆ ಅಡಿಯಲ್ಲಿನ ಆಕ್ಷೇಪಾರ್ಹ ಜಾಹೀರಾತುಗಳ ನಿಯಮಗಳಿಗೆ ತಿದ್ದುಪಡಿ ನಿರ್ಧರಿಸಲಾಗಿದೆ. ಸೌಂದರ್ಯ ವರ್ಧಕ ಸಾಧಕಗಳಿಗಷ್ಟೇ ಅಲ್ಲದೆ, ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಔಷಧಗಳು, ತೊದಲು ಮಾತು ನಿವಾರಿಸುವ ಔಷಧ, ಬಂಜೆತನ ನಿವಾರಣೆ, ಅಕಾಲಿಕ ಮುಪ್ಪು, ಬಾಲ ನೆರೆ ಸಹಿತ ಸುಮಾರು 78 ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು, ಯಾವುದೇ ಕಂಪೆನಿಯು ಇವುಗಳ ನಿವಾರಣೆಯ ಬಗ್ಗೆ ಸುಳ್ಳು ಜಾಹೀರಾತು ನೀಡಿದರೆ ಅವು ಸಹ ಹೊಸ ಕಾನೂನು ವ್ಯಾಪ್ತಿಗೆ ಒಳಪಡಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.