ಅಲಿಬಾಬಾ ಸಂಸ್ಥೆಗೆ ಮತ್ತೆ ಶಾಕ್ ಕೊಟ್ಟ ಚೀನಾ ಸರ್ಕಾರ..!
Team Udayavani, Apr 11, 2021, 1:40 PM IST
ನವ ದೆಹಲಿ : ಜಾಕ್ ಮಾ ಒಡೆತನದ ಅಲಿಬಾಬಾ ಸಂಸ್ಥೆಗೆ ಚೀನಾ ಸರ್ಕಾರ ದೊಡ್ಡ ಪ್ರಮಾಣದ ದಂಡ ವಿಧಿಸಿದೆ.
ಮಾರುಕಟ್ಟೆ ಮೇಲೆ ತಾನು ಸಾಧಿಸಿರುವ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಅಲಿಬಾಬಾ ಸಂಸ್ಥೆಗೆ ಚೀನಾ ಈ ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಮಾರುಕಟ್ಟೆಯಲ್ಲಿ ದೈತ್ಯ ಸಂಸ್ಥೆ ಎನ್ನಿಸಿಕೊಂಡಿರುವ ಅಲಿಬಾಬ ಸಂಸ್ಥೆ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವ ಪ್ರಯತ್ನ ಮಾಡಿರುವ ಕಾರಣದಿಂದಾಗಿ ಚೀನಾ ಸರ್ಕಾರವು 2.8 ಬಿಲಿಯನ್ ಅಮೆರಿಕನ್ ಡಾಲರ್ ದಂಡ ವಿಧಿಸಿದೆ. ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 22,000 ಕೋಟಿ ರೂಪಾಯಿಗಿಂತಲೂ ಹೆಚ್ಚಾಗುತ್ತದೆ.
ಓದಿ : ‘ನ್ಯಾಯಾಲಯದಲ್ಲಿಯೇ ತಕ್ಕ ಉತ್ತರ ನೀಡುತ್ತೇವೆ’ : ಲಹರಿ ಸಂಸ್ಥೆ ವಿರುದ್ಧ ಹರಿಹಾಯ್ದ ರಿಷಬ್
ಇನ್ನು, ಇ-ಕಾಮರ್ಸ್ ವೇದಿಕೆಯಲ್ಲಿ ತನ್ನ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಉತ್ಪಾದಕರಿಗೆ ಷರತ್ತು ವಿಧಿಸುವ ಮೂಲಕ ತನ್ನ ಪ್ಲ್ಯಾಟ್ ಫಾರ್ಮ್‌ಗಳಲ್ಲಿ ಮಾತ್ರ ಮಾರಾಟ ಮಾಡಬೇಕು ಎಂದು ಹೇಳಿದೆ ಎಂಬ ಆರೋಪವೂ ಕೂಡ ಅಲಿಬಾಬಾ ಸಂಸ್ಥೆಯ ಮೇಲಿದೆ.
ಕಳೆದ ವರ್ಷ ಜಾಕ್ ಮಾ ಸೇರಿದಂತೆ Ant ಸಂಸ್ಥೆಗೆ ಸೇರಿದ್ದ 37 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಅಮಾನ್ಯ ಮಾಡಿ ಚೀನಾ ಸರ್ಕಾರ ಶಾಕ್ ನೀಡಿತ್ತು.
ಇದೀಗ 2019ರಲ್ಲಿ ಅಲಿಬಾಬಾ ಕಂಪನಿ ನಡೆಸಿದ ವಹಿವಾಟಿನ ಶೇ. 4 ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ಆ ವರ್ಷ ಕಂಪನಿ 455.7 ಬಿಲಿಯನ್ ಯುವಾನ್ ವ್ಯಾಪಾರ ನಡೆಸಿತ್ತು ಎಂದು ವರದಿ ತಿಳಿಸಿದೆ.
ಓದಿ : ಚುನಾವಣಾ ಆಯೋಗವನ್ನು ‘ಎಮ್ ಸಿ ಸಿ’ ಎಂದು ಮರು ನಾಮಕರಣ ಮಾಡಬೇಕು : ಮಮತಾ ಕಿಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.