ಅಮೆರಿಕದ ವಿರುದ್ಧ ವಾಣಿಜ್ಯ ಸಮರ ಹೂಡುವುದಾಗಿ ಚೀನಾ ಖಡಕ್‌ ಎಚ್ಚರಿಕೆ

Team Udayavani, Mar 13, 2017, 12:07 PM IST

WTO-700.jpg

ಹೊಸದಿಲ್ಲಿ : ವಿಶ್ವ ವಾಣಿಜ್ಯ ಸಂಘಟನೆಯ ನೀತಿ-ನಿಯಮ-ನಿರ್ಧಾರಗಳನ್ನು  ಸ್ವ ಹಿತಾಸಕ್ತಿಗಾಗಿ ಕಡೆಗಣಿಸಿದರೆ ಮತ್ತು ಏಕಪಕ್ಷೀಯವಾಗಿ ತನ್ನ ಸರಕುಗಳ ಮೇಲೆ ಆಮದು ಸುಂಕವನ್ನು ಹೇರಿದರೆ ತಾನು ವಾಣಿಜ್ಯ ಸಮರ ಹೂಡುವುದಾಗಿ ಚೀನ, ಅಮೆರಿಕಕ್ಕೆ ಖಡಕ್‌ ಎಚ್ಚರಿಕೆ ನೀಡಿದೆ. 

“ವಿಶ್ವ ವಾಣಿಜ್ಯ ಸಂಘಟನೆಯ ನೀತಿ-ನಿಯಮಗಳನ್ನು ಯಾವುದೇ ಸದಸ್ಯ ರಾಷ್ಟ್ರ  ಸ್ವಂತ ಹಿತಾಸಕ್ತಿಗಾಗಿ ನಿರ್ಲಕ್ಷಿಸಿದರೆ ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಯು ಅರ್ಥಹೀನವಾಗುತ್ತದೆ. ಪರಿಣಾಮವಾಗಿ 1930ರ ದಶಕದಲ್ಲಿನ ವಾಣಿಜ್ಯ ಸಮರಗಳು ಮರುಕಳಿಸುತ್ತವೆ’ ಎಂದು ಚೀನದ ವಾಣಿಜ್ಯ ಸಚಿವಾಲಯದ ವಕ್ತಾರ ಸನ್‌ ಜಿವೇಯಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.  

ವಿಶ್ವ ವಾಣಿಜ್ಯ ಸಂಘಟನೆಯ ನಿಯಮಗಳನ್ನು  ಸಾರಾಸಗಟು ಕಡೆಗಣಿಸುವತ್ತ ವಾಷಿಂಗ್ಟನ್‌ ನಿಷ್ಠುರ ಹೆಜ್ಜೆ ಇರಿಸುತ್ತಿರುವ ಬಗ್ಗೆ ಪ್ರಕಟಗೊಂಡಿರುವ ವರದಿಗಳಿಗೆ ಸನ್‌ ಜಿವೇಯಿ ಅವರು ಪ್ರತಿಕ್ರಿಸುತ್ತಿದ್ದರು. 

ವಿಶ್ವ ವಾಣಿಜ್ಯ ಸಂಘಟನೆಯ ನಿರ್ಧಾರಗಳಿಗೆ ಅಮೆರಿಕವು ಬದ್ಧವಾಗಿರಬೇಕಾಗಿಲ್ಲ ಎಂಬ ಅಭಿಪ್ರಾಯವನ್ನು ಒಳಗೊಂಡಿರುವ ವಾಣಿಜ್ಯ ವಾಣಿಜ್ಯ ನೀತಿ ಕಾರ್ಯಸೂಚಿಯನ್ನು ಅಮೆರಿಕದ ಹೊಸ ಸರಕಾರ ಸಂಸತ್ತಿಗೆ ಕಳುಹಿಸಿರುವ ಬಗ್ಗೆ ಚೀನ ತನ್ನ ಈ ಕಟುವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ. 

ಹೆಚ್ಚುತ್ತಿರುವ ಆಮದುಗಳಿಂದ ದೇಶೀಯ ಕೈಗಾರಿಕೆಗಳಿಗೆ ಗಂಭೀರ ಹಾನಿ ಉಂಟಾಗುವ ಸಂದರ್ಭದಲ್ಲಿ ಏಕಪಕ್ಷೀಯವಾಗಿ ಸುಂಕ ವಿಧಿಸುವುದಕ್ಕೆ ಅಮೆರಿಕದ ಹೊಸ ವಾಣಿಜ್ಯ ನೀತಿಯುವ ಅವಕಾಶ ಕಲ್ಪಿಸುತ್ತದೆ ಎಂದು ಸರಕಾರಿ ಒಡೆತನದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿತ್ತು.

ಟಾಪ್ ನ್ಯೂಸ್

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bajaj

L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್‌ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್‌

ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ‌ ಡ್ರಿಂಕ್ ಬಿಡುಗಡೆ 

ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ‌ ಡ್ರಿಂಕ್ ಬಿಡುಗಡೆ 

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.