Automation effect:ಕೊಗ್ನಿಸಾಂಟ್ ನ 6,000 ಐಟಿ ಉದ್ಯೋಗಿಗಳಿಗೆ ಕೊಕ್
Team Udayavani, Mar 20, 2017, 4:19 PM IST
ಹೊಸದಿಲ್ಲಿ : ಐಟಿ ಕ್ಷೇತ್ರದ ಪ್ರಮುಖ ಕಂಪೆನಿಗಳಲ್ಲಿ ಒಂದೆನಿಸಿರುವ ಕೊಗ್ನಿಸಾಂಟ್ ಟೆಕ್ನಾಲಜಿ ಸೊಲ್ಯೂಶನ್ಸ್ ಸಂಸ್ಥೆಯು ತನ್ನ ಆರು ಸಾವಿರ ಉದ್ಯೋಗಿಗಳನ್ನು ಕೈಬಿಡಲಿದೆ. ಎಂದರೆ ಕಂಪೆನಿಯಲ್ಲಿ ಕೆಲಸಕ್ಕಿರುವವರಲ್ಲಿ ಶೇ2.3ರಷ್ಟು ಮಂದಿ ಮನೆಗೆ ಹೋಗಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕೆಳಮಟ್ಟದ ಐಟಿ ಉದ್ಯೋಗಗಳು ಈಗ ಯಾಂತ್ರೀಕರಣದ (automation) ಪರಿಣಾಮವಾಗಿ ನಿರರ್ಥಕವಾಗಿದ್ದು ಆ ಕಾರಣಕ್ಕಾಗಿ ಕೊಗ್ನಿಸಾಂಟ್ ಕಂಪೆನಿಯು ತನ್ನ ತಳಮಟ್ಟದ ಉದ್ಯೋಗದಲ್ಲಿರುವ ಸುಮಾರು ಆರು ಮಂದಿಯನ್ನು ಕೈಬಿಡಲು ಉದ್ದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
2016ರ ಡಿಸೆಂಬರ್ ಅಂಕಿ ಅಂಶಗಳ ಪ್ರಕಾರ ಕೊಗ್ನಿಸಾಂಟ್ ಕಂಪೆನಿಯಲ್ಲಿ ಒಟ್ಟು 2,60,000 ಮಂದಿ ಉದ್ಯೋಗಿಗಳು ಇದ್ದಾರೆ. ಈ ಪೈಕಿ ಅತೀ ಹೆಚ್ಚು ಮಂದಿ ಭಾರತದಲ್ಲಿ ಉದ್ಯೋಗನಿರತರಾಗಿದ್ದಾರೆ.
ಕಂಪೆನಿಯ ಮ್ಯಾನೇಜರ್‌ಗಳಿಗೆ ತಮ್ಮ ತಂಡದ ಸದಸ್ಯರಿಗೆ ಉದ್ಯೋಗ ನಷ್ಟದ ಬಗ್ಗೆ ಮುನ್ಸೂಚನೆ ನೀಡುವಂತೆ ಕಂಪೆನಿಯು ಈಗಾಗಲೇ ಸೂಚಿಸಿದೆ ಎಂದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.