ಡ್ಯೂಟಿ ಫ್ರೀ ಮಳಿಗೆಗಳಲ್ಲಿ ಒಂದು ಬಾಟಲ್ ಮದ್ಯ ಖರೀದಿಗೆ ಮಾತ್ರ ಅವಕಾಶ ಸಾಧ್ಯತೆ
Team Udayavani, Jan 20, 2020, 8:35 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಡ್ಯೂಟಿ ಫ್ರೀ (ಸುಂಕ ಪಾವತಿಸದೇ ಇರುವ) ಮಳಿಗೆಗಳಿಂದ ಇನ್ನು ಮುಂದೆ ಒಂದೇ ಒಂದು ಮದ್ಯದ ಬಾಟಲಿ ಖರೀದಿಗೆ ಮಾತ್ರ ಅವಕಾಶವಿರಲಿದೆಯೇ? ವಾಣಿಜ್ಯ ಸಚಿವಾಲಯವು ವಿತ್ತ ಖಾತೆಗೆ ನೀಡಲಾಗಿರುವ ಬಜೆಟ್ ಸಲಹೆಗಳಲ್ಲಿ ಈ ಅಂಶ ಉಲ್ಲೇಖವಾಗಿದೆ. ಅಲ್ಲದೆ, ಮದ್ಯದ ಜತೆಗೆ ಬಳಕೆಯಾಗುವ ಸಿಗರೇಟು ಖರೀದಿಯ ಮೇಲೆ ಕೂಡ ನಿಯಂತ್ರಣ ಹೇರುವುದೊಳಿತು ಎಂದು ವಾಣಿಜ್ಯ ಇಲಾಖೆ ಸಲಹೆ ನೀಡಿದೆ.
ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಇಂಥ ನಿಯಮ ಜಾರಿಗೆ ತರಬಹುದು ಎಂದು ತಿಳಿಸಿದೆ. ಹಾಲಿ ಇರುವ ನಿಯಮ ಪ್ರಕಾರ, ವಿದೇಶಗಳಿಂದ ಆಗಮಿಸುವವರು ಡ್ಯೂಟಿ ಫ್ರೀ ಮಳಿಗೆಗಳಲ್ಲಿ ಎರಡು ಲೀಟರ್ ಮದ್ಯ, ಒಂದು ಪ್ಯಾಕ್ ಸಿಗರೇಟ್ ಖರೀದಿ ಮಾಡಲು ಅವಕಾಶ ಇದೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 1 ಲೀಟರ್ ಮದ್ಯ ಮಾತ್ರ ಖರೀದಿಗೆ ಅವಕಾಶ ನೀಡುವ ರಾಷ್ಟ್ರಗಳೂ ಇವೆ. ಅದೇ ನಿಯಮವನ್ನೂ ನಮ್ಮ ದೇಶಕ್ಕೂ ಅನ್ವಯಿಸಬಹುದು ಎನ್ನುತ್ತವೆ ವಾಣಿಜ್ಯ ಸಚಿವಾಲಯದ ಮೂಲಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.