ಗ್ರಾಹಕರ ನೆರವಿಗೆ ಸಶಕ್ತ ಕಾಯ್ದೆ; ಕೇಂದ್ರ ಸರಕಾರದ ಗ್ರಾಹಕ ರಕ್ಷಣಾ ಕಾಯ್ದೆ-2019


Team Udayavani, Aug 16, 2020, 6:12 AM IST

ಗ್ರಾಹಕರ ನೆರವಿಗೆ ಸಶಕ್ತ ಕಾಯ್ದೆ; ಕೇಂದ್ರ ಸರಕಾರದ ಗ್ರಾಹಕ ರಕ್ಷಣಾ ಕಾಯ್ದೆ-2019

ಕೇಂದ್ರ ಸರಕಾರ 2019ರಲ್ಲಿ ರೂಪುಗೊಳಿಸಿ, ಅಂಗೀ ಕರಿಸಿದ್ದ ಗ್ರಾಹಕ ರಕ್ಷಣಾ ಕಾಯ್ದೆ ಜು.20ರಿಂದ ಜಾರಿ ಯಾಗಿದೆ. ಪೂರ್ಣರೂಪದಲ್ಲಿ ಅಲ್ಲದಿದ್ದರೂ, ಬಹುತೇಕ ಅಂಶಗಳು ಜಾರಿಯಾಗಿವೆ. ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಇದು ಮೈಲು ಗಲ್ಲಾಗ­ಬಹುದು ಎಂಬ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಮುಖ್ಯಾಂಶಗಳು ಇಲ್ಲಿವೆ.

ಗ್ರಾಹಕ ರಕ್ಷಣಾ ಕಾಯಿದೆ 2019
ಮೂಲ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು 1986ರಲ್ಲಿ. ಅದನ್ನು 2019ರಲ್ಲಿ ಬದಲಾಯಿಸಲಾಯಿತು. 2019, ಜು.8ರಂದು ಮೊದಲು ರಾಜ್ಯಸಭೆಯಲ್ಲಿ ಮಂಡಿಸಲಾ­ಯಿತು. ಆನಂತರ ಜು.30ರಂದು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಆ.6ರಂದು ಮತ್ತೆ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ (ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ) ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದರು. ಆ.9ರಂದು ಅದಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕುವ ಮೂಲಕ ಅದು ಕಾಯ್ದೆಯಾಗಿ ಬದಲಾಯಿತು.

ಕಾಯ್ದೆ ಒಳಗೊಂಡಿರುವ ಅಂಶಗಳೇನು?
ಸದ್ಯ ಕೇಂದ್ರಸರಕಾರ ತಾನು ಜಾರಿ ಮಾಡುವ ಗ್ರಾಹಕ ರಕ್ಷಣಾ ಕಾಯ್ದೆಯ ಅಂಶಗಳನ್ನು ಗುರ್ತಿಸಿದೆ. ಗ್ರಾಹಕ ರಕ್ಷಣಾ ಆಯೋಗಗಳ ರಚನೆ, ಗ್ರಾಹಕ ವಿವಾದಗಳ ನಿವಾರಣೆ ವೇದಿಕೆ ರಚನೆ, ಮಧ್ಯವರ್ತಿಗಳಾಗಿ ಕೆಲಸ ಮಾಡುವುದು ಅಥವಾ ಸಂಪರ್ಕಸೇತುವಾಗುವುದು ಇವೆಲ್ಲ ಒಂದು ಭಾಗ. ಒಪ್ಪಿಕೊಂಡಂತೆ ಸೇವೆ ಮತ್ತು ಉತ್ಪನ್ನ ನೀಡದಿ­ರುವುದು, ಹಾಳಾದ ಅಥವಾ ಕಲಬೆರಕೆ ಮಾಡಿದ ಉತ್ಪನ್ನಗಳನ್ನು ತಯಾರಿಸುವುದು, ಮಾರುವುದು, ವಿತರಿಸುವುದಕ್ಕೆ ದಂಡ ವಿಧಿಸುವುದು ಇವೆಲ್ಲ ಇನ್ನೊಂದು ಭಾಗವಾಗಿವೆ.

ಸನಿಹದ ಗ್ರಾಹಕ ಆಯೋಗಗಳಲ್ಲೇ ದೂರು
ಗ್ರಾಹಕರಿಗಿರುವ ಒಂದು ಅಮೂಲ್ಯ ಅವಕಾಶವೆಂದರೆ ಅವರು ದೂರು ಸಲ್ಲಿಸಲು ಅಲ್ಲಿ, ಇಲ್ಲಿ ಎಂದು ಅಲೆಯಬೇಕಿಲ್ಲ. ತಾವು ಎಲ್ಲಿಯೇ ವಸ್ತುಗ­ಳನ್ನು ಖರೀದಿಸಿದ್ದರೂ, ತಮ್ಮ ವಾಸ್ತವ್ಯತಾಣಕ್ಕೆ ಹತ್ತಿರವಾದ ಜಿಲ್ಲಾ, ರಾಜ್ಯ ಗ್ರಾಹಕ ಆಯೋಗಗಳಲ್ಲಿ ದೂರು ಸಲ್ಲಿಸಬಹುದು. ಒಂದು ವೇಳೆ ಪ್ರಕರಣ ಗ್ರಾಹಕ ಆಯೋಗಗಳಲ್ಲಿ ಇತ್ಯರ್ಥವಾಗದಿದ್ದರೆ, ಅದು ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ನಿರ್ಣಯವಾಗುತ್ತದೆ.

ಗ್ರಾಹಕ ಮೃತಪಟ್ಟರೆ ಆಜೀವ ಕಾರಾಗೃಹ
ಒಂದು ವೇಳೆ ಗ್ರಾಹಕರಿಗೆ ಹಾನಿಯಾದರೆ, 5 ಲಕ್ಷ ರೂ.ವರೆಗೆ ದಂಡ, ಜತೆಗೆ 7 ವರ್ಷ ­ದವರೆಗೆ ಕಾರಾಗೃಹ ಶಿಕ್ಷೆಯನ್ನು ಉತ್ಪಾದಕರು/ಮಾರಾಟಗಾರರು/ವಿತರಕರಿಗೆ ವಿಧಿಸಬಹುದು. ಆಕಸ್ಮಾತ್‌ ಇಂತಹ ವಸ್ತುಗಳ ಬಳಕೆ­ಯಿಂದ ಗ್ರಾಹಕ ಸತ್ತೇ ಹೋದರೆ, ಕನಿಷ್ಠ 10 ಲಕ್ಷ ರೂ. ದಂಡ ಮತ್ತು 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದು. ಈ ಶಿûಾವಧಿಯನ್ನು ಆಜೀವ ಮಟ್ಟಕ್ಕೆ ವಿಸ್ತರಿಸುವ ಅಧಿಕಾರವೂ ಗ್ರಾಹಕ ನ್ಯಾಯಾಲಯಗಳಿಗಿದೆ.

ಕಲಬೆರಕೆ, ಕಳಪೆ ವಸ್ತುಗಳಿಗೆ 6 ತಿಂಗಳವರೆಗೆ ಜೈಲು
ಹೊಸ ಕಾಯ್ದೆಯಲ್ಲಿ ಗ್ರಾಹಕ ನ್ಯಾಯಾಲಯಗಳಿಗೆ ಅಧಿಕಾರ ನೀಡಲಾಗಿದೆ. ಸಮಸ್ಯೆಗಳನ್ನು ಬಗೆಹರಿಸುವ, ಕಠಿನ ಶಿಕ್ಷೆ ವಿಧಿಸುವ ಅವಕಾಶ ನೀಡುವ ಮೂಲಕ ವ್ಯವಸ್ಥೆಯನ್ನು ಶಕ್ತಿಪೂರ್ಣ ಮಾಡಲಾ­ಗಿದೆ. ಒಂದು ವೇಳೆ ಉತ್ಪಾದಕರು, ಮಾರಾಟ­ಗಾರರು, ವಿತರಕರು ಕಲಬೆರಕೆ ಮಾಡಿದ ಅಥವಾ ಹಾಳಾದ ವಸ್ತುಗಳನ್ನು ಮಾರಾಟ ಮಾಡಿದರೆ, ಅಂತಹವರನ್ನು ನ್ಯಾಯಾಲಯಕ್ಕೆಳೆದು ಪರಿಹಾರ ಕೇಳುವ ಅಧಿಕಾರ ಗ್ರಾಹಕರಿಗಿದೆ. ಕಳಪೆ ವಸ್ತುಗಳನ್ನು ಬಳಸಿದ ಗ್ರಾಹಕರಿಗೆ ಹಾನಿಯಾಗದಿದ್ದರೂ, ಮಾರಿದಾತನಿಗೆ 6 ತಿಂಗಳವರೆಗೆ ಬಂಧನ ಅಥವಾ 1 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು.

ಟಾಪ್ ನ್ಯೂಸ್

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bajaj

L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್‌ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್‌

ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ‌ ಡ್ರಿಂಕ್ ಬಿಡುಗಡೆ 

ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ‌ ಡ್ರಿಂಕ್ ಬಿಡುಗಡೆ 

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Table Space: ಟೇಬಲ್‌ ಸ್ಪೇಸ್‌ ಸ್ಥಾಪಕ ಅಮಿತ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

Kumbale: ಸಾರ್ವಜನಿಕರಿಗೆ ಸಮಸ್ಯೆ; ಇಬ್ಬರ ಬಂಧನ

10

Malpe: ಕುಸಿದು ಬಿದ್ದು ವ್ಯಕ್ತಿ ಸಾವು

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

8

Gangolli: 9 ದಿನ ಕಳೆದರೂ ಮೀನುಗಾರನ ಸಿಗದ ಸುಳಿವು

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.