ಬಂಗಾರ ಖರೀದಿಗೆ ಗ್ರಾಹಕರ ಹಿಂದೇಟು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮಾರಾಟ ಇಳಿಕೆ
Team Udayavani, Oct 10, 2019, 9:30 PM IST
ಕೋಲ್ಕತಾ: ಆಟೋಮೊಬೈಲ್ ವಲಯದ ನಂತರ ದೇಶದಲ್ಲಿ ಬಂಗಾರ ಖರೀಸಿದಿಸುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ ಬಾರಿ ನವರಾತ್ರಿ ಸಂದರ್ಭದಲ್ಲಿ ಅಧಿಕ ಮಟ್ಟದಲ್ಲಿ ಬಂಗಾರ ಮಾರಾಟವಾಗಿದ್ದರೆ, ಈ ಬಾರಿ ಚಿನ್ನದ ಮಾರುಕಟ್ಟೆಯ ವಹಿವಾಟು ಕುಸಿದಿದೆ.
ಈ ಪರಿಣಾಮ ಆಭರಣ ತಯಾರಿಕಾ ಕಂಪನಿಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಅನೇಕ ಜುವೆಲ್ಲರಿ ಕಂಪೆನಿಗಳ ಉದ್ಯೋಗಿಗಳು ಕೆಲಸ ಕಳೆದು ಕೊಳ್ಳುತ್ತಿದ್ದಾರೆ. ಹೀಗಾಗಿ, ಬಂಗಾರ ತಯಾರಿಕೆಯಲ್ಲಿ ನಿಪುಣರಾಗಿರುವ ಅಕ್ಕಸಾಲಿಗರಿಗೂ ಕೆಲಸ ಇಲ್ಲದಂತಾಗಿದೆ.
ಚಿನ್ನಕ್ಕೂ ಆರ್ಥಿಕ ಹಿಂಜರಿತದ ಬಿಸಿ
ಇಂದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಹಿಂಜರಿತ ಉಂಟಾಗಿದೆ. ಇನ್ನೂ ಇದರ ಬಿಸಿ ಚಿನ್ನಾಭರಣ ಕ್ಷೇತ್ರಕ್ಕೂ ತಾಗಿದ್ದು, ದೇಶದಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಕುಸಿಯುತ್ತಿದೆ. ವಿಶೇಷವೆಂದರೆ ಬೆಲೆಯಲ್ಲಿ ಕುಸಿತ ಕಂಡರೂ ಗ್ರಾಹಕರು ವ್ಯಾಪಾರ-ವಾಹಿವಾಟಿನಿಂದ ದೂರ ಉಳಿದಿರುವುದು ಆಶ್ಚರ್ಯ ಮೂಡಿಸಿದೆ.
1,300 ರೂ. ಇಳಿಕೆ
ಕಳೆದ ಒಂದು ವಾರದಲ್ಲಿ ಬಂಗಾರದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು, ಚಿನ್ನದ ದರ 1,300 ರೂ.ಗಳಷ್ಟು ಕಡಿಮೆಯಾಗಿದೆ. ಕಳೆದ ವಾರ 10 ಗ್ರಾಂಗೆ 39,885 ರೂ. ಇದ್ದ ಚಿನ್ನದ ಬೆಲೆ ಈಗ 38,527 ರೂ.ಗೆ ಇಳಿದಿದೆ. ಬೆಳ್ಳಿಯ ಬೆಲೆಯಲ್ಲೂ ಕುಸಿತ ಕಂಡು ಬಂದಿದ್ದು, ಕಳೆದ ವಾರ ಕೆ.ಜಿ.ಗೆ 51,489 ಇದ್ದ ಬೆಲೆ ಈ ವಾರ 47,640 ರೂ.ಗೆ ಇಳಿದಿದೆ.
ಅಬಕಾರಿ ಸುಂಕ ಕಡಿತಗೊಳಿಸಲು ಬೇಡಿಕೆ
ಸ್ವರ್ಣೋದ್ಯಮದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಅಲ್ ಇಂಡಿಯಾ ಜೆಮ್ ಮತ್ತು ಜುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ ಮಾಹಿತಿ ನೀಡಿದ್ದು, ಚಿನ್ನ ಆಮದು ಹಾಗೂ ಜುವೆಲ್ಲರಿಗಳ ಮೇಲಿನ ಜಿಎಸ್‌ಟಿಯನ್ನು ಶೇ.1ಕ್ಕೆ ನಿಗದಿಗೊಳಿಸಿ ಅಬಕಾರಿ ಸುಂಕವನ್ನು ಶೇ.10ರಷ್ಟು ಇಳಿಕೆ ಮಾಡುವಂತೆ ಬೇಡಿಕೆ ಇಡಲಾಗಿದೆ ಎಂದು ಕೌನ್ಸಿಲ್ ಉಪಾಧ್ಯಕ್ಷ ಶಂಕರ್ ಸೇನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.