ಆಭರಣ ಉದ್ಯಮದಲ್ಲಿ ಹೊಸ ಹುಮ್ಮಸ್ಸು

ಚಿನ್ನಾಭರಣ ಖರೀದಿಗೆ ಮುಂದಾಗುತ್ತಿರುವ ಗ್ರಾಹಕರು

Team Udayavani, Oct 20, 2020, 6:00 AM IST

ಆಭರಣ ಉದ್ಯಮದಲ್ಲಿ ಹೊಸ ಹುಮ್ಮಸ್ಸು

ಸಾಂದರ್ಭಿಕ ಚಿತ್ರ

ಕರಾವಳಿಯ ಆರ್ಥಿಕತೆಯಲ್ಲಿ ಚಿನ್ನಾಭರಣ ಉದ್ಯಮದ ಪಾತ್ರವೂ ಸಾಕಷ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ವಹಿವಾಟು ಕೊಂಚ ಕಡಿಮೆ ಇತ್ತಾದರೂ ಈಗ ಮತ್ತೆ ಆಭರಣ ಮಾರುಕಟ್ಟೆ ಹೊಸ ಉತ್ಸಾಹದಿಂದ ಪುಟಿದೇಳುತ್ತಿದೆ.

ಮಂಗಳೂರು/ಉಡುಪಿ: ಸ್ಥಳೀಯ ಮಾರುಕಟ್ಟೆಗೆ ನವಚೈತನ್ಯ ತುಂಬಲು ಬಂದಿರುವ ಈ ದಸರಾ ಆಭರಣ ಉದ್ಯಮವನ್ನೂ ಮತ್ತೆ ಹೊಳೆ ಯುವಂತೆ ಮಾಡುವಲ್ಲಿ ಕೊಂಚ ಯಶಸ್ವಿಯಾಗಿದೆ.

ಈ ಬಾರಿ ಮುಖ್ಯವಾಗಿ ಅಕ್ಷಯ ತೃತೀಯಾ ಬರುವಾಗ ಕೊರೊನಾ ಅಪ್ಪಳಿಸಿತ್ತು. ವರಮಹಾಲಕ್ಷ್ಮೀ ವ್ರತ ಬರುವ ಹೊತ್ತಿಗೆ ಹೊಸ ವಸ್ತುಗಳ ಖರೀದಿಗೆ ಜನರು ಸಂಪೂರ್ಣ ಮನಸ್ಸು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಗಣೇಶನ ಹಬ್ಬದಲ್ಲಿ ಚಿನ್ನ ಖರೀದಿ ಕೊಂಚ ಕಡಿಮೆ. ಆದ ಕಾರಣ ಅಕ್ಷಯ ತೃತೀಯಾ ಮತ್ತು ವರ ಮಹಾಲಕ್ಷ್ಮೀ ವ್ರತದ ಸಂದರ್ಭ ದಲ್ಲಿ ಅಂದುಕೊಂಡದ್ದನ್ನು ಈ ದಸರಾ-ದೀಪಾವಳಿಯಲ್ಲಿ ಈಡೇರಿಸಿ ಕೊಳ್ಳುವ ಲೆಕ್ಕಾಚಾರ ಗ್ರಾಹಕರದ್ದು. ಇದೇ ಉತ್ಸಾಹದಲ್ಲಿ ಚಿನ್ನಾಭರಣಗಳ ಉದ್ಯಮವೂ ಇದೆ.

ಕೊರೊನಾ ಕಾರಣ ಒಟ್ಟು ವಹಿ ವಾಟಿನ ಮೇಲೆ ಕೊಂಚ ಪರಿಣಾಮ ಬೀರಿರು ವುದು ನಿಜ. ಆದರೆ ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಕೊಂಚ ಕಡಿಮೆಯೇ. ಈಗ ದಸರಾ- ದೀಪಾ ವಳಿ ಎರಡೂ ಕೆಲವೇ ದಿನಗಳ ಅಂತರ ದಲ್ಲಿ ಬಂದಿರುವುದು ಚಿನ್ನಾಭರಣ ವ್ಯಾಪಾರಿಗಳಿಗೆ ಸಮಾಧಾನ ತಂದಿದೆ. ವಾರ್ಷಿಕ ಸುಮಾರು ಒಂದು ಸಾವಿರ ಕೋಟಿ ರೂ. ವಹಿವಾಟು ನಡೆಸುವ ದೊಡ್ಡ ಉದ್ಯಮವಿದು.

ಮಂಗಳೂರು ಲೇಡಿಹಿಲ್‌ನ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಮಾಲಕರಾದ ಎಂ. ರವೀಂದ್ರ ಶೇಟ್‌ “ಉದಯವಾಣಿ’ಯೊಂದಿಗೆ ಮಾತ ನಾಡಿ, “ಸದ್ಯ ಮಾರುಕಟ್ಟೆ ಚೇತರಿಕೆ ಹಂತದಲ್ಲಿದೆ. ಚಿನ್ನಕ್ಕೂ ದರ ಕೊಂಚ ಕಡಿಮೆ ಇರುವ ಕಾರಣ ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಮಾರು ಕಟ್ಟೆ ಚೇತರಿಸಿಕೊಳ್ಳುತ್ತಿದೆ’ ಎಂದಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ಏಳು ತಿಂಗಳಿನಿಂದ ಶುಭ ಸಮಾರಂಭಗಳು ಕರಾವಳಿ ಭಾಗದಲ್ಲಿ ನಡೆದಿರಲಿಲ್ಲ. ಶುಭ ಸಂದರ್ಭಗಳಲ್ಲಿ ಮನೆ ಮಂದಿಯೆಲ್ಲ ಚಿನ್ನಾಭರಣಗಳನ್ನು ಖರೀದಿಸುವ ಸಂಪ್ರದಾಯ ಕರಾವಳಿಯಲ್ಲಿ ಹೆಚ್ಚಿದೆ. ಅದರ ಧನಾತ್ಮಕ ಪರಿಣಾಮದಿಂದ ಚಿನ್ನಾಭರಣ ಉದ್ಯಮಕ್ಕೆ ಅನುಕೂಲವಾಗಿದೆ.

ಉಡುಪಿಯ ಆಭರಣ ಜುವೆಲರ್ಸ್ ಅಕೌಂಟ್ಸ್‌ ವಿಭಾಗದ ಮುಖ್ಯಸ್ಥ ವಿನೋದ್‌ ಕಾಮತ್‌ ಅವರು ಮಾರು ಕಟ್ಟೆ ಚೇತರಿಕೆಯನ್ನು ಒಪ್ಪಿಕೊಳ್ಳುತ್ತಾರೆ. ಚೌತಿ, ವರಮಹಾಲಕ್ಷ್ಮೀ ಹಬ್ಬಗಳಿಗೆ ಹೋಲಿಸಿದರೆ ಶೇ. 50ರಷ್ಟು ಏರಿಕೆ ಯಾಗಿದೆ. ಇದೇ ಬೆಳವಣಿಗೆ ಮುಂದುವರಿದರೆ ಮುಂದಿನ ಎಪ್ರಿಲ್‌ ಅಂತ್ಯಕ್ಕೆ ಕೊರೊನಾ ಪೂರ್ವದ ಸ್ಥಿತಿಗೆ ಮಾರುಕಟ್ಟೆ ಬರಲಿದೆ’ ಎಂದಿದ್ದಾರೆ.

ಮಂಗಳೂರಿನ ಕೆ.ಎಸ್‌. ರಾವ್‌ ರಸ್ತೆಯ ಎಸ್‌.ಎಲ್‌. ಶೇಟ್‌ ಜುವೆಲರ್ ಆ್ಯಂಡ್‌ ಡೈಮಂಡ್‌ ಹೌಸ್‌ನ ಪಾಲು ದಾರರಾದ ಎಂ. ಪ್ರಶಾಂತ್‌ ಶೇಟ್‌ ಅವರ ಪ್ರಕಾರ, “ಲಾಕ್‌ಡೌನ್‌ ಕಾರಣದಿಂದ ನಾಲ್ಕೈದು ತಿಂಗಳುಗಳಿಂದ ಜನರಿಗೆ ಖರೀದಿಗೆ ಅವಕಾಶವಿರಲಿಲ್ಲ. ಹೀಗಾಗಿ ಹಬ್ಬಗಳ ಸುಸಂದರ್ಭದಲ್ಲಿ ಚಿನ್ನಾಭರಣ ಖರೀದಿಗೆ ಜನರು ಮನಸ್ಸು ಮಾಡುತ್ತಿದ್ದಾರೆ’.

ಹೊಸ ಚಿನ್ನಾಭರಣ ಖರೀದಿ
ಕೊರೊನಾ ಬಳಿಕ ಚಿನ್ನಾಭರಣ ಮಾರುಕಟ್ಟೆಗೆ ಮೊದಲ ಬಾರಿಗೆ ಹೊಸ ಹುರುಪು ಬಂದಿದೆ. ಚಿನ್ನದ ಬೆಲೆ ಏರಿಕೆಯಾಗಿದ್ದರೂ ಹೊಸ ಚಿನ್ನದ ಖರೀದಿ ಹೆಚ್ಚಿರುವುದು ಆಭರಣ ಉದ್ಯಮಕ್ಕೆ ಹೊಸ ಚೈತನ್ಯವನ್ನು ತುಂಬುತ್ತಿದೆ ಎಂಬುದು ಉಡುಪಿಯ ಸ್ವರ್ಣ ಜುವೆಲರ್ ಮಾಲಕ ಗುಜ್ಜಾಡಿ ರಾಮದಾಸ ನಾಯಕ್‌ ಅವರ ಅಭಿಮತ. ಮಂಗಳೂರಿನ ಲಕ್ಷ್ಮೀದಾಸ್‌ ಜುವೆಲರ್ನ ಮಾಲಕರಾದ ಸೀತಾರಾಮ್‌ ಆಚಾರ್‌ ಅವರು, “ಮದುವೆ ಸೇರಿದಂತೆ ಶುಭ ಸಮಾರಂಭಗಳು ಸದ್ಯ ಆರಂಭವಾಗಿವೆ. ಗ್ರಾಹಕರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ವಹಿವಾಟು ಹೆಚ್ಚ‌ಬಹುದು’ಎಂದಿದ್ದಾರೆ.

ಕುಂದಾಪುರದ ಉದಯ ಜುವೆಲರ್ಸ್‌ ಪಾಲುದಾರ ಅಕ್ಷಯ್‌ ಶೇಟ್‌, ಸಮಾರಂಭಗಳೇ ಕಡಿಮೆಯಾಗಿದ್ದರೂ ಅಗತ್ಯ ಸಮಾರಂಭಗಳಿಗೆ ಖರೀದಿ ನಿಂತಿಲ್ಲ. ನಿಧಾನವಾಗಿ ಮತ್ತೆ ಮಾರುಕಟ್ಟೆಯತ್ತ ಜನರು ಬರುತ್ತಿರುವುದು ಸಂತಸದಾಯಕ ಬೆಳವಣಿಗೆ ಎಂದಿದ್ದಾರೆ.
ಮಂಗಳೂರಿನ ಮಳಿಗೆಯಲ್ಲಿ ಚಿನ್ನ ಖರೀದಿಸುತ್ತಿದ್ದ ಪಿಲಾರು ಸಮೀಪದ ನಮಿತಾ ಅವರ ಪ್ರಕಾರ, “ವರ್ಷದಲ್ಲಿ ಒಮ್ಮೆಯಾದರೂ ಚಿನ್ನ ಖರೀದಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಆದರೆ ಇದುವರೆಗೆ ಕಾಲ ಕೂಡಿ ಬಂದಿರಲಿಲ್ಲ’.

ಚಿನ್ನಾಭರಣ ಅಂಗಡಿಗಳ ವಹಿವಾಟು ಶೇ. 40ಕ್ಕಿಂತಲೂ ಹೆಚ್ಚು ನಷ್ಟದಲ್ಲಿತ್ತು. ಆದರೆ ಈಗ ತುಸು ಸುಧಾರಣೆ ಕಾಣುತ್ತಿದೆ. ಆದ ಕಾರಣ ದೀಪಾವಳಿಯನ್ನು ಕಾಯುವಂತೆ ಮಾಡಿದೆ ಎಂಬುದು ಕಾರ್ಕಳದ ಪವನ್‌ ಜುವೆಲರ್ಸ್‌ನ ಸತೀಶ್‌ ಅವರ ಅಭಿಪ್ರಾಯ.

ಬರ್ತ್‌ಡೇ ಗಿಫ್ಟ್
ಮುಂದಿನ ತಿಂಗಳು ನನ್ನ ಮಗಳ ಮತ್ತು ಮೊಮ್ಮಗಳ ಜನ್ಮದಿನವಿದೆ. ಅವಳ ಹುಟ್ಟುಹಬ್ಬದ ಉಡುಗೊರೆಗಾಗಿ ಚಿನ್ನ ಖರೀದಿಸುತ್ತಿದ್ದೇನೆ ಎಂದವರು ಗ್ರಾಹಕಿ ಮಲ್ಪೆ ವಡಭಾಂಡೇಶ್ವರದ ಭಾರತಿ ಕೆದ್ಲಾಯ ಅವರು.  ಕೈಯಲ್ಲಿ ಹಣವಿದ್ದರೆ ಖಾಲಿಯಾಗುತ್ತದೆ. ಸ್ವಲ್ಪ ಮಟ್ಟಿನ ಹಣವನ್ನು ಚಿನ್ನದ ರೂಪದಲ್ಲಿ ಇಡೋಣವೆಂದು ಖರೀದಿಗೆ ಬಂದಿದ್ದೇನೆ. ಆಫ‌ರ್‌ಗಳು ಸಿಕ್ಕರೆ ಮತ್ತಷ್ಟು ಖುಷಿ ಎಂದಿದ್ದಾರೆ ಸಂತೆಕಟ್ಟೆಯ ಚಿತ್ರಾ ಶೆಟ್ಟಿ.

ಕರಾವಳಿಯ ಚಿನ್ನಾಭರಣದ ಉದ್ಯಮ ವಲಯದವರ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಖರೀದಿ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಾಗಿಲ್ಲ. ನವರಾತ್ರಿ, ದೀಪಾವಳಿ ವೇಳೆಗೆ ಚಿನ್ನ ಖರೀದಿಗೆ ಆಸಕ್ತಿ ಹೆಚ್ಚುವ ಕಾರಣ ಆಫ‌ರ್‌ಗಳು, ಹೊಸ ಡಿಸೈನ್‌ಗಳೂ ಚಿನ್ನಾಭರಣ ಮಳಿಗೆಗಳಲ್ಲಿ ರಾರಾಜಿಸುತ್ತಿವೆ. ಹೀಗಾಗಿ ಕೊರೊನಾ ಬಳಿಕದ ಮಾರುಕಟ್ಟೆ ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆಯ ಹೆಜ್ಜೆಯಲ್ಲಿದೆ.

ಫ್ಯಾಮಿಲಿ ಶಾಪಿಂಗ್‌
ದಸರಾ ಸಂಭ್ರಮ ಆರಂಭವಾಗಿದ್ದು, ಮನೆಗೆ ಅಗತ್ಯವಾದ ಹೊಸ ವಸ್ತುಗಳ ಖರೀದಿಯ ಭರಾಟೆಯೂ ಹೆಚ್ಚಿದೆ. ನೀವೂ ನಿಮ್ಮ ಕನಸಿನ ವಸ್ತುವನ್ನು ಈ ಹಬ್ಬದಲ್ಲಿ ಖರೀದಿಸಿರಬಹುದು. ಅದರೊಂದಿಗೆ ನಿಮ್ಮ ಕುಟುಂಬದ ಚಿತ್ರ ಮತ್ತು ಖರೀದಿ ರಶೀದಿಯ ಪ್ರತಿಯನ್ನು ಈ ನಂಬರ್‌ಗೆ ಕಳುಹಿಸಿ. ಸೂಕ್ತವಾದವುಗಳನ್ನು ಪ್ರಕಟಿಸುತ್ತೇವೆ.
ವಾಟ್ಸ್‌ಆ್ಯಪ್‌ ಸಂಖ್ಯೆ: 7618774529

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.