ಅಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದ್ದರೂ ಇಲ್ಲಿ ಇಳಿಯುತ್ತಿಲ್ಲ ಇಂಧನ ದರ- ಇಲ್ಲಿದೆ ಕಾರಣ!
Team Udayavani, Jun 23, 2020, 5:53 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೋವಿಡ್-19 ಸಂಬಂಧಿತ ದೇಶವ್ಯಾಪಿ ಲಾಕ್ ಡೌನ್ ನಮ್ಮ ಆರ್ಥಿಕ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತವನ್ನೇ ನೀಡಿದೆ.
ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಇಳಿಮುಖವಾಗಿರುವ ಕಾರಣ ಬೆಲೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಸಂಗ್ರಹ ಮತ್ತು ಪೂರೈಕೆ ಹೆಚ್ಚಿರುವುದೂ ಸಹ ಬೆಲೆ ಇಳಿಮುಖವಾಗಲು ಕಾರಭ ಎನ್ನಲಾಗುತ್ತಿದೆ.
ಪ್ರತಿ ಬ್ಯಾರಲ್‌ಗೆ 0.43ರಷ್ಟು ಕುಸಿತ
ಅಂತಾರಾಷ್ಟ್ರೀಯ ಕಚ್ಚಾ ತೈಲ ಫ್ಯೂಚರ್ 0.43ರಷ್ಟು ಕುಸಿತ ಕಂಡ ಪರಿಣಾಮ ಪ್ರತೀ ಬ್ಯಾರೆಲ್‌ಗೆ 3,038 ರೂ.ಗೆ ಇಳಿದಿದ್ದು, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿನ ಜುಲೈ ವಿತರಣೆಯ ಕಚ್ಚಾ ತೈಲವು 13 ರೂ. ಅಥವಾ 0.43 ರಷ್ಟು ಕುಸಿತವಾಗಿದೆ.
ಇನ್ನು ಆಗಸ್ಟ್ ವಿತರಣೆ ದರ ಪ್ರಮಾಣವನ್ನು ಗಮನಿಸುವುದ್ದದರೆ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 3,061 ರೂ.ಗೆ 21 ರೂ. ಅಥವಾ ಶೇ 0.68ರಷ್ಟು ಕಡಿಮೆಯಾಗಿದ್ದು, ಜಾಗತಿಕವಾಗಿ ಪಶ್ಚಿಮ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 39.75 ಡಾಲರ್‌ಗೆ ಸಮವಾಗಿ ವಹಿವಾಟು ನಡೆಸುತ್ತಿದೆ. ಬ್ರೆಂಟ್ ಕಚ್ಚಾ ತೈಲವು ನ್ಯೂಯಾರ್ಕ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 0.07ರಷ್ಟು ಏರಿಕೆ ಕಂಡು 42.22 ಡಾಲರ್‌ನಲ್ಲಿ ಮಾರಾಟವಾಗುತ್ತಿದೆ.
ಅಲ್ಲಿ ಇಳಿಯುತ್ತಿದ್ದರೂ ಇಲ್ಲಿ ಏರುತ್ತಿದೆ ಇಂಧನ ದರ!
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಾಣುತ್ತಿದ್ದೂ ಭಾರತದಲ್ಲಿ ಮಾತ್ರ ಇಂಧನ ದರ ದಿನೇ ದಿನೇ ಏರುತ್ತಲೇ ಇದೆ. ಇದಕ್ಕೆ ಪ್ರಮುಖವಾಗಿ ಕೋವಿಡ್-19 ಸಂಬಂಧಿತ ಲಾಕ್ ಡೌನ್ ಪರಿಸ್ಥಿತಿ ತಂದಿಟ್ಟ ಸಂಕಷ್ಟವೇ ಕಾರಣವಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಆ ಸಮಯದಲ್ಲಿ ಉಂಟಾಗಿದ್ದ ಆದಾಯ ನಷ್ಟಕ್ಕೆ ಪ್ರತಿಯಾಗಿ ಖಜಾನೆ ಭರ್ತಿಗೆ ಕೇಂದ್ರ ಸರಕಾರ ಮೇ ತಿಂಗಳಲ್ಲಿ ಇಂಧನ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿತ್ತು. ಇದೀಗ ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ತೈಲ ವಿತರಕ ಕಂಪನಿಗಳು ನಿಧಾನಕ್ಕೆ ಬೆಲೆ ಏರಿಸುತ್ತಿದ್ದು, ಲಾಕ್‌ಡೌನ್ ಬಳಿಕ ಬೇಡಿಕೆಯಿಂದ ತತ್ತರಿಸಿದ್ದ ಕಂಪನಿಗಳು ಕಳೆದ 16 ದಿನಗಳಿಂದ ತೈಲ ಬೆಲೆ ಹೆಚ್ಚಳ ಮಾಡುತ್ತಲೇ ಇದೆ.
ಈವರೆಗೂ ಪೆಟ್ರೋಲ್ ಮತ್ತು ಡಿಸೇಲ್ ದರ ಕ್ರಮವಾಗಿ 8.3 ರೂ. ಮತ್ತು 9.46ರೂ.ರಷ್ಟು ಏರಿದೆ. ಈ ಮೂಲಕ 2002ರ ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ ದೇಶೀ ಇಂಧನ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳವಾದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.