ಬ್ಯಾಂಕ್‌ನಿಂದ ಹಣ ಹಿಂಪಡೆಯುವ ಎಲ್ಲ ಮಿತಿಗಳು ಇಂದಿನಿಂದ ರದ್ದು: RBI
Team Udayavani, Mar 13, 2017, 4:03 PM IST
ಮುಂಬಯಿ : ನೋಟು ನಿಷೇಧವನ್ನು ಅನುಸರಿಸಿ ಬ್ಯಾಂಕ್ ಉಳಿತಾಯ ಖಾತೆಯಿಂದ ಹಣ ಹಿಂಪಡೆಯಲು ವಿಧಿಸಲಾಗಿದ್ದ ಎಲ್ಲ ಮಿತಿಗಳನ್ನು ಇಂದು ಸೋಮವಾರ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.
ಎರಡು ಹಂತಗಳ ಪ್ರಕ್ರಿಯೆಯಲ್ಲಿ ಕಳೆದ ಫೆಬ್ರವರಿ 20ರಂದು ವಾರಕ್ಕೆ 24,000 ರೂ.ಗಳಿದ್ದ ಹಣ ಹಿಂಪಡೆಯುವಿಕೆ ಮಿತಿಯನ್ನು 50,000 ರೂ.ಗೆ ಏರಿಸಲಾಗಿತ್ತು. ಇಂದು ಮಾರ್ಚ್ 13ರಂದು, ಎಟಿಎಂ ನಿಂದ ಹಣ ವಿದ್‌ಡ್ರಾ ಮಾಡುವ ಎಲ್ಲ ಮಿತಿಗಳನ್ನು ತೆರವುಗೊಳಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.
ಆರ್‌ಬಿಐ ನ ಡೆಪ್ಯುಟಿ ಗವರ್ನರ್ ಆರ್. ಗಾಂಧಿ ಅವರಿಂದು ಈ ವಿಷಯವನ್ನು ಪ್ರಕಟಿಸಿದರು. ಕಳೆದ ಫೆಬ್ರವರಿ ತಿಂಗಳಲ್ಲಿ ಆರ್‌ಬಿಐ ತನ್ನ ಹಣಕಾಸು ಪರಾಮರ್ಶೆ ನೀತಿಯಲ್ಲಿ ತನ್ನ ಬಡ್ಡಿ ದ್ರವನ್ನು ಶೇ.6.25ರಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡ ಸಂದರ್ಭದಲ್ಲಿ “ಸರಕಾರದ ನೋಟು ಅಪನಗದೀಕರಣದ ಪರಿಣಾಮಗಳ ಪೂರ್ಣ ಅಂಕಿ ಅಂಶಗಳನ್ನು ಆರ್‌ಬಿಐ ಎದುರುನೋಡುತ್ತಿದೆ. ಅದು ಸಿಕ್ಕಿದಾಕ್ಷಣ ಹಣ ಹಿಂಪಡೆಯುವ ಮಿತಿಯ ಪೂರ್ಣ ತೆರವನ್ನು ಪರಿಗಣಿಸಲಾಗುವುದು’ ಎಂದು ಹೇಳಿತ್ತು.
ಜನವರಿ 30ರಂದು ಆರ್‌ಬಿಐ, ಕರೆಂಟ್ ಅಕೌಂಟ್, ಕ್ಯಾಶ್ ಕ್ರೆಡಿಟ್ ಅಕೌಂಟ್ಸ್ ಮತ್ತು ಓವರ್‌ಡ್ರಾಫ್ಟ್ ಅಕೌಂಟ್ಸ್‌ನಿಂದ ಹಣ ಹಿಂಪಡೆಯುವ ಮಿತಿಯನ್ನು ಪೂರ್ತಿಯಾಗಿ ಕೊನೆಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
MUST WATCH
ಹೊಸ ಸೇರ್ಪಡೆ
Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು
Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು
BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
INDWvsIREW: ಜೆಮಿಮಾ ಚೊಚ್ಚಲ ಶತಕ: ದಾಖಲೆಯ ರನ್ ಪೇರಿಸಿದ ಭಾರತ ವನಿತೆಯರು
Manipal: ಮಣ್ಣಪಳ್ಳ ಸ್ವಚ್ಛತೆಗಿಳಿದ ಸಾರ್ವಜನಿಕರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.