ಇ-ವಿಲ್ : ನಿಮ್ಮ ಉತ್ತರಾಧಿಕಾರಿಗೆ ವಿಲ್ ಬರೆಯುವುದಾದರೇ, ಇಲ್ಲಿದೆ ಸುಲಭ ಮಾರ್ಗ!
Team Udayavani, Jun 29, 2021, 3:21 PM IST
ಸಾಮಾನ್ಯವಾಗಿ ಎಲ್ಲರೂ ತಮ್ಮ ಆಸ್ತಿಗಳನ್ನು, ಸಂಪತ್ತುಗಳನ್ನು ವಿಲ್ ಬರೆಸಿ ಹೋಗುತ್ತಾರೆ. ವಿಲ್ ಬರೆಸುವುದೆಂದರೇ ಸುಲಭದಲ್ಲ. ಅದಕ್ಕೇ ಅದರದ್ದೇ ಆದ ರೀತಿ ನೀತಿಗಳಿವೆ. ಮಾತ್ರವಲ್ಲದೇ ಅದೊಂದು ದೀರ್ಘಾವಧಿ ಕೆಲಸ.
ಆದರೇ, ವಿಲ್ ಮಾಡಿಸಲು ಹರಸಾಹಸ ಪಡಬೇಕೆಂದಿಲ್ಲ, ವಕೀಲರಿಗೆ ಹಣ ಪಾವತಿಸಬೇಕಿಲ್ಲ, ಪ್ರಪಂಚವೇ ಡಿಜಿಟಲ್ ನತ್ತ ಮುಖ ಮಾಡುತ್ತಿದೆ. ಅಂತಹ ಸಂದರ್ಭದಲ್ಲಿ ಈಗ ಡಿಜಿಟಲ್ ನಲ್ಲಿ ವಿಲ್ ಕೂಡ ಮಾಡಬಹುದಾಗಿದೆ. ಆನ್ ಲೈನ್ ಮೂಲಕ ಕೆಲವೇ ಕೆಲವು ನಿಮ್ಮ ಬೆರಳ ತುಡಿಯ ಕ್ಲಿಕ್ಸ್ ಗಳಿಂದ ನೀವು ಯಾರಿಗೆ ವಿಲ್ ಬರೆಯಬೇಕೆಂದಿದ್ದೀರೋ ಅವರಿಗೆ ವಿಲ್ ಬರೆದು ಮುಗಿಸಬಹುದು. ಅದು ಕೂಡ ಕೇಲವ ಅರ್ಧ ಗಂಟೆಯಲ್ಲಿ ಎಂದರೇ, ನೀವು ಆಶ್ಚರ್ಯ ಪಡಬೇಕೆಂದಿಲ್ಲ.
ಇದನ್ನೂ ಓದಿ : ಆತೂರು ಗೂಡ್ಸ್ ವಾಹನ ಢಿಕ್ಕಿ ಹೊಡೆದು ಸವಾರ ಸಾವು: ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ
ಆನ್ ಲೈನ ಮೂಲಕ ವಕೀಲರ ಸಹಾಯವಿಲ್ಲದೇ ವಿಲ್ ಬರೆಸಬಹುದು. ಹಾಗೂ ಅಲ್ಲಿ ಲೋಪ ದೋಷಗಳನ್ನು ಕೂಡ ಸರಿಪಡಿಸಬಹುದಾಗಿದೆ.
ಆನ್ ಲೈನ್ ನಲ್ಲಿ ವಿಲ್ ಬರೆಯುವ ಹಂತಗಳು ಈ ಕೆಳಗಿನಂತಿವೆ..!
*ವೆಬ್ ಸೈಟ್‌ನಲ್ಲಿ, ಲಾಗಿನ್ ಐಡಿಯನ್ನು ನೋಂದಾಯಿಸಿ ಮತ್ತು ಕ್ರಿಯೇಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
*ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಗಳನ್ನು ಬಳಸಿಕೊಂಡು ಆನ್ ಲೈನ್‌ನಲ್ಲಿ (3,000 ರಿಂದ 5,000 ರೂ.) ಶುಲ್ಕವನ್ನು ಪಾವತಿಸಬಹುದು.
*ಈ ಕೆಳಗಿನ ವರ್ಗಗಳಿಂದ ಆರಿಸಿಕೊಳ್ಳಿ : ಲಿಂಗ, ಧರ್ಮ, ನಿವಾಸ ಸ್ಥಿತಿ, ಉದ್ಯೋಗ ಮತ್ತು ರಾಷ್ಟ್ರೀಯತೆ (ಭಾರತೀಯ / ಎನ್ ಆರ್ ಐ) ಇವೆಲ್ಲವೂ ಪರಿಗಣಿಸಬೇಕಾದ ಅಂಶಗಳಾಗಿವೆ.
*ನಿಮ್ಮ ಕುಟುಂಬದ ಎಲ್ಲ ಸದಸ್ಯರ ಮಾಹಿತಿ ಮತ್ತು ನಿಮ್ಮ ಎಲ್ಲಾ ಸ್ವತ್ತುಗಳ ಮಾಹಿತಿ ಭರ್ತಿ ಮಾಡಿ.
*ನಿಮ್ಮ ಉತ್ತರಾಧಿಕಾರಿಗಳಿಗೆ ನೀವು ಅಧಿಕಾರ ನೀಡಲು ಬಯಸುವ ಸ್ವತ್ತುಗಳ ವಿವರಗಳನ್ನು ಭರ್ತಿ ಮಾಡಿ.
*ಸಬ್ ಮಿಟ್ ಬಟನ್ ಕ್ಲಿಕ್ ಮಾಡುವ ಮೂಲಕ ಇ-ವಿಲ್ ಅಥವಾ ಡಿಜಿಟಲ್ ವಿಲ್ ನನ್ನು ಸಲ್ಲಿಸಿ ಅಥವಾ ಇ-ವಿಲ್ ಜನರೇಟ್ ಮಾಡಿ.
*ಅರ್ಹ ವಕೀಲರಿಂದ ವಿಲ್ ನ ಕರಡು ಮಾಡಲು ಅರ್ಹ ಡಿಜಿಟಲ್ ವಿಲ್ ಸೇವಾ ಪೂರೈಕೆದಾರರು ನೀಡುತ್ತಾರೆ.
*ನಕಲು ಕರಡು ನಿಮಗೆ ಕಳುಹಿಸಲಾಗುವುದು.
*ಅದನ್ನು ಪರೀಕ್ಷಿಸಿ. ಲೋಪದೋಷಗಳನ್ನು ತಿದ್ದುಪಡಿ ಮಾಡಿ.
*ವಿಲ್ನ ಅಂತಿಮ ಕರಡನ್ನು ನಿಮಗೆ ಇ ಮೇಲ್ ಮೂಲಕ ಕಳುಹಿಸಲಾಗುತ್ತದೆ. ವಿಲ್ ನ ಕಾಯಂಪ್ರತಿಗಳ ಸಹಿಗೆ ಅಗತ್ಯವಾದ ಮಾರ್ಗಸೂಚಿಗಳ ಕುರಿತ ಮಾಹಿತಿಯೊಂದಿಗೆ ನಿಮ್ಮ ಮನೆಗೆ ಕಳಹಿಸಲಾಗುತ್ತದೆ.
*ನಿಮ್ಮ ವಿಲ್ನ ಮಾನ್ಯತೆಯನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಸಹಿ ಮಾಡಿ
ಇ-ವಿಲ್ ನ ಪ್ರಯೋಜನಗಳು ಏನೇನು..?
*ಇ- ವಿಲ್ ರಚಿಸುವ ಪ್ರಕ್ರಿಯೆಯು ಸರಳ, ಅವಲಂಬನೆಯ ಅಗತ್ಯವಿಲ್ಲ ಮತ್ತು ಹೊಂದಿಕೊಳ್ಳಬಲ್ಲದು.
*ಇದು ಸಮಯವನ್ನು ಕಾಪಾಡುತ್ತದೆ, ಭದ್ರತೆ ಹೆಚ್ಚಿರುತ್ತದೆ ಮತ್ತು ಡೇಟಾವನ್ನು ಖಾಸಗಿಯಾಗಿರಿಸುತ್ತದೆ.
*ವೃತ್ತಿಪರ ವಕೀಲರು ಇ-ವಿಲ್ ಸಿದ್ಧಪಡಿಸುತ್ತಾರೆ.
*ನಿಮ್ಮ ಎಲ್ಲಾ ಆಸ್ತಿ ಮಾಹಿತಿಯನ್ನು ಸಂಘಟಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
*ಸಂಪತ್ತಿನ ಹಂಚಿಕೆಯನ್ನು ಭದ್ರಪಡಿಸುವ ಸರಳ ವಿಧಾನ.
*ಸೇವೆ ಸಮಂಜಸವಾದ ವೆಚ್ಚದಲ್ಲಿ ಲಭ್ಯವಿದೆ.
*ಇ-ವೆಬ್‌ಸೈಟ್ ವಿಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಇದನ್ನೂ ಓದಿ : ಸಾಲ ತಂದಾದರೂ ನೀರಾವರಿ ಯೋಜನೆಗಳ ಕಾಮಗಾರಿ ಮುಗಿಸುತ್ತೇವೆ: ಸಿಎಂ ಯಡಿಯೂರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.