ಕೋವಿಡ್ 19 : ದೇಶೀಯ ವಿಮಾನಯಾನ ಇನ್ಮುಂದೆ ದುಬಾರಿ..!
Team Udayavani, May 30, 2021, 2:41 PM IST
ನವ ದೆಹಲಿ : ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದ ಮಿತಿಯನ್ನು ಶೇಕಡ 13 ರಿಂದ 16 ಕ್ಕೆ ಏರಿಸಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.
ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದ ಜಾರಿಗೆ ಬರಲಿರುವ ಕಾರಣ ವಿಮಾನಯಾನ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.
40 ನಿಮಿಷಗಳಿಂತ ಕಡಿಮೆ ಅವಧಿ ಇರುವ ದೇಶದ ಒಳಗಿನ ವಿಮಾನಯಾನದ ವೆಚ್ಚ ದುಬಾರಿಯಾಗಲಿದ್ದು, 2,300 ರೂಪಾಯಿಗಳಿಂದ 2,600 ರೂಪಾಯಿಗಳಿಗೆ ಏರಿಸಲಾಗಿದೆ. ಈಗಿರುವ ದರದ ಶೇಕಡಾ 13 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಪ್ರೇಮಲೋಕದ ದೊರೆ
2,900 ರೂ ವೆಚ್ಚದಲ್ಲಿ 40 ನಿಮಿಷದಿಂದ ಒಂದು ಗಂಟೆಯ ನಡುವಿನ ವಿಮಾನಯಾನವನ್ನು 3,300 ರೂ. ಗೆ ಏರಿಸಲಾಗಿದೆ. ಇನ್ನು, 60 ರಿಂದ 90 ನಿಮಿಷಗಳ ನಡುವಿನ ವಿಮಾನಯಾನಕ್ಕೆ 4,000 ರೂ, 90 ರಿಂದ 120 ನಿಮಿಷಗಳ ವಿಮಾನಯಾನಕ್ಕೆ 4,700 ರೂ, 150 ರಿಂದ 180 ನಿಮಿಷಗಳ ವಿಮಾನ ಯಾನಕ್ಕೆ 6,100 ರೂ. ಹಾಗೂ 180 ರಿಂದ 210 ನಿಮಿಷಗಳ ವಿಮಾನಯಾನಕ್ಕೆ 7,400 ರೂ. ನಿಗದಿಪಡಿಸಲು ಸಚಿವಾಲಯ ನಿರ್ಧರಿಸಿದೆ.
Airfare charges increased with effect from 1st June 2021
With respect to amount of fares to be charged by the Airlines for journey on a particular sector, the sectors classified on basis of approx duration of flight & for such classes, the min & max fares chargeable are as under pic.twitter.com/Rb5NTjnmMV
— ANI (@ANI) May 29, 2021
ಈ ಬಗ್ಗೆ ಪ್ರತಿಕ್ರಿಯೆ ನಿಡಿದ ವಿಮಾನಯಾನ ಸಚಿವಾಲಯ, ಕೋವಿಡ್ ಸೋಂಕಿನ ಕಾರಣದಿಂದಾಗಿ ವಿಮಾನ ಮಾಡುವ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವುದೇ ವಿಮಾನಯಾನ ದರದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
“ದೇಶಾದ್ಯಂತ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹಠಾತ್ ಏರಿಕೆ, ಪ್ರಯಾಣಿಕರ ಸಂಖ್ಯೆ ಕುಸಿದಿರುವುದನ್ನು ಗಮನದಲ್ಲಿಟ್ಟುಕೊಂಡು, ಈಗಿರುವ ಶೇಕಡಾ .80 ರಷ್ಟು ಸಾಮರ್ಥ್ಯದ ಕ್ಯಾಪ್ ನನ್ನು ಶೇಕಡಾ 50 ರಷ್ಟು ಸಾಮರ್ಥ್ಯ ಎಂದು ಪರಿಗಣಿಸಬಹುದು” ಎಂದು ಸಚಿವಾಲಯದ ಆದೇಶ ಹೇಳಿದೆ.
ಇದನ್ನೂ ಓದಿ : ತೆಂಕಿಲ : ಮಹಿಳೆಯೋರ್ವರ ಕರಿಮಣಿ ಸರ ಎಳೆದು ಬೈಕ್ ನಲ್ಲಿ ಪರಾರಿಯಾದ ಅಪರಿಚಿತರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.