ಚೇತರಿಕೆ ಕಾಣದ ವಾಹನೋದ್ಯಮ ಕ್ಷೇತ್ರ, ಜನವರಿ ಮಾಸಿಕದಲ್ಲಿ ಶೇ.6.2ರಷ್ಟು ಕುಸಿತ
Team Udayavani, Feb 12, 2020, 5:36 PM IST
ಹೊಸದಿಲ್ಲಿ: ಜನವರಿ ಮಾಸಿಕದಲ್ಲಿ ದೇಶಿಯ ವಾಹನ ಮಾರಾಟವು ಶೇ.6.2ರಷ್ಟು ಕುಸಿತವಾಗಿದೆ ಎಂದು ಭಾರತೀಯ ವಾಹನ ಮಾರಾಟ ಸಂಘಟನೆ (ಸಿಯಾಮ್) ತಿಳಿಸಿದೆ.
17 ಸಾವಿರದಷ್ಟು ಇಳಿಕೆ
ಕಳೆದ ವರ್ಷ ಇದೇ ಅವಧಿಯಲ್ಲಿ 2,80,091 ವಾಹನಗಳು ಮಾರಾಟ ಆಗಿದ್ದು, ಈ ವರ್ಷ 2,62,714 ಯೂನಿಟ್‌ಗಳಷ್ಟು ಮಾರಾಟವಾಗಿದೆ. ಅಂದರೆ ಇದರ ಪ್ರಮಾಣದಲ್ಲಿ 17,377ರಷ್ಟು ಇಳಿಕೆಯಾಗಿದೆ.
ಕಾರುಗಳ ಮಾರಾಟವೂ ಕುಸಿತ
ಕಾರುಗಳ ಮಾರಾಟದಲ್ಲಿ ಶೇ.8.1ರಷ್ಟು ಮಾರಾಟ ಕುಸಿದಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ 1,79,324 ಯೂನಿಟ್ ಗಳು ಮಾರಾಟ ಆಗಿತ್ತು. ಆದರೆ ಈ ಬಾರಿ 1,64,793 ಯೂನಿಟ್‌ಗಳಷ್ಟು ಸೇಲ್ ಆಗಿವೆ ಎಂದು ಸಿಯಾಮ್ ಇತ್ತೀಚಿನ ದತ್ತಾಂಶಗಳ ಮೂಲಕ ತಿಳಿಸಿದೆ.
ದ್ವಿಚಕ್ರ ವಾಹನಗಳ ಮಾರಾಟದಲ್ಲೂ ಹಿನ್ನಡೆ
ಮೋಟಾರ್ ಸೈಕಲ್ ಬೆಳವಣಿಗೆ ದರ ಸಹ ಶೇ.15.17ರಷ್ಟು ಇಳಿಕೆಯಾಗಿದೆ. ಈ ವರ್ಷ 8,71,886 ವಾಹನಗಳು ಮಾರಾಟ ಆಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 10,27,766 ವಾಹನಗಳು ಮಾರಾಟ ಆಗಿತ್ತು. ಇದರೊಂದಿಗೆ ದ್ವಿಚಕ್ರ ವಾಹನ ಮಾರಾಟವು ಶೇ.16.06ರಷ್ಟು ಕುಸಿತ ಕಂಡಿದೆ. ಈ ಹಿಂದಿನ ವರ್ಷದಲ್ಲಿ 15,97,528 ಯೂನಿಟ್‌ಗಳಿಗೆ ಪ್ರತಿಯಾಗಿ 13,41,005 ವಾಹನಗಳು ಮಾರಾಟ ಆಗಿವೆ ಎಂದು ವರದಿ ತಿಳಿಸಿದೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.14.04ರಷ್ಟು ಕುಸಿತ ಕಂಡು ಬಂದಿದೆ. 75,289 ಯೂನಿಟ್‌ಗಳು ಮಾರಾಟ ಆಗಿವೆ ಎಂದು ಸಿಯಾಮ್ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.