ಏಕಸ್ವಾಮ್ಯ ದುರ್ಬಳಕೆ: ಗೂಗಲ್‌ಗೆ EU ದಾಖಲೆಯ 2.7 ಬಿಲಿಯ ಯೂರೋ ದಂಡ
Team Udayavani, Jun 27, 2017, 4:01 PM IST
ಲಂಡನ್ : ಇಂಟರ್‌ನೆಟ್ ಸರ್ಚ್ ನಲ್ಲಿನ ಏಕಸ್ವಾಮ್ಯವನ್ನು ದುರುಪಯೋಗಿಸಿಕೊಂಡ ತಪ್ಪಿಗೆ ಐರೋಪ್ಯ ಒಕ್ಕೂಟವು ಗೂಗಲ್‌ಗೆ ಈ ವರೆಗಿನ ದಾಖಲೆಯನ್ನೇ ಮುರಿದಿರುವ, 2.4 ಬಿಲಿಯ ಯೂರೋ ಅಥವಾ 2.7 ಬಿಲಿಯ ಡಾಲರ್‌ಗೂ ಅಧಿಕ ಮೊತ್ತದ ದಂಡವನ್ನು ಇಂದು ಮಂಗಳವಾರ ಹೇರಿದೆ.
ಗೂಗಲ್ ತನ್ನ ಹೊಸ ಶಾಪಿಂಗ್ ಸೇವೆಗೆ ಅನುಕೂಲವಾಗುವ ರೀತಿಯಲ್ಲಿ ತನ್ನ ಸರ್ಚ್ ಇಂಜಿನ್ ಫಲಿತಾಂಶಗಳು ಮೂಡಿ ಬರುವ ಹಾಗೆ ಕೈಚಳಕ ತೋರಿದೆ ಎಂದು ಆರೋಪಿಸಲಾಗಿದ್ದು ಈ ಕೃತ್ಯವನ್ನು ಅದು ಕಡಿಮೆ ವೆಚ್ಚ ಹೋಲಿಕೆಯ ವೆಬ್‌ಸೈಟ್‌ಗಳನ್ನು ಬಲಿಕೊಡುವ ರೀತಿಯಲ್ಲಿ ಮಾಡಿದೆ ಎಂದು ಆರೋಪಿಸಲಾಗಿದೆ.
ಭಾರತ ಸಂಜಾತ ಸುಂದರ್ ಪಿಚೈ ಅವರು ಪ್ರಕೃತ ಗೂಗಲ್‌ನ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2009ರಲ್ಲಿ ಇಂಟೆಲ್ ಮೇಲೆ ಹೇರಲಾಗಿದ್ದ ಮತ್ತು ಅದು ಪಾವತಿಸಿರುವ 1.1 ಬಿಲಿಯ ಯೂರೋಗಳ ದಂಡವು ಈ ವರೆಗಿನ ಗರಿಷ್ಠ ದಂಡ ಮೊತ್ತವಾಗಿತ್ತು.
ಗೂಗಲ್ ತನ್ನ “ಶೋಧ ಫಲಿತಾಂಶ’ಗಳು (search resuls) ತನ್ನ ಸೇವೆಗಳಿಗೆ ಅನುಕೂಲಿಸದಂತೆ ಮಾಡುವ ಬದಲಾವಣೆಗಳನ್ನು ತರುವಂತೆ ಐರೋಪ್ಯ ಒಕ್ಕೂಟ ಅದನ್ನು ಬಲವಂತ ಪಡಿಸಲಿದೆ ಎಂದು ಟೆಲಿಗ್ರಾಫ್ ಡಾಟ್ ಕೋ ಡಾಟ್ ಯುಕೆ ವರದಿ ಮಾಡಿದೆ.
ಗೂಗಲ್ ತನ್ನ ಸರ್ಚ್ ಇಂಜಿನ್ ಅನ್ನು ತನ್ನದೇ ಇತರ ಸೇವೆಗಳಿಗೆ (ವಿಶೇಷವಾಗಿ ಶಾಪಿಂಗ್ ಸೇವೆ) ಅನುಕೂಲಿಸುವ ರೀತಿಯಲ್ಲಿ ತೋರಿರುವ ತಾಂತ್ರಿಕ ಕೈಚಳಕವು ಏಕಸ್ವಾಮ್ಯ ಕಾನೂನುಗಳ ದುರ್ಬಳಕೆಯಾಗಿದ್ದು ಐರೋಪ್ಯ ಒಕ್ಕೂಟವು ಈ ಕುರಿತ ತನಿಖೆಯನ್ನು 2010ರಲ್ಲೇ ಆರಂಭಿಸಿತ್ತು. ಇದರಿಂದ ಇತರ ದರ-ವ್ಯತ್ಯಾಸದ ವೆಬ್‌ಸೈಟ್‌ಗಳು ಅಪಾರ ನಷ್ಟಕ್ಕೆ ಗುರಿಯಾಗಿದ್ದವು.
ಯುರೋಪ್ ಇಂಟರ್‌ನೆಟ್ ಸರ್ಚ್‌ನಲ್ಲಿ ಗೂಗಲ್ ಶೇ.90ರ ಪಾಲನ್ನು ಹೊಂದಿದೆ. ಹೀಗಾಗಿ ಇಂಟರ್‌ನೆಟ್ ಬಳಕೆದಾರರು ಅಂತರ್ಜಾಲವನ್ನು ಯಾವ ರೀತಿ ಜಾಲಾಡಬೇಕೆಂಬುದನ್ನು ನಿರ್ದೇಶಿಸುವ ಅತ್ಯಂತ ಪ್ರಬಲ ಉಪಕರಣ ಗೂಗಲ್ ಕೈಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ
Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.