ಫೇಸ್‌ಬುಕ್‌ನಿಂದ ಅಂಗಡಿ ಸೇವೆ ಶುರು
ಸಣ್ಣ ವ್ಯಾಪಾರಿಗಳಿಗೆ ನೆರವಾಗುವ ಉದ್ದೇಶ
Team Udayavani, May 21, 2020, 4:51 AM IST
ಸಾಂದರ್ಭಿಕ ಚಿತ್ರ
ಮುಂಬೈ: ಜಿಯೋ ಮೊಬೈಲ್‌ನಲ್ಲಿ ಶೇ.9.99ರಷ್ಟು ಷೇರು ಖರೀದಿಸಿರುವ ಫೇಸ್ ಬುಕ್, ಜಿಯೋದ ಇ-ಕಾಮರ್ಸ್ ಕನಸಿಗೆ ನೆರವಾಗಲು ಸಿದ್ಧವಾಗಿದೆ. ಅದರ ಬೆನ್ನಲ್ಲೇ ತಾನೂ ಕೂಡ ಪರೋಕ್ಷವಾಗಿ ಚಿಲ್ಲರೆ ಇ-ಕಾಮರ್ಸ್ ಕ್ಷೇತ್ರಕ್ಕೆ ಕಾಲಿಟ್ಟಿದೆ.
ಅದು ಶಾಪ್ಸ್ ಎಂಬ ಹೊಸ ಸೇವೆಯನ್ನು ತನ್ನ ಬಳಕೆದಾರರಿಗೆ ತೆರೆದಿದೆ. ಯಾವುದೇ ವ್ಯಾಪಾರಿಗಳು, ತಮ್ಮ ವ್ಯಾಪ್ತಿ, ವಿಸ್ತಾರದ ಚಿಂತೆಯಲ್ಲಿದೇ ಫೇಸ್
ಬುಕ್‌ನ ಈ ಸೇವೆಯನ್ನು ಬಳಸಿಕೊಳ್ಳಬಹುದು. ಅದರಲ್ಲೂ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲೆಂದೇ, ತಾನು ಈ ಸೇವೆಯನ್ನು ಆರಂಭಿಸಿದ್ದೇನೆ. ಜನ ಪ್ರಯಾಸಪಟ್ಟು ಕೊಳ್ಳುವುದಕ್ಕಿಂತ, ಅವರಿಗೆ ಅದು ಆನಂದವಾಗಬೇಕು ಎಂದು ಫೇಸ್‌ಬುಕ್ ಪರವಾಗಿ ಸಿಇಒ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.
ಹೇಗೆ ನೋಂದಣಿ?: ಫೇಸ್‌ಬುಕ್‌ನ ಶಾಪ್ಸ್ ಸೇವೆ ಇನ್ಸ್ಟಾಗ್ರಾಮ್ ಬಳಕೆದಾರರಿಗೂ ಸಿಗುತ್ತದೆ. ಫೇಸ್ ಬುಕ್‌ನಲ್ಲಿ ಗ್ರಾಹಕರು ಶಾಪ್ಸ್‌ಗೆ ತಮ್ಮ ಒಂದು
ಅಂಗಡಿಯನ್ನು ನೋಂದಣಿ ಮಾಡಬೇಕು. ಅಲ್ಲಿ ತಮ್ಮಲ್ಲಿರುವ ವಸ್ತುಗಳನ್ನು ತೋರಿಸಬಹುದು. ಜೊತೆಗೆ ತಮ್ಮ ಅಂಗಡಿಯ ಚಿತ್ರ ಹಾಕಿ, ವಿಶಿಷ್ಟ
ಬಣ್ಣವನ್ನು ಬಳಸಿ ಇನ್ನೂ ಅಂದಗಾಣಿಸಬಹುದು! ಈ ವ್ಯಾಪಾರಿಗಳಿಗೆ ಫೇಸ್‌ಬುಕ್, ಗ್ರಾಹಕರನ್ನು ತಲುಪಲು ತಾನೇ ನೆರವು ನೀಡಲಿದೆ. ಅಂದರೆ
ವಾಟ್ಸ್‌ಆ್ಯಪ್, ಮೆಸೆಂಜರ್, ಇನ್ಸ್ಟಾಗ್ರಾಮ್ ಮೂಲಕ ಜನರಿಗೆ ಸಂದೇಶ ಕಳುಹಿಸಬಹುದು. ಜನರು ಕೇಳಿದ ವಸ್ತುಗಳನ್ನು ಅವರ ಮನೆಗೆ ತಲುಪಿಸುವುದು ಮಾತ್ರ ಅಂಗಡಿಯವರ ಕೆಲಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.