ಆರ್ಥಿಕ ಕುಸಿತಕ್ಕೆ ಕೃಷಿಕನ ತಡೆಗೋಡೆ
Team Udayavani, May 7, 2020, 11:04 AM IST
ಸಾಂದರ್ಭಿಕ ಚಿತ್ರ
ಭಾರತ ಕೃಷಿ ಪ್ರಧಾನ ದೇಶ ಎಂದು ನಾವು ಚಿಕ್ಕ ವಯಸ್ಸಿನಿಂದಲೇ ಓದುತ್ತಾ ಬಂದಿದ್ದೇವೆ. ಖಾಸಗೀಕರಣ ಬಂದ ನಂತರ ಇಂತಹ ಮಾತು ಕೇಳುವುದು ಕಡಿಮೆಯಾಗಿತ್ತು. ಇದೀಗ ಕೋವಿಡ್ 19 ವೈರಸ್‌ನಿಂದ ಇತರೆ ಉದ್ಯಮಗಳು ಬಾಗಿಲು ಹಾಕಿಕೊಂಡಿವೆ. ಈಗ ಮತ್ತೆ ಕೃಷಿಯೇ ಬೆಳಕಾಗಬೇಕಾಗಿ ಬಂದಿದೆ.
ಕೋವಿಡ್ 19
ಕೃಷಿಯಿಂದ ದೇಶದ ಜಿಡಿಪಿಗೆ ಸಿಗುವ ಪಾಲು ಶೇ.16ರಷ್ಟು ಮಾತ್ರ. ಆದರೆ ದೇಶದ ಉದ್ಯೋಗಿಗಳಲ್ಲಿ ಶೇ.55ರಷ್ಟು ಕೃಷಿಯಲ್ಲೇ ಜೀವನ ಕಂಡುಕೊಂಡಿದ್ದಾರೆ. ಇದು ಕೃಷಿಕ್ಷೇತ್ರದ ಮಹತ್ವವನ್ನು ತೋರಿಸುವ ಸಂಗತಿ.
ಉತ್ತಮ ಮುಂಗಾರು ಮಳೆ ನಿರೀಕ್ಷೆ
ಭಾರತೀಯ ಹವಾಮಾನ ಇಲಾಖೆ, ಈ ಬಾರಿ ಮುಂಗಾರು ಮಳೆ ಸ ಮ ಯಕ್ಕೆ ಸರಿಯಾಗಿ ಶುರುವಾಗಿ ಉತ್ತ ಮ ವಾಗಿ ಬೀಳುವ ಸೂಚನೆ ನೀ ಡಿದೆ. ಆದರೂ ಕೋವಿಡ್ 19 ಪರಿಣಾಮ ನೀರಿಗಾಗಿ ಬೇಡಿಕೆ ಹೆಚ್ಚಿದೆ.
ದಾಖಲೆಯ ಧಾನ್ಯ ಉತ್ಪಾದನೆ ನಿರೀಕ್ಷೆ
ಈ ಬಾರಿ ಮುಂಗಾರು ಮತ್ತು ಹಿಂಗಾರು ಸೇರಿ ಭಾರತ ದಲ್ಲಿ 300 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗುವ ನಿರೀಕ್ಷೆಯಿದೆ. 149.92 ಮಿಲಿಯನ್ ಟನ್ (ಮುಂಗಾರು
ಬೆಳೆ), 148.4 ಮಿಲಿ ಯನ್ ಟನ್ (ಹಿಂಗಾರು ಬೆಳೆ) ಬರುವ ಲಕ್ಷಣ ಈಗಾಗಲೇ ಸಿಕ್ಕಿದೆ.
ಆರ್ಥಿಕ ಹಿಂಜರಿತಕ್ಕೆ ತಡೆ
2020-21ರಲ್ಲಿ ಕೃಷಿ ಶೇ.3ರಷ್ಟು ಉತ್ಪಾದನೆ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ದೇಶದ ಜಿಡಿಪಿ ಪ್ರಗತಿದರ ಶೇ.0.5ರಷ್ಟು ಏರಲಿದೆ. ಹಾಗಾಗಿ ಆರ್ಥಿಕ ಹಿಂಜರಿತಕ್ಕೆ ತಡೆಯಾಗಿ ನಿಲ್ಲಬಹುದು ಎಂಬ ಆಶಾಭಾವವಿದೆ. ರೈತರು ಆಹಾರ ಧಾನ್ಯಗಳೊಂದಿಗೆ ವಾಣಿಜ್ಯ ಬೆಳೆ ಬೆಳೆಯುವುದೂ ಇದಕ್ಕೆ ಕಾರಣ.
ಇತರೆ ಉದ್ಯಮಗಳ ಸ್ಥಿತಿ
27.4 ಶೇ. ಖರೀದಿ ಮತ್ತು ತಯಾರಿಕಾ (ಪಿಎಂ) ಸೂಚ್ಯಂಕದ ಪ್ರಕಾರ, ಏಪ್ರಿಲ್‌ನಲ್ಲಿ ಇತರೆ ಉದ್ಯಮಗಳ ಉತ್ಪಾದನೆ ಪ್ರಮಾಣ ಕುಸಿತ.
51.8 ಶೇ
ಪಿಎಂ ಸೂಚ್ಯಂಕದ ಪ್ರಕಾರ ಮಾರ್ಚ್ ತಿಂಗಳಲ್ಲಿ ಇದ್ದ ಉತ್ಪಾದನೆ ಪ್ರಮಾಣ.
80 ಶೇ.
ಸಿಐಐ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಸಹಜಸ್ಥಿತಿ ಮರುಕಳಿಸಲು ಕನಿಷ್ಠ 6 ತಿಂಗಳು ಬೇಕು ಎಂದ ಸಿಇಒಗಳ ಪ್ರಮಾಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.