The Big Billion Days 2024 ಗೆ ಫ್ಲಿಪ್ ಕಾರ್ಟ್ ಸಜ್ಜು: ಪೂರೈಕೆ ಜಾಲದ ವಿಸ್ತರಣೆ
Team Udayavani, Sep 4, 2024, 2:57 PM IST
ಬೆಂಗಳೂರು: ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ವಾರ್ಷಿಕ ಫ್ಲ್ಯಾಗ್ ಶಿಪ್ ಕಾರ್ಯಕ್ರಮವಾಗಿರುವ ದಿ ಬಿಗ್ ಬಿಲಿಯನ್ ಡೇಸ್ (TBBD) 2024 ಆವೃತ್ತಿಗೆ ಸಕಲವಾಗಿ ಸಜ್ಜುಗೊಂಡಿದೆ.
ಟಿಬಿಬಿಡಿ 2024 ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ದೇಶದ 9 ನಗರಗಳಲ್ಲಿ ಇನ್ನೂ 11 ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಆರಂಭಿಸಿದೆ. ಈ ಮೂಲಕ ಫ್ಲಿಪ್ ಕಾರ್ಟ್ ದೇಶಾದ್ಯಂತ ಒಟ್ಟು 83 ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಹೊಂದಿದಂತಾಗಿದೆ. ತನ್ನ ಸಾಮಾಜಿಕ-ಆರ್ಥಿಕಾಭಿವೃದ್ಧಿ ಬದ್ಧತೆಯೊಂದಿಗೆ ಫ್ಲಿಪ್ ಕಾರ್ಟ್ ದೇಶದೆಲ್ಲೆಡೆ ತನ್ನ ವಿತರಣಾ ಜಾಲದಲ್ಲಿ 1 ಲಕ್ಷಕ್ಕೂ ಅಧಿಕ ಹೊಸ ಉದ್ಯೋಗ ಸೃಷ್ಟಿ ಮಾಡುತ್ತಿದೆ.
ಇದು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವ ಮೂಲಕ ಫ್ಲಿಪ್ ಕಾರ್ಟ್ ನ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಇನ್ವೆಂಟರಿ ಮ್ಯಾನೇಜರ್ ಗಳು, ಲಾಜಿಸ್ಟಿಕ್ ಅಸೋಸಿಯೇಟ್ಸ್, ಕಿರಾಣ ಪಾಲುದಾರರು ಮತ್ತು ವಿತರಣೆಗಾರರು ಸೇರಿದಂತೆ ವಿವಿಧ ಸಪ್ಲೈ ಚೈನ್ ಗಳನ್ನು ಸದೃಢಗೊಳಿಸಲಾಗುತ್ತದೆ.
ವಿಶೇಷವಾಗಿ ಮುಂಬರುವ ಹಬ್ಬದ ಸೀಸನ್ ನಲ್ಲಿ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ಫ್ಲಿಪ್ ಕಾರ್ಟ್ ತಡೆರಹಿತ ವಿತರಣಾ ಜಾಲ ಕಾರ್ಯಾಚರಣೆಗಳು, ಆಟೋಮೋಟೆಡ್ ವೇರ್ ಹೌಸ್ ಗಳಿಂದ ಡೇಟಾ ಚಾಲಿತ ನಿರ್ಧಾರ ಕೈಗೊಳ್ಳುವವರೆಗೆ ಕಾರ್ಯಾಚರಣೆಯ ದಕ್ಷತೆ ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುವ ದಿಸೆಯಲ್ಲಿ ಫ್ಲಿಪ್ ಕಾರ್ಟ್ ತಾಂತ್ರಿಕ ಪರಿಹಾರ ಗಳನ್ನು ಅಳವಡಿಸಿಕೊಂಡಿದೆ.
ಟಿಬಿಬಿಡಿ 2024 ರ ಸಂದರ್ಭದಲ್ಲಿ ವೇಗವಾಗಿ ಮತ್ತು ಅತ್ಯಂತ ಹೆಚ್ಚು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸುತ್ತದೆ. ಇದಲ್ಲದೇ, ಹಬ್ಬದ ಸೀಸನ್ ಪೂರ್ವದಲ್ಲಿ ಹೊಸ ಉದ್ಯೋಗಿಗಳಿಗೆ ಸಮಗ್ರ ರೀತಿಯಲ್ಲಿ ಕೌಶಲ್ಯ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅವರನ್ನು ಸಜ್ಜುಗೊಳಿಸಲಾಗುತ್ತದೆ. ಈ ಹೊಸ ನೇಮಕಾತಿಗಳು ಫ್ಲಿಪ್ ಕಾರ್ಟ್ ನ ಸಪ್ಲೈ ಚೈನ್ ಅನ್ನು ವೈವಿಧ್ಯಮಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವೆಂದರೆ, ಮಹಿಳೆಯರು, ವಿಕಲಚೇತನರು ಮತ್ತು LGBTQAI+ ಸಮುದಾಯದವರಿಗೆ ಉದ್ಯೋಗಗಳನ್ನು ನೀಡುವತ್ತ ಫ್ಲಿಪ್ ಕಾರ್ಟ್ ಗಮನಹರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Havyaka Mahasabha: ಡಿ.27ರಿಂದ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.