ಮೂಲ ಸೌಕರ್ಯಗಳೊಂದಿಗೆ ಹಣಕಾಸು ಸಂಸ್ಥೆಗಳ ಅಭಿವೃದ್ಧಿ : ನಿರ್ಮಲಾ ಸೀತಾರಾಮನ್
Team Udayavani, Mar 17, 2021, 1:15 PM IST
ನವ ದೆಹಲಿ : ದೀರ್ಘಕಾಲೀನ ಮೂಲ ಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿ ಎಫ್ ಐ) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಮಂಗಳವಾರ(ಮಾ.16) ನಿರ್ಧರಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಂಸ್ಥೆಯನ್ನು ಬಂಡವಾಳ ಸ್ನೇಹಿಯಾಗಿ ಮಾಡಲು ಸರ್ಕಾರ ಈಗಾಗಲೇ 2021 ರ ಬಜೆಟ್‌ನಲ್ಲಿ 20,000 ಕೋಟಿ ಹಣವನ್ನು ಎಫ್ ವೈ(ಫೈನಾನ್ಶಿಯಲ್ ಈಯರ್/ಆರ್ಥಿಕ ವರ್ಷ) 22 ರಲ್ಲಿ ನಿಗದಿಪಡಿಸಿದೆ.
ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 128 ಅಂಕ ಏರಿಕೆ, ನಿಫ್ಟಿ 14,940ಕ್ಕೆ ಕುಸಿತ
“ಪರ್ಯಾಯ ಹೂಡಿಕೆ ನಿಧಿಯನ್ನು ಹೊಂದಲು ಈ ಪ್ರಯತ್ನಗಳನ್ನು ಕೈಗೆತ್ತಿಕೊಳ್ಳಲಾಯಿತು, ಆದರೆ ವಿವಿಧ ಕಾರಣಗಳಿಗಾಗಿ, ದೀರ್ಘಕಾಲೀನ ಸಮಸ್ಯೆಯನ್ನು ತಪ್ಪಿಸಲು ಹೆಚ್ಚಿನ ಹಣಕಾಸು ನಿಧಿಯ ಅಭಿವೃದ್ಧಿಯನ್ನು ಕೈಗೊಳ್ಳುತ್ತಿದ್ದೇವೆ” ಎಂದು ಸೀತಾರಾಮನ್ ಉಲ್ಲೇಖಿಸಿದ್ದಾರೆ.
ಕ್ಯಾಬಿನೆಟ್ ಈ ಮಸೂದೆಯನ್ನು ತೆರವುಗೊಳಿಸಿದೆ, ಅದರ ಮೂಲಕ ನಾವು ಸಂಸ್ಥೆ ಮತ್ತು ಸಾಂಸ್ಥಿಕ ವ್ಯವಸ್ಥೆಯನ್ನು ಹೊಂದಿದ್ದೇವೆ, ಇದು ದೀರ್ಘಾವಧಿಯ ಹಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ “ಎಂದು ಹಣಕಾಸು ಸಚಿವರು ಹೇಳಿದರು.
ಉದ್ದೇಶಿತ ಡಿ ಎಫ್ ಐ(ಡೆವೆಲಪ್ಮೆಂಟ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಶನ್) ಶೇಕಡಾ 50 ರಷ್ಟು ಅಧಿಕೃತವಲ್ಲದ ನಿರ್ದೇಶಕರನ್ನು ಹೊಂದಿರುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಮತ್ತು ಡಿ ಎಫ್ ಐ ಹತ್ತು ವರ್ಷಗಳ ಕಾಲ ಕೆಲವು ತೆರಿಗೆ ಪ್ರಯೋಜನಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಹಣಕಾಸು ಅಭಿವೃದ್ಧಿ ಸಂಸ್ಥೆಗೆ ಕೆಲವು ಭದ್ರತೆಗಳನ್ನು ನೀಡಲು ಯೋಜನೆ ಮಾಡುತ್ತಿದೆ. ಈ ಮೂಲಕ ಹಣದ ವೆಚ್ಚವು ಕಡಿಮೆಯಾಗುತ್ತದೆ. “ಇವೆಲ್ಲವೂ ಡಿ ಎಫ್ ಐ ಆರಂಭಿಕ ಬಂಡವಾಳವನ್ನು ಹತೋಟಿಗೆ ತರಲು ಸಹಾಯ ಮಾಡುತ್ತದೆ ಭಾರತದ ಬಾಂಡ್ ಮಾರ್ಕೇಟ್ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಹಣಕಾಸು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಡಿ ಎಫ್ ಐ ಶೇ. 100 ರಷ್ಟು ಸರ್ಕಾರಿ ಮಾಲೀಕತ್ವದೊಂದಿಗೆ ಪ್ರಾರಂಭವಾಗಲಿದೆ ಮತ್ತು ಕ್ರಮೇಣ ಅದು ಶೇ. 26ಕ್ಕೆ ಇಳಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮ್ ತಿಳಿಸಿದ್ದಾರೆ.
ಓದಿ : ನೀತಾ ಅಂಬಾನಿಯನ್ನು ಸಂದರ್ಶಕ ಉಪನ್ಯಾಸಕಿಯಾಗಿ ನೇಮಿಸುವ ಪ್ರಸ್ತಾಪ:BHU ವಿದ್ಯಾರ್ಥಿಗಳ ಆಕ್ಷೇಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.