ಇನ್ಫೋಸಿಸ್‌ನಲ್ಲಿ ಹೊಸ ವಿವಾದ: ನಾರಾಯಣ ಮೂರ್ತಿ ಅಸಮಾಧಾನ
Team Udayavani, Apr 3, 2017, 11:31 AM IST
ಬೆಂಗಳೂರು : ಇನ್‌ಫೋಸಿಸ್ ಕಂಪೆನಿಯೊಳಗಿನ ವಿವಾದಗಳು ದುರದೃಷ್ಟವಶಾತ್ ಇನ್ನೂ ಮುಗಿದಂತೆ ಕಾಣುವುದಿಲ್ಲ.
ಚೀಫ್ ಆಪರೇಟಿಂಗ್ ಆಫೀಸರ್ (ಸಿಓಓ) ಯು ಬಿ ಪ್ರವೀಣ್ ರಾವ್ ಅವರಿಗೆ ಅಗಾಧ ಮೊತ್ತದ ಪರಿಹಾರ ಏರಿಕೆಗೆ ಕಳೆದ ಫೆಬ್ರವರಿ ತಿಂಗಳಲ್ಲಿ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿರುವುದನ್ನು ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಪ್ರಶ್ನಿಸಿದ್ದಾರೆ.
ನಿರ್ದೇಶಕರ ಮಂಡಳಿಯ ಈ ಕ್ರಮವು ಸರಿಯಾದುದಲ್ಲ ಮತ್ತು ಇದರಿಂದ ಕಂಪೆನಿಯ ನೌಕರರಲ್ಲಿ ಆಡಳಿತ ವರ್ಗ ಮತ್ತು ನಿರ್ದೇಶಕ ಮಂಡಳಿಯ ಮೇಲಿರುವ ವಿಶ್ವಾಸವು ಕೊರೆದುಹೋಗಲಿದೆ ಎಂದು ನಿನ್ನೆ ಭಾನುವಾರ ಹೇಳಿದ್ದಾರೆ.
ಪಿಟಿಐಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ನಾರಾಯಣ ಮೂರ್ತಿ ಅವರು ತಮ್ಮ ಅಭಿಪ್ರಾಯವನ್ನು ಹೊರಡೆಡಹಿದ್ದಾರೆ. ಇನ್‌ಫೋಸಿಸ್‌ನಲ್ಲಿ ಈಗಿರುವ ಕಳಪೆ ಆಡಳಿತ ಮಟ್ಟದ ಪರಿಸ್ಥಿತಿಯಲ್ಲಿ, ಉನ್ನತ ಆಡಳಿತೆಯ ಒಬ್ಬ ವ್ಯಕ್ತಿಗೆ ಮಂಡಳಿಯು ಈ ರೀತಿಯ ಔದಾರ್ಯ ತೋರಿಸಿದಲ್ಲಿ ಅದರಿಂದ ವ್ಯತ್ಯಸ್ತ ವೇತನದ ಗುರಿಯನ್ನು ಕಾಯ್ದುಕೊಳ್ಳುವುದು ಅಸಾಧ್ಯವಾದೀತು ಎಂದು ಮೂರ್ತಿ ನಿಷ್ಠುರವಾಗಿ ಹೇಳಿದ್ದಾರೆ.
ಕಂಪೆನಿಯ ಹೆಚ್ಚಿನ ನೌಕರರಿಗೆ ಶೇ.6ರಿಂದ ಶೇ.8ರಷ್ಟು ಪರಿಹಾರವನ್ನು ಕೊಟ್ಟಿರುವಾಗ ಉನ್ನತ ಆಡಳಿತೆಯ ಅಧಿಕಾರಿಗೆ ಶೇ.60ರಿಂದ ಶೇ.70ರಷ್ಟು ಪರಿಹಾರ ಮೊತ್ತವನ್ನು ಏರಿಸುವುದು ಸರಿಯಲ್ಲ ಎಂದು ಮೂರ್ತಿ ಹೇಳಿದ್ದಾರೆ.
“ಪ್ರವೀಣ್ ಬಗ್ಗೆ ನನಗೆ ತುಂಬಾ ಒಲುಮೆ ಇದೆ. ಆತನನ್ನು 1985ರಲ್ಲಿ ನಾನೇ ನೇಮಕ ಮಾಡಿದ್ದೆ. ಇನ್‌ಫೋಸಿಸ್‌ನಲ್ಲಿ ನಾನಿರುವಷ್ಟು ಕಾಲವೂ ಆತನನ್ನು ಬೆಳೆಸಿದ್ದೆ. ಆದರೆ ಅನಂತರ ಆತನನ್ನು ಬದಿಗೆ ಒತ್ತಲಾಯಿತು. 2013ರಲ್ಲಿ ನಾನು ಇನ್‌ಫೋಸಿಸ್ ಗೆ ಮರಳಿದಾಗ ಆತ ಕಂಪೆನಿಯ ಕಾರ್ಯಕಾರಿ ಮಂಡಳಿಯಲ್ಲಿಯೂ ಇರಲಿಲ್ಲ. ಬಳಿಕ ಆತನನ್ನು ಮಂಡಳಿಗೆ ಸೇರಿಸಿಕೊಳ್ಳಲಾಯಿತು; ವಿಶಾಲ್ ಸಿಕ್ಕಾ ಅವರನ್ನು ಕಂಪೆನಿಯ ಸಿಇಓ ಹುದ್ದೆಗೆ ನೇಮಕ ಮಾಡಿಕೊಂಡಾಗ ಪ್ರವೀಣ್ ಅವರನ್ನು ಸಿಓಓ ಹುದ್ದೆಗೆ ಏರಿಸಲಾಯಿತು. ಹಾಗಿರುವಾಗ ಆತನಿಗೆ ಈಗ ಶೇ.60-70ರಷ್ಟು ಪರಿಹಾರ ಏರಿಸಿರುವ ಬಗೆಗಿನ ನನ್ನ ಆಕ್ಷೇಪಕ್ಕೂ ವೈಯಕ್ತಿಕವಾಗಿ ಪ್ರವೀಣ್‌ಗೂ ಯಾವುದೇ ಸಂಬಂಧವಿಲ್ಲ’ ಎಂದು ಮೂರ್ತಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.