ಸತತ 14ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ: ಈಗ ಎಷ್ಟು ಬೆಲೆ ಹೆಚ್ಚಳವಾಗಿದೆ?
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 57 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಗೆ 62 ಪೈಸೆ ಏರಿಕೆಯಾಗಿದೆ
Team Udayavani, Jun 20, 2020, 10:26 AM IST
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಶನಿವಾರವೂ ಏರಿಕೆಯಾಗಿದ್ದು, ಇದರೊಂದಿಗೆ ತೈಲ ಬೆಲೆ ಸತತವಾಗಿ 14ನೇ ದಿನ ಹೆಚ್ಚಳವಾದಂತಾಗಿದೆ. ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 51ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 61 ಪೈಸೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 78.88 ರೂಪಾಯಿ ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 77.67 ರೂಪಾಯಿಗೆ ಏರಿಕೆಯಾಗಿದೆ. ಜೂನ್ 9ರಿಂದ ಈವರೆಗೆ ಸತತ 14ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 57 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಗೆ 62 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.44 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 73.86 ರೂಪಾಯಿ ಆಗಿದೆ ಎಂದು ವರದಿ ಹೇಳಿದೆ.
Petrol and diesel prices at Rs 78.88/litre (increase by Re 0.51) and Rs 77.67/litre (increase by Re 0.61), respectively in Delhi today. Price of petrol & diesel has increased by Rs 5.88/litre & Rs 6.50/litre respectively since 9th June in the national capital. pic.twitter.com/H8EsN02msX
— ANI (@ANI) June 20, 2020
ಕಳೆದ ಎರಡು ವಾರಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ ಏಳು ರೂಪಾಯಿ ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 85.72 ರೂಪಾಯಿ, ಡೀಸೆಲ್ ಗೆ ಪ್ರತಿ ಲೀಟರ್ ಗೆ 75.54 ರೂಪಾಯಿ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.