ದೀಪಾವಳಿ ವೇಳೆಗೆ ಪೆಟ್ರೋಲ್, ಡೀಸಿಲ್ ಬೆಲೆ ಇಳಿಕೆ : ಪ್ರಧಾನ್
Team Udayavani, Sep 19, 2017, 3:49 PM IST
ಅಮೃತ್‌ಸರ : ಗಗನ ಮುಖೀಯಾಗಿರುವ ಪೆಟ್ರೋಲ್ ಮತ್ತು ಡೀಸಿಲ್ ಬೆಲೆ ಮುಂದಿನ ತಿಂಗಳು ದೀಪಾವಳಿ ಒಳಗಾಗಿ ಇಳಿಯಲಿವೆ ಎಂಬ ಸಿಹಿ ಸುದ್ದಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇಂಧನ ಬೆಲೆ ದಿನವಹಿ ಬದಲಾವಣೆಗೆ ಒಳಪಡುವ ವ್ಯವಸ್ಥೆಯನ್ನು ಈಚೆಗೆ ಕೇಂದ್ರ ಸರಕಾರ ಜಾರಿಗೆ ತಂದ ಬಳಿಕದಲ್ಲಿ ಪೆಟ್ರೋಲ್ ಮತ್ತು ಡೀಸಿಲ್ ಬೆಲೆ ಈಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿರುವುದಕ್ಕೆ ದೇಶಾದ್ಯಂತ ಟೀಕೆ, ಖಂಡನೆ, ಅಸಮಾಧಾನ ವ್ಯಕ್ತವಾಗಿತ್ತು.
ಅಮರಿಕದ ಮೇಲೆ ಈಚೆಗೆ ಎರಗಿದ ಪ್ರಳಯಾಂತಕರಾರಿ ಚಂಡಮಾರುತದಿಂದಾಗಿ ಅಲ್ಲಿನ ತೈಲ ಸಂಸ್ಕರಣ ಘಟಕಗಳು ವ್ಯಾಪಕ ಹಾನಿಗೆ ಗುರಿಯಾಗಿದ್ದವು; ಪರಿಣಾಮವಾಗಿ ತೈಲ ಉತ್ಪಾದನೆ ಶೇ.13ರಷ್ಟು ಕುಸಿದಿತ್ತು. ಹಾಗಾಗಿ ತೈಲ ಪೂರೈಕೆ ಕುಸಿದು ಬೇಡಿಕೆ ಏರಿತ್ತು; ಪರಿಣಾಮವಾಗಿ ತೈಲ ಬೆಲೆ ಏರಿತ್ತು ಎಂದು ಈಚೆಗಷ್ಟೇ ಕ್ಯಾಬಿನೆಟ್‌ದರ್ಜೆ ಸಚಿವರಾಗಿ ಭಡ್ತಿ ಪಡೆದು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ಪಡೆದ ಪ್ರಧಾನ್ ಹೇಳಿದರು.
ಏಕ ದೇಶ – ಏಕ ತೆರಿಗೆ ಕ್ರಮದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಗೆ (ಜಿಎಸ್‌ಟಿಗೆ) ಪೆಟ್ರೋಲ್ ಮತ್ತು ಡೀಸಿಲ್ ಅನ್ನು ಯಾವಾಗ ಒಳಪಡಿಸುತ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರಧಾನ್, “ಅದನ್ನು ಬೇಗನೆ ಜಿಎಸ್‌ಟಿ ಅಡಿ ತರಲಾಗುವುದೆಂದು ಹಾರೈಸುತ್ತೇನೆ; ಅದರಿಂದ ಇಂಧನ ಗ್ರಾಹಕರಿಗೆ ಮಹತ್ತರ ಲಾಭ ಸಿಗುವಂತಾಗುತ್ತದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.