![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 13, 2019, 5:00 PM IST
ವಾಷಿಂಗ್ಟನ್: 2019-20ರ ಹಣಕಾಸು ವರ್ಷದಲ್ಲಿ ಜಿಡಿಪಿ ಸತತವಾಗಿ ಕುಸಿಯುತ್ತಾ ಬಂದಿದೆ. ಇದರ ಪರಿಣಾಮವಾಗಿ ಅಟೋಮೊಬೈಲ್ ವಲಯ ಹಾಗೂ ಸೇವಾ ಕ್ಷೇತ್ರದಲ್ಲಿ ಕುಂಠಿತ ಪ್ರಗತಿ ದಾಖಲಾಗುತ್ತಿದೆ. ಇದೀಗ ವಿಶ್ವಬ್ಯಾಂಕ್ ಸಹ ಭಾರತದ ಅಭಿವೃದ್ಧಿ ಸೂಚ್ಯಾಂಕವನ್ನು ಬಿಡುಗಡೆ ಮಾಡಿದ್ದು, ಈ ದರ ಈ ವರ್ಷ ಶೇ. 6ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ತನ್ನ ವರದಿಯಲ್ಲಿ ಉಲ್ಲೇಖೀಸಿದೆ.
ಸತತವಾಗಿ ಭಾರತದ ಆರ್ಥಿಕ ಅಭಿವೃದ್ಧಿ ಸೂಚ್ಯಾಂಕ ಕುಸಿತ ಕಂಡಿರುವ ಬಗ್ಗೆ ವಿಶ್ವಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ. 2017 18ರಲ್ಲಿ ಶೇ. 7.2ರಷ್ಟಿದ್ದ ಈ ದರ 6.8ಕ್ಕೆ ಕುಸಿದಿತ್ತು. ಈ ಬಾರಿ ಅದು ಶೇ. 6ಕ್ಕೆ ಕುಸಿತ ಕಂಡಿದೆ. ಇವೆಲ್ಲದರ ನಡುವೆ ಭಾರತದ ಅಭಿವೃದ್ಧಿ ದರ ನಿಧಾನವಾಗಿ ಚೇತರಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಮುಂಬರುವ 2021ರಲ್ಲಿ ಶೇ. 6.9 ಹಾಗೂ 2022ಕ್ಕೆ ಜಿಡಿಪಿ ದರ ಶೇ. 7.2ಕ್ಕೆ ಏರಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಸದ್ಯ ದೇಶದಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದರೂ ಕ್ರಮೇಣ ಚೇತರಿಕೆಯ ಹಾದಿ ಕಂಡುಕೊಳ್ಳಲಿದೆ. ಇದು ದೀರ್ಘ ಅವಧಿಯಲ್ಲಿ ಫಲ ಕೊಡಲಿದೆ ಎಂದು ಹೇಳಿದೆ. ಸದ್ಯದ ಆರ್ಥಿಕ ಇಕ್ಕಟ್ಟಿಗೆ ಜಿಎಸ್ಟಿ ಹಾಗೂ ನೋಟು ಅಮಾನ್ಯಿಕರಣ ಕಾರಣವಾಗಿದೆ. ಇವೆರಡು ಜತೆಯಾಗಿ ಜಾರಿಯಾದ ಕಾರಣ ಗ್ರಾಮೀಣ ಆರ್ಥಿಕತೆಗೆ ಭಾರೀ ಪ್ರಮಾಣದ ಪೆಟ್ಟು ಬಿದ್ದಿದೆ ಎಂಬ ಅಂಶವನ್ನು ವಿಶ್ವ ಬ್ಯಾಂಕ್ ತೆರೆದಿಟ್ಟಿದೆ.
ಸದ್ಯದ ಕಠಿನ ವಿತ್ತೀಯ ಪರಿಸ್ಥಿತಿಯನ್ನು ಹತೋಟಿಗೆ ತರಲು ಕೇಂದ್ರ ಸರಕಾರ ಹಲವಾರು ಕ್ರಮ, ಉಪಕ್ರಮಗಳನ್ನು ಕೈಗೊಂಡಿತ್ತು. ಇದಕ್ಕೆ ಪೂರಕವಾಗಿ ಆರ್ಬಿಐ ತನ್ನ ರೆಪೋ ದರವನ್ನು ಸತತವಾಗಿ ಇಳಿಸುತ್ತಾ ಬಂದಿತ್ತು. ಅದರೆ ಅಟೋಮೊಬೈಲ್ ಕ್ಷೇತ್ರ ಮೇಲೆ ಏಳಲೇ ಇಲ್ಲ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.