ಜನರಲ್ ಮೋಟರ್ಸ್:ಸಿಎಫ್ಒ ಆಗಿ ಭಾರತೀಯ ಮೂಲದ ದಿವ್ಯಾ ಸೂರ್ಯ ದೇವರ
Team Udayavani, Jun 15, 2018, 11:57 AM IST
ಹ್ಯೂಸ್ಟನ್: ಅಮೆರಿಕದ ಜನಪ್ರಿಯ ಕಾರು ತಯಾರಕ ಕಂಪನಿ ಜನರಲ್ ಮೋಟರ್ಸ್ (ಜಿಎಂ)ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ)ಯಾಗಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ದಿವ್ಯಾ ಸೂರ್ಯ ದೇವರ (39) ಅವರನ್ನು ನೇಮಿಸಲಾಗಿದೆ.
ಅಮರಿಕದ ಮೋಟಾರು ವಾಹನ ಉತ್ಪಾ ದನಾ ಸಂಸ್ಥೆಗಳ ಇತಿಹಾಸದಲ್ಲಿಯೇ ಈ ನೇಮಕ ಮೊದಲನೇಯದ್ದಾಗಿದೆ. ಚೆನ್ನೈನಲ್ಲಿ ಜನಿಸಿದ ದಿವ್ಯಾ ಸೂರ್ಯದೇವರ ಜಿ.ಎಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮೇರಿ ಬಾರ್ರಾ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ. ಗಮನಾರ್ಹ ಅಂಶವೆಂದರೆ ಜನರಲ್ ಮೋಟರ್ಸ್‌ನ (ಜಿ.ಎಂ.)ನ ಸಿಇಒ ಮೇರಿ ಅವರೂ ಕೂಡ 2014ರಲ್ಲಿ ನೇಮಕಗೊಂಡಿದ್ದು, ಅಟೊಮೊಬೈಲ್ ಕಂಪನಿಯೊಂದರ ಸಿಇಒ ಹುದ್ದೆಯನ್ನು ನಿರ್ವಹಿಸುವ ಏಕೈಕ ಮಹಿಳೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ವಾಹನ ಉತ್ಪಾದನಾ ಕಂಪನಿ ಯೊಂದರ ಸಿಇಒ ಮತ್ತು ಸಿಎಫ್ಒ ಹುದ್ದೆ ಗಳನ್ನು ಮಹಿಳೆಯರೇ ನಿರ್ವಹಿಸುವಂತಾಗಿ ರು ವುದು ಸಾಧನೆಯೇ ಸರಿ.
ಇತ್ತೀಚೆಗಷ್ಟೇ ಜಿಎಂನ ಪುನಾರಚನೆಯಲ್ಲಿ ದಿವ್ಯಾ ಪ್ರಮುಖ ಪಾತ್ರ ವಹಿಸಿದ್ದರು. ಐರೋಪ್ಯ ಒಕ್ಕೂಟದಲ್ಲಿರುವ ಅಂಗಸಂಸ್ಥೆ ಒಪೆಲ್‌ನಿಂದ ಬಂಡವಾಳ ಹಿಂಪಡೆಯುವ ಪ್ರಕ್ರಿಯೆ, ಸೆಲ್ಫ್ ಡ್ರೈವಿಂಗ್ ವಾಹನ ಸ್ಟಾರ್ಟಪ್ “ಕ್ರೂéಸ್’ ಅನ್ನು ಖರೀದಿ ಮಾಡು ವುದರಲ್ಲಿ, ಜಪಾನ್‌ನ ಸ್ಟಾಫ್ಟ್ ಬ್ಯಾಂಕ್ ಜಿಎಂನಲ್ಲಿ 225 ಕೋಟಿ ಡಾಲರ್ ಮೊತ್ತದಷ್ಟು ಹೂಡಿಕೆ ಮಾಡುವಲ್ಲಿಯೂ ದಿವ್ಯಾ ಪ್ರಮುಖ ಪಾತ್ರ ವಹಿಸಿದ್ದರು. ಇದರ ಜತೆಗೆ ಕಂಪನಿಯ ಸಿಇಒ ಮತ್ತು ಮುಖ್ಯ ಹೂಡಿಕೆ ಅಧಿಕಾರಿಯಾಗಿ 2013 ರಿಂದ 2017ರ ವರೆಗೆ ಕರ್ತವ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.