ಮತ್ತೆ ಹೊಳಪು ಪಡೆದ ಚಿನ್ನ : 250 ರೂ. ಜಿಗಿತ, 10 ಗ್ರಾಮಿಗೆ 31,550
Team Udayavani, Sep 29, 2018, 3:47 PM IST
ಹೊಸದಿಲ್ಲಿ : ನಿರಂತರ ಮೂರು ದಿನಗಳ ಕಾಲ ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಇಂದು ಮತ್ತೆ ತನ್ನ ಹೊಳಪನ್ನು ಪಡೆದುಕೊಂಡಿದೆ. ಹತ್ತು ಗ್ರಾಂ ಶುದ್ಧ ಚಿನ್ನದ ಬೆಲೆ ಇಂದು ಶನಿವಾರ 250 ರೂ. ಜಿಗಿತವನ್ನು ಕಂಡು 31,550 ರೂ. ತಲುಪಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆ ಅವಕಾಶವನ್ನು ಕಂಡಿರುವ ಚಿನ್ನದ ಉದ್ಯಮಿಗಳು ವ್ಯಾಪಕ ಖರೀದಿಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದಿದೆ.
ಚಿನ್ನವನ್ನು ಅನುಸರಿಸಿ ಬೆಳ್ಳಿ ಕೂಡ ಇಂದು ಕೆಜಿಗೆ 1,100 ರೂ. ಜಿಗಿತವನ್ನು ಕಂಡು 39,000 ರೂ. ಗಡಿಯನ್ನು ದಾಟಿ ಕೆಜಿಗೆ 39,100 ರೂ. ತಲುಪಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ಟಂಕಸಾಲೆಯವರಿಂದ ಬಂದ ಉತ್ತಮ ಖರೀದಿಯ ಪರಿಣಾಮವಾಗಿ ಬೆಳ್ಳಿ ಗಮನಾರ್ಹ ಏರಿಕೆಯನ್ನು ಕಂಡಿತು.
ಸಾಗರೋತ್ತರ ಮಾರುಕಟ್ಟೆಯಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿ ಬಂದದ್ದೇ ಚಿನ್ನ ಮತ್ತು ಬೆಳ್ಳಿಯ ಧಾರಣೆಯಲ್ಲಿ ಜಿಗಿತ ಕಂಡು ಬರಲು ಕಾರಣವಾಯಿತೆಂದು ಉದ್ಯಮ ಪರಿಣತರು ಹೇಳಿದ್ದಾರೆ.
ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ನಿನ್ನೆ ಶುಕ್ರವಾರ ಚಿನ್ನದ ಧಾರಣೆ ಶೇ.0.83ರಷ್ಟು ಏರಿದ ಪರಿಣಾಮವಾಗಿ ಔನ್ಸ್ ಚಿನ್ನದ ಬೆಲೆ 1,192.20 ಡಾಲರ್ಗೆ ಏರಿತು. ಬೆಳ್ಳಿ ಕೂಡ ಶೇ.2.85ರ ಏರಿಕೆಯನ್ನು ದಾಖಲಿಸಿ ಔನ್ಸ್ಗೆ 14.64 ಡಾಲರ್ಗೆ ಜಿಗಿಯಿತು.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಶೇ. 99.9 ಮತ್ತು ಶೇ.99.5 ಪರಿಶುದ್ಧತೆಯ 10 ಗ್ರಾಂ ಚಿನ್ನವು ತಲಾ 250 ರೂ. ಜಿಗಿತವನ್ನು ಕಂಡು ಅನುಕ್ರಮವಾಗಿ 31,550 ಮತ್ತು 31,400 ರೂ.ಗೆ ಏರಿತು. ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಚಿನ್ನ ಗ್ರಾಮಿಗೆ 425 ರೂ. ಕುಸಿತವನ್ನು ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.