2020-21ನೇ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಶೇ. 22.58 ಏರಿಕೆ..!
Team Udayavani, Apr 20, 2021, 10:29 AM IST
ನವ ದೆಹಲಿ : ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿಯೂ ದೇಶದಲದಲಿ ಈ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೇ, ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿದೆ.
2020-21 ನೇ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಪ್ರಮಾಣ ಶೇಕಡಾ. 22.58ರಷ್ಟು ಏರಿಕೆಯಾಗಿದೆ. ಆ ಮೂಲಕ 2020-21ರಲ್ಲಿ ಭಾರತಕ್ಕೆ ಒಟ್ಟು 34.6 ಬಿಲಿಯನ್ ಅಂದರೆ ಸುಮಾರು 2.54 ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ಚಿನ್ನದ ಆಮದು ಆದಂತಾಗಿದೆ.
ಇನ್ನು, 2019-20ರ ಹಣಕಾಸು ವರ್ಷದಲ್ಲಿ ಸುಮಾರು 28.23 ಬಿಲಿಯನ್ ಅಂದರೆ, 2 ಲಕ್ಷ ಕೋಟಿ ರೂ. ನಷ್ಟು ಹಳದಿ ಲೋಹ ಆಮದಾಗಿತ್ತು.
ಓದಿ : ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !
ಆದರೇ, 2020-21 ನೇ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಪ್ರಮಾಣ ಏರಿಕೆ ಕಂಡಿದ್ದರೇ, ಬೆಳ್ಳಿಯ ಪ್ರಮಾಣ ತೀವ್ರ ಇಳಿಕೆಯಾಗಿದೆ.
ಹಣಕಾಸು ವರ್ಷದಲ್ಲಿ ಬೆಳ್ಳಿ ಆಮದು ಶೇಕಡಾ 71 ರಷ್ಟಿದ್ದ ಇಳಿದು ಸುಮಾರು 791 ದಶಲಕ್ಷ ಡಾಲರ್ ಗೆ ತಲುಪಿದೆ. ಆದಾಗ್ಯೂ, ಚಿನ್ನದ ಆಮದಿನಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯ ಹೊರತಾಗಿಯೂ, 2020-21ರ ವರ್ಷದಲ್ಲಿ ದೇಶದ ವ್ಯಾಪಾರ ಕೊರತೆ 98.56 ಬಿಲಿಯನ್ ಆಗಿದ್ದು, 2019-20ರಲ್ಲಿ 161.3 ಬಿಲಿಯನ್ ಆಗಿತ್ತು.
ಈ ಬಗ್ಗೆ ಬಿಜೆನೆಸ್ ವರ್ಲ್ಡ್ ಗೆ ಪ್ರತಿಕ್ರಿಯಿಸಿದ ಜೆಮ್ ಮತ್ತು ಜ್ಯುವೆಲ್ಲರಿ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಅಧ್ಯಕ್ಷ ಕಾಲಿನ್ ಶಾ, ”ದೇಶೀಯ ಬೇಡಿಕೆ ಹೆಚ್ಚುತ್ತಿರುವ ಕಾರಣ ಚಿನ್ನದ ಆಮದು ಹೆಚ್ಚುತ್ತಿದೆ” ಎಂದು ಹೇಳಿದ್ದಾರೆ.
ಅಲ್ಲದೆ, ಮುಂಬರುವ ದಿನಗಳಲ್ಲಿ ಅಕ್ಷಯ ತೃತೀಯ ಮತ್ತು ವಿವಾಹದ ಋತುವಿನಿಂದಾಗಿ, ಚಿನ್ನದ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಿಎಡಿ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಸಿಎಡಿ ಎಂದರೆ ವಿದೇಶಿ ಕರೆನ್ಸಿಯ ಒಳಹರಿವು ಮತ್ತು ಹೊರಹರಿವಿನ ನಡುವಿನ ವ್ಯತ್ಯಾಸವಾಗಿದೆ ವರದಿ ತಿಳಿಸಿದೆ.
ಓದಿ : ಲಾಕ್‌ಡೌನ್ ಆತಂಕ ಹಿನ್ನೆಲೆ: ಕೃಷ್ಣ ಟಾಕೀಸ್ ಪ್ರದರ್ಶನ ಬಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.